Mahashivratri 01 March 2022

📿🔱𝐌𝐚𝐡𝐚𝐬𝐡𝐢𝐯𝐫𝐚𝐭𝐫𝐢🔱📿

𝘚𝘩𝘪𝘷𝘢𝘳𝘢𝘵𝘳𝘪 𝘪𝘴 𝘤𝘦𝘭𝘦𝘣𝘳𝘢𝘵𝘦𝘥 𝘦𝘷𝘦𝘳𝘺 𝘺𝘦𝘢𝘳 𝘥𝘶𝘳𝘪𝘯𝘨 𝘵𝘩𝘦 𝘢𝘶𝘵𝘶𝘮𝘯 𝘴𝘦𝘢𝘴𝘰𝘯 𝘤𝘢𝘭𝘭𝘦𝘥 𝘴𝘩𝘪𝘴𝘩𝘪𝘳𝘢 𝘳𝘪𝘵𝘶, 𝘪𝘯 𝘵𝘩𝘦 𝘮𝘰𝘯𝘵𝘩 𝘯𝘢𝘮𝘦𝘥 𝘔𝘢𝘨𝘩𝘢 𝘢𝘯𝘥 𝘰𝘯 𝘵𝘩𝘦 𝘧𝘰𝘶𝘳𝘵𝘦𝘦𝘯𝘵𝘩 𝘥𝘢𝘺 𝘰𝘧 𝘵𝘩𝘦 𝘧𝘢𝘥𝘪𝘯𝘨 𝘱𝘩𝘢𝘴𝘦 𝘰𝘧 𝘵𝘩𝘦 𝘮𝘰𝘰𝘯 (𝘬𝘳𝘪𝘴𝘩𝘯𝘢 𝘱𝘢𝘬𝘴𝘩𝘢), 𝘸𝘩𝘪𝘤𝘩 𝘧𝘢𝘭𝘭𝘴 𝘣𝘦𝘵𝘸𝘦𝘦𝘯 𝘵𝘩𝘦 𝘮𝘰𝘯𝘵𝘩𝘴 𝘰𝘧 𝘔𝘢𝘨𝘩- 𝘗𝘩𝘢𝘭𝘨𝘶𝘯𝘢, 𝘢𝘤𝘤𝘰𝘳𝘥𝘪𝘯𝘨 𝘵𝘰 𝘵𝘩𝘦 𝘩𝘪𝘯𝘥𝘶 𝘤𝘢𝘭𝘦𝘯𝘥𝘦𝘳 𝘺𝘦𝘢𝘳.

‘𝐓𝐚𝐦𝐚𝐬𝐨𝐦𝐚 𝐉𝐲𝐨𝐭𝐡𝐢𝐫𝐠𝐚𝐦𝐚𝐲𝐚’ 𝘢𝘴 𝘵𝘰𝘭𝘥 𝘪𝘯 𝘵𝘩𝘦 𝘴𝘤𝘳𝘪𝘱𝘵𝘶𝘳𝘦𝘴, 𝘚𝘩𝘪𝘷𝘢𝘳𝘢𝘵𝘳𝘪, 𝘪𝘴 𝘵𝘩𝘦 𝘱𝘦𝘳𝘪𝘰𝘥 𝘸𝘩𝘪𝘤𝘩 𝘤𝘶𝘭𝘭𝘴 𝘵𝘩𝘦 𝘪𝘨𝘯𝘰𝘳𝘢𝘯𝘤𝘦 𝘰𝘧 𝘥𝘢𝘳𝘬𝘯𝘦𝘴𝘴 𝘸𝘪𝘵𝘩𝘪𝘯 𝘶𝘴 𝘢𝘯𝘥 𝘩𝘦𝘭𝘱 𝘶𝘴 𝘮𝘰𝘷𝘦 𝘵𝘰𝘸𝘢𝘳𝘥𝘴 𝘵𝘩𝘦 𝘭𝘪𝘨𝘩𝘵 𝘰𝘧 𝘬𝘯𝘰𝘸𝘭𝘦𝘥𝘨𝘦. 𝘖𝘯 𝘵𝘩𝘪𝘴 𝘥𝘢𝘺 𝘵𝘩𝘦 𝘸𝘩𝘰𝘭𝘦 𝘢𝘵𝘮𝘰𝘴𝘱𝘩𝘦𝘳𝘦, 𝘴𝘩𝘢𝘭𝘭 𝘣𝘦 𝘧𝘪𝘭𝘭𝘦𝘥 𝘸𝘪𝘵𝘩 𝘵𝘩𝘦 𝘱𝘳𝘢𝘪𝘴𝘦 𝘢𝘯𝘥 𝘩𝘺𝘮𝘯𝘴 𝘰𝘯 𝘓𝘰𝘳𝘥 𝘴𝘩𝘪𝘷𝘢 𝘢𝘯𝘥 𝘪𝘵 𝘸𝘰𝘯’𝘵 𝘣𝘦 𝘸𝘳𝘰𝘯𝘨, 𝘪𝘧 𝘸𝘦 𝘤𝘰𝘯𝘴𝘪𝘥𝘦𝘳 𝘵𝘩𝘪𝘴 𝘥𝘢𝘺, 𝘢𝘴 𝘵𝘩𝘦 𝘰𝘯𝘦 𝘵𝘩𝘢𝘵 𝘳𝘦𝘮𝘰𝘷𝘦𝘴 𝘢𝘭𝘭 𝘰𝘶𝘳 𝘮𝘪𝘴𝘦𝘳𝘪𝘦𝘴 𝘢𝘯𝘥 𝘣𝘳𝘪𝘯𝘨𝘴 𝘢𝘣𝘶𝘯𝘥𝘢𝘯𝘵 𝘩𝘢𝘱𝘱𝘪𝘯𝘦𝘴𝘴 𝘪𝘯𝘵𝘰 𝘰𝘶𝘳 𝘭𝘪𝘷𝘦𝘴.

01.03.2022 𝐓𝐮𝐞𝐬𝐝𝐚𝐲, 𝐌𝐚𝐡𝐚𝐬𝐡𝐢𝐯𝐫𝐚𝐭𝐫𝐢.

‘𝐀𝐫𝐝𝐡𝐚𝐧𝐚𝐚𝐫𝐞𝐬𝐡𝐰𝐚𝐫𝐚’ 𝐀𝐥𝐚𝐧𝐤𝐚𝐚𝐫𝐚 𝐭𝐨 𝐨𝐮𝐫 𝐛𝐞𝐥𝐨𝐯𝐞𝐝 𝐁𝐞𝐥𝐨𝐯𝐞𝐝 𝐆𝐨𝐝𝐝𝐞𝐬𝐬 𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢.

𝘈𝘴 𝘱𝘦𝘳 𝘵𝘩𝘦 𝘳𝘦𝘲𝘶𝘦𝘴𝘵 𝘰𝘧 𝘵𝘩𝘦 𝘥𝘦𝘷𝘰𝘵𝘦𝘦𝘴, 𝘓𝘰𝘳𝘥 𝘚𝘩𝘪𝘷𝘢 𝘨𝘳𝘢𝘯𝘵𝘴 𝘢𝘭𝘭 𝘵𝘩𝘦 𝘦𝘹𝘲𝘶𝘪𝘴𝘪𝘵𝘦𝘴 , 𝘭𝘪𝘣𝘦𝘳𝘢𝘵𝘪𝘰𝘯, 𝘢 𝘱𝘭𝘢𝘤𝘦 𝘪𝘯 𝘵𝘩𝘦 𝘩𝘦𝘢𝘷𝘦𝘯 𝘵𝘰 𝘩𝘪𝘴 𝘥𝘦𝘷𝘰𝘵𝘦𝘦𝘴. 𝘏𝘦 𝘪𝘴 𝘰𝘮𝘯𝘪𝘱𝘳𝘦𝘴𝘦𝘯𝘵, 𝘱𝘶𝘳𝘦 𝘤𝘰𝘯𝘴𝘤𝘪𝘰𝘶𝘴𝘯𝘦𝘴𝘴, 𝘤𝘢𝘭𝘮 𝘯 𝘤𝘰𝘮𝘱𝘰𝘴𝘦𝘥 𝘰𝘯𝘦. 𝘏𝘦 𝘪𝘴 𝘵𝘩𝘦 𝘣𝘢𝘴𝘦 𝘧𝘰𝘳 𝘢𝘭𝘭 𝘵𝘩𝘦 𝘭𝘪𝘷𝘪𝘯𝘨 𝘦𝘯𝘵𝘪𝘵𝘪𝘦𝘴 𝘪𝘯 𝘵𝘩𝘪𝘴 𝘦𝘢𝘳𝘵𝘩. 𝘞𝘪𝘵𝘩 𝘵𝘩𝘦 𝘮𝘦𝘳𝘦 𝘵𝘩𝘰𝘶𝘨𝘩𝘵 𝘱𝘳𝘰𝘤𝘦𝘴𝘴, 𝘩𝘦 𝘪𝘴 𝘤𝘢𝘱𝘢𝘣𝘭𝘦 𝘰𝘧 𝘤𝘳𝘦𝘢𝘵𝘪𝘯𝘨, 𝘴𝘶𝘴𝘵𝘢𝘪𝘯𝘪𝘯𝘨 𝘢𝘯𝘥 𝘥𝘦𝘴𝘵𝘳𝘰𝘺𝘪𝘯𝘨 𝘵𝘩𝘪𝘴 𝘸𝘩𝘰𝘭𝘦 𝘸𝘰𝘳𝘭𝘥. 𝘏𝘦 𝘪𝘴 𝘢𝘭𝘭 𝘱𝘦𝘳𝘷𝘢𝘴𝘪𝘷𝘦 𝘢𝘯𝘥 𝘢 𝘰𝘮𝘯𝘪𝘱𝘰𝘵𝘦𝘯𝘵 𝘰𝘯𝘦 𝘵𝘰𝘰.

𝘞𝘪𝘵𝘩𝘰𝘶𝘵 𝘴𝘩𝘪𝘷𝘢 𝘯𝘰𝘵𝘩𝘪𝘯𝘨 𝘤𝘢𝘯 𝘣𝘦 𝘢𝘤𝘩𝘪𝘦𝘷𝘦𝘥 𝘣𝘺 𝘶𝘴. 𝘞𝘪𝘵𝘩𝘰𝘶𝘵 𝘩𝘪𝘮, 𝘵𝘩𝘦𝘳𝘦 𝘪𝘴 𝘯𝘰 𝘨𝘰𝘰𝘥 𝘧𝘰𝘳𝘵𝘶𝘯𝘦 𝘵𝘰 𝘢𝘯𝘺𝘰𝘯𝘦 𝘰𝘧 𝘶𝘴. 𝘚𝘩𝘪𝘷𝘢’𝘴 𝘨𝘳𝘢𝘤𝘦 𝘪𝘴 𝘵𝘩𝘦 𝘤𝘢𝘶𝘴𝘦 𝘰𝘧 𝘢𝘭𝘭 𝘨𝘰𝘰𝘥 𝘧𝘰𝘳𝘵𝘶𝘯𝘦. ‘𝐒𝐡𝐢𝐯𝐚’ 𝘮𝘦𝘢𝘯𝘴 𝘢𝘶𝘴𝘱𝘪𝘤𝘪𝘰𝘶𝘴 𝘰𝘯𝘦. 𝘐𝘵 𝘪𝘴 𝘣𝘺 𝘩𝘪𝘴 𝘨𝘳𝘢𝘤𝘦 𝘪𝘵𝘴𝘦𝘭𝘧, 𝘸𝘦 𝘸𝘪𝘭𝘭 𝘣𝘦 𝘢𝘣𝘭𝘦 𝘵𝘰 𝘢𝘵𝘵𝘢𝘪𝘯 𝘩𝘢𝘱𝘱𝘪𝘯𝘦𝘴𝘴, 𝘱𝘳𝘰𝘴𝘱𝘦𝘳𝘪𝘵𝘺, 𝘱𝘦𝘢𝘤𝘦 𝘢𝘯𝘥 𝘧𝘢𝘮𝘦 𝘩𝘦𝘳𝘦 𝘢𝘯𝘥 𝘪𝘯 𝘰𝘵𝘩𝘦𝘳 𝘱𝘭𝘢𝘤𝘦𝘴 𝘵𝘰𝘰. 𝘏𝘦 𝘪𝘴 𝘬𝘯𝘰𝘸𝘯 𝘣𝘺 𝘮𝘢𝘯𝘺 𝘯𝘢𝘮𝘦𝘴, 𝘴𝘶𝘤𝘩 𝘢𝘴 𝘐𝘴𝘩𝘸𝘢𝘳𝘢, 𝘔𝘢𝘩𝘢𝘥𝘦𝘷𝘢, 𝘝𝘢𝘮𝘢𝘥𝘦𝘷𝘢, 𝘚𝘩𝘢𝘯𝘬𝘢𝘳𝘢, 𝘙𝘶𝘥𝘳𝘢, 𝘚𝘢𝘥𝘺𝘰𝘫𝘢𝘵𝘩𝘢 𝘦𝘵𝘤.

𝘔𝘢𝘩𝘢 𝘚𝘩𝘪𝘷𝘢𝘳𝘢𝘵𝘳𝘪 𝘪𝘴 𝘢 𝘴𝘢𝘤𝘳𝘦𝘥 𝘥𝘢𝘺 𝘥𝘦𝘷𝘰𝘵𝘦𝘥 𝘵𝘰 𝘵𝘩𝘦 𝘥𝘦𝘷𝘰𝘵𝘦𝘦𝘴 𝘸𝘩𝘰 𝘸𝘰𝘳𝘴𝘩𝘪𝘱𝘴 𝘵𝘩𝘦 𝘮𝘢𝘯, 𝘸𝘩𝘰 𝘵𝘳𝘢𝘷𝘦𝘭𝘴 𝘣𝘺 𝘴𝘪𝘵𝘵𝘪𝘯𝘨 𝘰𝘯 𝘯𝘢𝘯𝘥𝘪 𝘸𝘪𝘵𝘩 𝘧𝘦𝘳𝘷𝘰𝘳 𝘢𝘯𝘥 𝘥𝘦𝘷𝘰𝘵𝘪𝘰𝘯 𝘵𝘩𝘳𝘰𝘶𝘨𝘩𝘰𝘶𝘵 𝘵𝘩𝘦 𝘥𝘢𝘺. 𝘚𝘩𝘪𝘷𝘢𝘳𝘢𝘵𝘳𝘪 𝘪𝘴 𝘢 𝘷𝘦𝘳𝘺 𝘧𝘢𝘷𝘰𝘳𝘪𝘵𝘦 𝘥𝘢𝘺 𝘧𝘰𝘳 𝘒𝘢𝘪𝘭𝘢𝘴𝘢𝘸𝘢𝘴𝘪 𝘗𝘢𝘳𝘢𝘮𝘦𝘴𝘩𝘸𝘢𝘳𝘢. 𝘚𝘩𝘪𝘷𝘢, 𝘯𝘦𝘷𝘦𝘳 𝘭𝘦𝘵𝘴 𝘥𝘰𝘸𝘯 𝘰𝘯 𝘵𝘩𝘦 𝘣𝘦𝘭𝘪𝘦𝘧𝘴 𝘰𝘧 𝘩𝘪𝘴 𝘣𝘦𝘭𝘪𝘦𝘷𝘦𝘳𝘴, 𝘸𝘩𝘰 𝘩𝘢𝘴 𝘤𝘰𝘮𝘱𝘭𝘦𝘵𝘦 𝘧𝘢𝘪𝘵𝘩 𝘢𝘯𝘥 𝘥𝘦𝘷𝘰𝘵𝘪𝘰𝘯 𝘰𝘯 𝘩𝘪𝘮.

𝘔𝘢𝘩𝘢 𝘚𝘩𝘪𝘷𝘢𝘳𝘢𝘵𝘳𝘪 𝘪𝘴 𝘢 𝘴𝘢𝘤𝘳𝘦𝘥 𝘥𝘢𝘺 𝘥𝘦𝘥𝘪𝘤𝘢𝘵𝘦𝘥 𝘵𝘰 𝘓𝘰𝘳𝘥 𝘗𝘢𝘳𝘢𝘮𝘦𝘴𝘩𝘸𝘢𝘳𝘢 𝘢𝘯𝘥 𝘪𝘵 𝘪𝘴 𝘰𝘶𝘳 𝘱𝘳𝘪𝘮𝘦 𝘥𝘶𝘵𝘺 𝘵𝘰 𝘸𝘰𝘳𝘴𝘩𝘪𝘱 𝘩𝘪𝘮 𝘵𝘩𝘳𝘰𝘶𝘨𝘩 𝘨𝘳𝘦𝘢𝘵 𝘥𝘦𝘷𝘰𝘵𝘪𝘰𝘯, 𝘦𝘢𝘳𝘯𝘦𝘴𝘵 𝘧𝘢𝘴𝘵𝘪𝘯𝘨 𝘢𝘯𝘥 𝘴𝘶𝘳𝘳𝘦𝘯𝘥𝘦𝘳𝘪𝘯𝘨 𝘰𝘶𝘳𝘴𝘦𝘭𝘷𝘦𝘴 𝘤𝘰𝘮𝘱𝘭𝘦𝘵𝘦𝘭𝘺 𝘢𝘵 𝘩𝘪𝘴 𝘥𝘪𝘷𝘪𝘯𝘦 𝘧𝘦𝘦𝘵. 𝘛𝘩𝘦 𝘧𝘳𝘶𝘪𝘵𝘴 𝘰𝘧 𝘚𝘩𝘪𝘷𝘢𝘳𝘢𝘵𝘳𝘪 𝘸𝘰𝘳𝘴𝘩𝘪𝘱 𝘪𝘴 𝘮𝘦𝘯𝘵𝘪𝘰𝘯𝘦𝘥 𝘪𝘯 𝘵𝘩𝘦 ‘𝘚𝘬𝘢𝘯𝘥𝘢𝘱𝘶𝘳𝘢𝘯𝘢’ 𝘢𝘴 𝘧𝘰𝘭𝘭𝘰𝘸𝘴 :-

 

𝑰𝒏 𝒕𝒉𝒆 𝒎𝒐𝒏𝒕𝒉 𝒐𝒇 𝑴𝒂𝒈𝒉𝒂, 𝒇𝒐𝒖𝒓𝒕𝒆𝒆𝒏𝒕𝒉 𝒅𝒂𝒚 𝒐𝒇 𝒕𝒉𝒆 𝒇𝒂𝒅𝒊𝒏𝒈 𝒑𝒉𝒂𝒔𝒆 𝒐𝒇 𝒕𝒉𝒆 𝒎𝒐𝒐𝒏 (𝒌𝒓𝒊𝒔𝒉𝒏𝒂 𝒑𝒂𝒌𝒔𝒉𝒂), 𝒕𝒉𝒆 𝒐𝒏𝒆 𝒘𝒉𝒐 𝒘𝒐𝒓𝒔𝒉𝒊𝒑𝒔 𝑷𝒂𝒓𝒂𝒔𝒉𝒊𝒗𝒂 𝒘𝒊𝒕𝒉 𝒓𝒊𝒈𝒐𝒓𝒐𝒖𝒔 𝒇𝒂𝒔𝒕𝒊𝒏𝒈 𝒂𝒏𝒅 𝒅𝒆𝒗𝒐𝒕𝒊𝒐𝒏 𝒘𝒊𝒍𝒍 𝒈𝒆𝒕 𝒂𝒍𝒍 𝒕𝒉𝒆𝒊𝒓 𝒅𝒆𝒔𝒊𝒓𝒆𝒅 𝒓𝒆𝒔𝒖𝒍𝒕𝒔.

𝘖𝘯 𝘵𝘩𝘪𝘴 𝘢𝘶𝘴𝘱𝘪𝘤𝘪𝘰𝘶𝘴 𝘰𝘤𝘤𝘢𝘴𝘴𝘪𝘰𝘯, 𝘔𝘢𝘩𝘢𝘴𝘩𝘪𝘷𝘢𝘳𝘢𝘵𝘳𝘪 𝘴𝘩𝘢𝘭𝘭 𝘣𝘦 𝘤𝘦𝘭𝘦𝘣𝘳𝘢𝘵𝘦𝘥 𝘪𝘯 𝘵𝘩𝘦 𝘔𝘢𝘯𝘨𝘢𝘭𝘢𝘥𝘦𝘷𝘪 𝘵𝘦𝘮𝘱𝘭𝘦, 𝘪𝘯𝘴𝘵𝘢𝘭𝘭𝘦𝘥 𝘣𝘺 𝘭𝘰𝘳𝘥 𝘗𝘢𝘳𝘢𝘴𝘩𝘶𝘳𝘢𝘮𝘢 𝘢𝘯𝘥 𝘰𝘶𝘳 𝘣𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘮𝘮𝘢 𝘤𝘢𝘯 𝘣𝘦 𝘴𝘦𝘦𝘯 𝘢𝘥𝘰𝘳𝘯𝘪𝘯𝘨 𝘵𝘩𝘦 𝘧𝘰𝘳𝘮 𝘰𝘧 ‘𝘈𝘳𝘥𝘩𝘯𝘢𝘳𝘪𝘴𝘩𝘸𝘢𝘳𝘢 𝘰𝘳 𝘈𝘳𝘥𝘩𝘯𝘢𝘳𝘪𝘴𝘩𝘸𝘢𝘳𝘪’ 𝘢𝘭𝘢𝘯𝘬𝘢𝘢𝘳.

𝘈𝘭𝘭 𝘰𝘧 𝘶𝘴 𝘢𝘳𝘦 𝘧𝘰𝘳𝘵𝘶𝘯𝘢𝘵𝘦 𝘦𝘯𝘰𝘶𝘨𝘩 𝘵𝘰 𝘸𝘪𝘵𝘯𝘦𝘴𝘴 𝘵𝘩𝘦 𝘣𝘦𝘢𝘶𝘵𝘺 𝘢𝘯𝘥 𝘨𝘭𝘰𝘳𝘺 𝘰𝘧 𝘰𝘶𝘳 𝘣𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴, 𝘸𝘩𝘰 𝘪𝘴 𝘱𝘭𝘦𝘢𝘴𝘦𝘥 𝘵𝘰 𝘣𝘦 𝘢𝘴𝘴𝘰𝘤𝘪𝘢𝘵𝘦𝘥 𝘸𝘪𝘵𝘩 𝘓𝘰𝘳𝘥 𝘚𝘩𝘪𝘷𝘢 𝘪𝘯 𝘵𝘩𝘦 𝘈𝘳𝘥𝘩𝘢𝘯𝘢𝘳𝘪𝘴𝘩𝘸𝘢𝘳𝘢 / 𝘈𝘳𝘥𝘩𝘢𝘯𝘢𝘳𝘪𝘴𝘩𝘸𝘢𝘳𝘪 𝘥𝘦𝘤𝘰𝘳𝘢𝘵𝘪𝘰𝘯 𝘵𝘰𝘮𝘰𝘳𝘳𝘰𝘸 𝘰𝘯 𝘵𝘩𝘦 𝘰𝘤𝘤𝘢𝘴𝘴𝘪𝘰𝘯 𝘰𝘧 𝘔𝘢𝘩𝘢𝘴𝘩𝘪𝘷𝘢𝘳𝘢𝘵𝘳𝘪.

𝖳𝗁𝖾 𝖠𝗋𝖽𝗁𝗇𝖺𝗋𝗂𝗌𝗁𝗐𝖺𝗋𝖺 𝗉𝗋𝗂𝗇𝖼𝗂𝗉𝗅𝖾 𝗂𝗌 𝗍𝗈 𝗂𝗇𝖿𝗈𝗋𝗆 𝗎𝗌 𝖺𝗅𝗅 𝗍𝗁𝖺𝗍 𝗍𝗁𝖾 𝖼𝗋𝖾𝖺𝗍𝗂𝗈𝗇 𝖺𝗇𝖽 𝖼𝗋𝖾𝖺𝗍𝗈𝗋 𝖺𝗋𝖾 𝗈𝗇𝖾 𝖺𝗇𝖽 𝗍𝗁𝖾 𝗌𝖺𝗆𝖾. 𝖨𝗍 𝗂𝗌 𝗍𝗁𝖾 𝖻𝖾𝖺𝗎𝗍𝗂𝖿𝗎𝗅 𝗎𝗇𝗂𝗌𝗈𝗇 𝗈𝖿 𝖲𝗁𝗂𝗏𝖺 𝖺𝗇𝖽 𝖲𝗁𝖺𝗄𝗍𝗂 𝗂𝗇 𝗈𝗇𝖾 𝖻𝗈𝖽𝗒. 𝖳𝗈 𝗐𝗂𝗍𝗇𝖾𝗌𝗌 𝖫𝗈𝗋𝖽 𝗌𝗁𝗂𝗏𝖺 𝖺𝗇𝖽 𝖲𝗁𝖺𝗄𝗍𝗂 𝗍𝗈𝗀𝖾𝗍𝗁𝖾𝗋 𝗂𝗇 𝗋𝖾𝖺𝗅𝗂𝗍𝗒, 𝖦𝗈𝖽𝖽𝖾𝗌𝗌 𝗁𝖺𝗌 𝖻𝖾𝖺𝗎𝗍𝗂𝖿𝗂𝖾𝖽 𝗍𝗁𝖾 𝖻𝖾𝖺𝗎𝗍𝗒 𝗈𝖿 𝖫𝗈𝗋𝖽 𝖲𝗁𝗂𝗏𝖺 𝖻𝗒 𝗃𝗈𝗂𝗇𝗂𝗇𝗀 𝗁𝗂𝗌 𝖻𝗈𝖽𝗒 𝗍𝗈𝗐𝖺𝗋𝖽𝗌 𝗁𝗂𝗌 𝗅𝖾𝖿𝗍 𝖺𝗇𝖽 𝗈𝗇 𝗍𝗁𝖾 𝗈𝗍𝗁𝖾𝗋 𝗁𝖺𝗇𝖽, 𝗍𝗈𝗐𝖺𝗋𝖽𝗌 𝗍𝗁𝖾 𝗋𝗂𝗀𝗁𝗍 𝗌𝗂𝖽𝖾 (𝗋𝗂𝗀𝗁𝗍), 𝖯𝖺𝗋𝖺𝗌𝗁𝗂𝗏𝖺 𝖻𝖾𝖼𝖺𝗆𝖾 𝗂𝗇𝗁𝖾𝗋𝖾𝗇𝗍 𝗂𝗇 𝖦𝗈𝖽𝖽𝖾𝗌𝗌 𝖺𝗌 𝖠𝗋𝖽𝗁𝗇𝖺𝗋𝗂𝗌𝗁𝗐𝖺𝗋𝖺. 𝖳𝗁𝗂𝗌 𝗎𝗇𝗂𝗌𝗈𝗇 𝗈𝖿 𝖲𝗁𝗂𝗏𝖺 𝖺𝗇𝖽 𝗉𝖺𝗋𝗏𝖺𝗍𝗁𝗂 𝗂𝗌 𝗍𝗁𝖾 𝗆𝖺𝗂𝗇 𝖺𝗍𝗍𝗋𝖺𝖼𝗍𝗂𝗏𝖾 𝖻𝖾𝖺𝗎𝗍𝗒 𝗈𝖿 𝗍𝗈𝗆𝗈𝗋𝗋𝗈𝗐’𝗌 𝖲𝗁𝗂𝗏𝖺𝗋𝖺𝗍𝗋𝗂 𝖿𝖾𝗌𝗍𝗂𝗏𝖺𝗅 𝖺𝗇𝖽 𝖦𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂 𝗂𝗌 𝖺𝖽𝗈𝗋𝗇𝖾𝖽 𝗐𝗂𝗍𝗁 𝗍𝗁𝗂𝗌 𝖺𝗅𝗍𝖺𝗋 𝗈𝗇𝗅𝗒 𝗈𝗇𝖼𝖾 𝖺 𝗒𝖾𝖺𝗋 𝗈𝗇 𝗍𝗁𝗂𝗌 𝗌𝗉𝖾𝖼𝗂𝖺𝗅 𝗈𝖼𝖼𝖺𝗌𝗌𝗂𝗈𝗇 𝗈𝗇𝗅𝗒.

𝘞𝘦 𝘢𝘭𝘭 𝘴𝘵𝘳𝘰𝘯𝘨𝘭𝘺 𝘣𝘦𝘭𝘪𝘷𝘦 𝘢𝘯𝘥 𝘩𝘢𝘷𝘦 𝘧𝘢𝘪𝘵𝘩 𝘵𝘩𝘢𝘵 𝘚𝘩𝘢𝘯𝘬𝘢𝘳𝘢 𝘪𝘴 𝘢 𝘷𝘦𝘳𝘺 𝘮𝘦𝘳𝘤𝘪𝘧𝘶𝘭 𝘭𝘰𝘳𝘥 𝘢𝘯𝘥 𝘩𝘦 𝘥𝘰𝘦𝘴 𝘯𝘰𝘵 𝘥𝘦𝘯𝘺 𝘢𝘯𝘺 𝘰𝘧 𝘵𝘩𝘦 𝘳𝘦𝘲𝘶𝘦𝘴𝘵𝘴 𝘰𝘧 𝘩𝘪𝘴 𝘣𝘦𝘭𝘰𝘷𝘦𝘥 𝘥𝘦𝘷𝘰𝘵𝘦𝘦𝘴. 𝘈𝘴 𝘥𝘦𝘴𝘤𝘳𝘪𝘣𝘦𝘥 𝘪𝘯 𝘵𝘩𝘦 𝘚𝘩𝘢𝘴𝘵𝘳𝘢𝘴 𝘰𝘳 𝘷𝘦𝘥𝘪𝘤 𝘴𝘤𝘳𝘪𝘱𝘵𝘶𝘳𝘦𝘴, 𝘚𝘩𝘪𝘷𝘢 𝘪𝘴 𝘧𝘰𝘯𝘥 𝘰𝘧 𝘈𝘣𝘩𝘪𝘴𝘩𝘦𝘬𝘢. 𝘞𝘪𝘵𝘩 𝘨𝘳𝘦𝘢𝘵 𝘳𝘦𝘴𝘱𝘦𝘤𝘵 𝘢𝘯𝘥 𝘥𝘦𝘷𝘰𝘵𝘪𝘰𝘯, 𝘈𝘣𝘩𝘪𝘴𝘩𝘦𝘬𝘢 𝘥𝘰𝘯𝘦 𝘵𝘰 𝘭𝘰𝘳𝘥 𝘚𝘩𝘪𝘷𝘢 𝘸𝘪𝘭𝘭 𝘣𝘦 𝘢𝘤𝘤𝘦𝘱𝘵𝘦𝘥 𝘣𝘺 𝘩𝘪𝘮 𝘢𝘯𝘥 𝘪𝘯 𝘵𝘩𝘦 𝘯𝘦𝘹𝘵 𝘮𝘰𝘮𝘦𝘯𝘵, 𝘩𝘦 𝘴𝘩𝘢𝘭𝘭 𝘧𝘶𝘭𝘭𝘧𝘪𝘭𝘭 𝘢𝘭𝘭 𝘰𝘶𝘳 𝘥𝘦𝘴𝘪𝘳𝘦𝘴. 𝘒𝘦𝘦𝘱𝘪𝘯𝘨 𝘵𝘩𝘪𝘴 𝘪𝘯 𝘮𝘪𝘯𝘥, 𝘰𝘯 𝘵𝘩𝘪𝘴 𝘢𝘶𝘴𝘱𝘪𝘤𝘪𝘰𝘶𝘴 𝘥𝘢𝘺 𝘰𝘧 𝘚𝘩𝘪𝘷𝘢𝘳𝘢𝘵𝘳𝘪, 𝘵𝘰 𝘱𝘭𝘦𝘢𝘴𝘦 𝘭𝘰𝘳𝘥 𝘚𝘩𝘪𝘷𝘢, 𝘙𝘶𝘥𝘳𝘢𝘣𝘩𝘪𝘴𝘩𝘦𝘬𝘩𝘢𝘮 𝘸𝘪𝘭𝘭 𝘣𝘦 𝘱𝘦𝘳𝘧𝘰𝘳𝘮𝘦𝘥 𝘵𝘰 𝘰𝘶𝘳 𝘣𝘦𝘭𝘰𝘷𝘦𝘥 𝘎𝘰𝘥𝘥𝘦𝘴𝘴, 𝘦𝘢𝘳𝘭𝘺 𝘪𝘯 𝘵𝘩𝘦 𝘮𝘰𝘳𝘯𝘪𝘯𝘨.

𝘛𝘩𝘪𝘴 𝘪𝘴 𝘰𝘯𝘦 𝘰𝘧 𝘵𝘩𝘦 𝘮𝘰𝘴𝘵 𝘮𝘦𝘮𝘰𝘳𝘢𝘣𝘭𝘦 𝘮𝘰𝘮𝘦𝘯𝘵𝘴 𝘧𝘰𝘳 𝘶𝘴 𝘵𝘰 𝘭𝘰𝘰𝘬 𝘧𝘰𝘳𝘸𝘢𝘳𝘥 𝘵𝘰 𝘵𝘩𝘪𝘴 𝘥𝘢𝘺 𝘰𝘧 𝘵𝘩𝘦 𝘺𝘦𝘢𝘳, 𝘵𝘰 𝘸𝘪𝘵𝘯𝘦𝘴𝘴 𝘰𝘶𝘳 𝘣𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴 𝘪𝘯 𝘵𝘩𝘦 𝘈𝘳𝘥𝘩𝘯𝘢𝘳𝘪𝘴𝘩𝘸𝘢𝘳𝘢 𝘧𝘰𝘳𝘮 𝘰𝘯𝘤𝘦 𝘪𝘯 𝘵𝘩𝘪𝘴 𝘸𝘩𝘰𝘭𝘦 𝘺𝘦𝘢𝘳.🤩

𝑨𝒔 𝒕𝒉𝒆 𝒄𝒖𝒓𝒕𝒂𝒊𝒏𝒔 𝒊𝒏 𝒕𝒉𝒆 𝒎𝒂𝒊𝒏 𝒔𝒂𝒏𝒄𝒕𝒖𝒎 𝒔𝒂𝒏𝒄𝒕𝒐𝒓𝒖𝒎 𝒊𝒔 𝒓𝒆𝒎𝒐𝒗𝒆𝒅 𝒊𝒏 𝒕𝒉𝒆 𝒆𝒂𝒓𝒍𝒚 𝒉𝒐𝒖𝒓𝒔 𝒐𝒇 𝒕𝒐𝒎𝒐𝒓𝒓𝒐𝒘, 𝒎𝒂𝒚 𝒐𝒖𝒓 𝒍𝒊𝒗𝒆𝒔 𝒃𝒆 𝒃𝒍𝒆𝒔𝒔𝒆𝒅 𝒘𝒊𝒕𝒉 𝒕𝒉𝒆 𝒅𝒂𝒓𝒔𝒉𝒂𝒏 𝒐𝒇 𝒕𝒉𝒆 𝒂𝒓𝒅𝒉𝒂𝒏𝒂𝒓𝒆𝒆𝒔𝒉𝒘𝒂𝒓𝒂 𝒇𝒐𝒓𝒎 𝒐𝒇 𝒐𝒖𝒓 𝒃𝒆𝒍𝒐𝒗𝒆𝒅 𝑮𝒐𝒅𝒅𝒆𝒔𝒔, 𝒘𝒉𝒆𝒓𝒆 𝒊𝒏 𝑳𝒐𝒓𝒅 𝒔𝒉𝒊𝒗𝒂 𝒄𝒂𝒏 𝒃𝒆 𝒔𝒆𝒆𝒏 𝒉𝒐𝒍𝒅𝒊𝒏𝒈 𝒂 𝒕𝒓𝒊𝒅𝒆𝒏𝒕 𝒊𝒏 𝒉𝒊𝒔 𝒉𝒂𝒏𝒅 𝒘𝒊𝒕𝒉 𝒂 𝒎𝒂𝒕𝒕𝒆𝒅 𝒉𝒂𝒊𝒓 𝒍𝒐𝒄𝒌 𝒘𝒊𝒕𝒉 𝒕𝒉𝒆 𝒄𝒓𝒆𝒔𝒆𝒏𝒕 𝒎𝒐𝒐𝒏 𝒘𝒐𝒓𝒆𝒏 𝒂𝒔 𝒅𝒆𝒄𝒐𝒓𝒂𝒕𝒊𝒐𝒏 𝒂𝒃𝒐𝒗𝒆 𝒊𝒕, 𝒔𝒕𝒂𝒏𝒅𝒊𝒏𝒈 𝒕𝒐 𝒕𝒉𝒆 𝒓𝒊𝒈𝒉𝒕 𝒐𝒇 𝒉𝒊𝒔 𝒃𝒆𝒍𝒐𝒗𝒆𝒅 𝒘𝒊𝒇𝒆 𝒈𝒐𝒅𝒅𝒆𝒔𝒔 𝒔𝒉𝒂𝒌𝒕𝒉𝒊 𝒂𝒏𝒅 𝒐𝒖𝒓 𝒃𝒆𝒍𝒐𝒗𝒆𝒅 𝒈𝒐𝒅𝒅𝒆𝒔𝒔 𝒎𝒆𝒓𝒓𝒊𝒍𝒚 𝒓𝒆𝒋𝒐𝒊𝒄𝒊𝒏𝒈 𝒕𝒐𝒘𝒂𝒓𝒅𝒔 𝒕𝒉𝒆 𝒍𝒆𝒇𝒕 𝒐𝒇 𝒉𝒆𝒓 𝒃𝒆𝒍𝒐𝒗𝒆𝒅 𝒉𝒖𝒔𝒃𝒂𝒏𝒅, 𝒌𝒆𝒆𝒑𝒊𝒏𝒈 𝒉𝒆𝒓 𝒉𝒂𝒏𝒅 𝒊𝒏 𝒗𝒂𝒓𝒂𝒅𝒂 𝒎𝒖𝒅𝒓𝒂, 𝒃𝒍𝒆𝒔𝒔𝒊𝒏𝒈 𝒂𝒍𝒍 𝒉𝒆𝒓 𝒅𝒆𝒗𝒐𝒕𝒆𝒆𝒔 𝒘𝒉𝒐 𝒔𝒖𝒓𝒓𝒆𝒏𝒅𝒆𝒓 𝒕𝒉𝒆𝒎𝒔𝒆𝒍𝒗𝒆𝒔 𝒕𝒐 𝒉𝒆𝒓.

𝘋𝘢𝘪𝘭𝘺 𝘔𝘢𝘩𝘢𝘱𝘰𝘰𝘫𝘢 𝘪𝘴 𝘱𝘦𝘳𝘧𝘰𝘳𝘮𝘦𝘥 𝘵𝘰 𝘰𝘶𝘳 𝘣𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴 𝘢𝘵 8.30 𝘱𝘮 𝘢𝘯𝘥 𝘢𝘧𝘵𝘦𝘳 𝘔𝘢𝘩𝘢 𝘗𝘰𝘰𝘫𝘢 𝘴𝘩𝘢𝘭𝘭 𝘣𝘦 𝘱𝘦𝘳𝘧𝘰𝘳𝘮𝘦𝘥, 𝘰𝘯 𝘵𝘩𝘦 𝘰𝘤𝘤𝘢𝘴𝘴𝘪𝘰𝘯 𝘰𝘧 𝘚𝘩𝘪𝘷𝘢𝘳𝘢𝘵𝘳𝘪 𝘢𝘵 𝘴𝘩𝘢𝘳𝘱 9𝘱𝘮.

𝘋𝘶𝘦 𝘵𝘰 𝘰𝘶𝘳 𝘨𝘰𝘰𝘥 𝘥𝘦𝘦𝘥𝘴 𝘥𝘰𝘯𝘦 𝘣𝘺 𝘶𝘴 𝘪𝘯 𝘰𝘶𝘳 𝘱𝘳𝘦𝘷𝘪𝘰𝘶𝘴 𝘭𝘪𝘷𝘦𝘴, 𝘔𝘢𝘺 𝘸𝘦 𝘣𝘦 𝘢𝘣𝘭𝘦 𝘵𝘰 𝘸𝘪𝘵𝘯𝘦𝘴𝘴 𝘵𝘩𝘦 𝘔𝘢𝘯𝘫𝘶𝘯𝘢𝘵𝘩𝘢 𝘧𝘰𝘳𝘮 𝘰𝘧 𝘰𝘶𝘳 𝘣𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴 𝘢𝘯𝘥 𝘧𝘶𝘭𝘭𝘧𝘪𝘭𝘭 𝘢𝘭𝘭 𝘰𝘶𝘳 𝘳𝘪𝘨𝘩𝘵𝘧𝘶𝘭 𝘥𝘦𝘴𝘪𝘳𝘦𝘴. 𝘔𝘢𝘺 𝘵𝘩𝘦 𝘳𝘶𝘭𝘦𝘳 𝘰𝘧 𝘛𝘢𝘶𝘭𝘢𝘷𝘢 𝘭𝘢𝘯𝘥, 𝘧𝘶𝘭𝘧𝘪𝘭𝘭 𝘢𝘭𝘭 𝘰𝘶𝘳 𝘸𝘪𝘴𝘩𝘦𝘴 𝘢𝘯𝘥 𝘴𝘢𝘷𝘦 𝘶𝘴 𝘢𝘭𝘭 𝘧𝘳𝘰𝘮 𝘰𝘶𝘳 𝘩𝘢𝘳𝘥𝘴𝘩𝘪𝘱𝘴 𝘢𝘯𝘥 𝘣𝘳𝘪𝘯𝘨 𝘩𝘢𝘱𝘱𝘪𝘯𝘦𝘴𝘴 𝘢𝘯𝘥 𝘱𝘳𝘰𝘴𝘱𝘦𝘳𝘪𝘵𝘺 𝘪𝘯𝘵𝘰 𝘰𝘶𝘳 𝘭𝘪𝘷𝘦𝘴. 𝘔𝘢𝘺 𝘢𝘭𝘭 𝘵𝘩𝘦 𝘥𝘪𝘧𝘧𝘪𝘤𝘶𝘭𝘵𝘪𝘦𝘴 𝘵𝘩𝘢𝘵 𝘩𝘢𝘴 𝘩𝘪𝘵 𝘵𝘩𝘪𝘴 𝘸𝘰𝘳𝘭𝘥 𝘣𝘦 𝘥𝘦𝘴𝘵𝘳𝘰𝘺𝘦𝘥 𝘢𝘯𝘥 𝘭𝘦𝘵 𝘩𝘢𝘱𝘱𝘪𝘯𝘦𝘴𝘴 𝘢𝘯𝘥 𝘱𝘦𝘢𝘤𝘦 𝘱𝘳𝘦𝘷𝘢𝘪𝘭 𝘪𝘯 𝘦𝘢𝘤𝘩 𝘢𝘯𝘥 𝘦𝘷𝘦𝘳𝘺 𝘤𝘰𝘳𝘯𝘦𝘳 𝘰𝘧 𝘵𝘩𝘪𝘴 𝘸𝘰𝘳𝘭𝘥.👏👏

✨🔱° ಮಹಾ ಶಿವರಾತ್ರಿ°🔱✨

ದಿನಾಂಕ : 01.03.2022 ಮಂಗಳವಾರ ಮಹಾ ಶಿವರಾತ್ರಿ. ಶ್ರೀ ಮಂಗಳಾದೇವಿ ಅಮ್ಮನಿಗೆ ‘ಅರ್ಧನಾರೀಶ್ವರ/ರಿ ಅಲಂಕಾರ.’

“ಶಿವಂ ಭದ್ರಂ ಕಲ್ಯಾಣಂ ಮಂಗಳಂ ಶುಭದಂ” ಎಂದಿದೆ ಅಮರಕೋಶ. ಭಕ್ತರ ಕೋರಿಕೆಯಂತೆ ಮನೋಭಿಷ್ಟ ಸ್ವರ್ಗ ಮೋಕ್ಷವನ್ನು ಕರುಣಿಸುವವ ಉಮಾಮಹೇಶ್ವರ ಸರ್ವ ಜಗದ್ವ್ಯಾಪಿಯಾದ ಸತ್ಯಶುದ್ಧ-ಚೈತನ್ಯ ಶಾಂತ ಸ್ವರೂಪಿಯೇ ಪರಮೇಶ್ವರನು. ಜಗತ್ತಿನ ಸಮಸ್ತ ಜೀವರಾಶಿಗಳಿಗೆ ಶಿವನೇ ಆಧಾರ ಭೂತನು. ಸಂಕಲ್ಪ ಮಾತ್ರದಿಂದಲೇ ಸೃಷ್ಠಿ ಸ್ಥಿತಿ ಲಯವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರುವ ಶಿವನು ಸರ್ವ ವ್ಯಾಪಕ ಹಾಗು ಸರ್ವ ಶಕ್ತ್ಯನು.

ಈಶ್ವರನಿಲ್ಲದೆ ಇಷ್ಟಾರ್ಥ ಸಿದ್ಧಿಸದು, ಭವನಿಲ್ಲದೆ ಭಾಗ್ಯದೊರಕದು. ಸಕಲ ಸೌಭಾಗ್ಯಗಳಿಗೂ ಶಿವನ ಕೃಪೆಯೇ ಕಾರಣ. ‘ಶಿವ’ನೆಂದರೆ ಮಂಗಳನೆಂದೇ ಅರ್ಥ. ಈಶ್ವರ, ಮಹಾದೇವ, ವಾಮದೇವ, ಶಂಕರ, ರುದ್ರ, ಸದ್ಯೋಜಾತ ಹೀಗೆ ಅಸಂಖ್ಯಾತ ನಾಮಗಳಿಂದ ಕರೆಯಲ್ಪಡುವ ಈಶ್ವರ ದೇವರ ಶಿವಾನುಗ್ರಹದಿಂದಲೇ ಇಹ- ಪರದಲ್ಲಿ ಸುಖ ಶಾಂತಿ ಕೀರ್ತಿ ಸಂಪತ್ತುಗಳು ಪ್ರಾಪ್ತವಾಗುವುದು.

🌸✨”ಶಿವಃ ಶೇತೇ ಅನೇನ ಅಸ್ಮಿನ್ವಾ
ಶಿವಮಸ್ಯಾಸ್ತೀತಿ
ಶಿವಯತೀತಿ ಶಿವಃ..✨🌸

ಅರ್ಥಾತ್ ಶಿವ ಎಂಬ ದಿವ್ಯ ನಾಮವು ಸಕಲ ಕಲ್ಯಾಣ ಗುಣಗಳ ಪ್ರತೀಕ. ಮಂಗಳಪ್ರದವು ಶುಭಪ್ರದವೂ ಆದ ಅದ್ವಯ ಅಂಕಿತವು ಸರ್ವ ಕಾಲದಲ್ಲೂ ಕಲ್ಯಾಣಕಾರಕವಾಗಿಯೆ ಇಹುದು. ಇದು ಶ್ವಃಶ್ರೇಯಸ, ಶುಭಮಯ ಮತ್ತು ಕ್ಷೇಮಕಾರಕ. ಅಜ್ಞಾನವನ್ನು ಅಳಿಸಿ ಸುಜ್ಞಾನವನ್ನು ಬೆಳಗಿಸುವ ದಯಾಸಿಂಧು ಕೈಲಾಸವಾಸಿ ಪರಮೇಶ್ವರನು.

ತನ್ನ ನಂಬಿ ಬಂದ ಭಕ್ತರ ಅಭೀಷ್ಟಗಳಿಗೆ ಎಂದಿಗೂ ನಿರಾಸೆ ಮಾಡದ ‘ನಂದಿ ವಾಹನ’ನನ್ನು ಶೃದ್ಧಾ ಭಕ್ತಿ ಪೂರ್ವಕವಾಗಿ ದಿನವಿಡೀ ಉಪವಾಸಾದಿ ಜಾಗರಣೆಗಳಿಂದ ಪೂಜಿಸಿ ಆರಾಧಿಸುವ ಪುಣ್ಯ ದಿನವೇ ‘ಮಹಾ ಶಿವರಾತ್ರಿ’.
ಕೈಲಾಸವಾಸಿ ಪರಮೇಶ್ವರನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ.

ಭಕ್ತಿ, ಶ್ರದ್ಧೆಯಿಂದ ಉಪವಾಸಾದಿ ಜಾಗರಣೆಯ ಮೂಲಕ ನಮ್ಮನ್ನೇ ನಾವು ಪರಮೇಶ್ವರನಿಗೆ ಅರ್ಪಿಸಿ ಕೊಳ್ಳುವ ಒಂದು ಪರಮ ಪವಿತ್ರವಾದ ದಿವಸ ಮಹಾ ಶಿವರಾತ್ರಿ.
ಶಿವರಾತ್ರಿಯ ಪೂಜಾ ಫಲವನ್ನು’ಸ್ಕಾಂದಪುರಾಣ’ ದಲ್ಲಿ ಈ ರೀತಿಯಾಗಿ ತಿಳಿಸಾಗಿದೆ.

ಮಾಘೇ ಕೃಷ್ಣ ಚತುರ್ದಶ್ಯಾಂ ಯಃ ಶಿವಂ ಸಂಶಿತವ್ರತಃ । ಮುಮುಕ್ಷುಃ ಪೂಜಯೇನ್ನಿತ್ಯಂ ಸ ಲಭೇದೀಪ್ಸಿತ ಫಲಮ್।।

ಅರ್ಥಾತ್ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನ ಯಾರು ಕಠಿಣವಾದ ಸಂಕಲ್ಪದಿಂದ ಮೋಕ್ಷಾಪೇಕ್ಷಿಯಾಗಿ ಪರಶಿವನನ್ನು ಪೂಜಿಸುತ್ತಾರೋ ಅವರು ಬಯಸಿದ ವಾಂಛಿತ ಫಲವನ್ನೇಲ್ಲಾ ಪಡೆಯುತ್ತಾರೆ ಎಂದು ತಾತ್ಪರ್ಯ!.

ಪ್ರತೀ ಸಂವತ್ಸರದ ಶಿಶಿರ ಋತುವಿನ, ಮಾಘ ಮಾಸ, ಕೃಷ್ಣಪಕ್ಷದ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಮಾಘ-ಫಾಲ್ಗುಣ ಮಾಸಗಳ ನಡುವೆ ಬರುವ ಕೃಷ್ಣ ಚತುರ್ದಶಿಯ ದಿನವೇ ‘ ಮಹಾಶಿವರಾತ್ರಿ’.

ಶಿವರಾತ್ರಿಯು ‘ಶಿಶಿರ ಋತುವಿನ ಫಾಲ್ಗುಣ (ಮಾಘ) ಮಾಸದ ಕೃಷ್ಣಪಕ್ಷ ಬಹುಳ ಚತುರ್ದಶಿಯಂದು ಕೂಡಿ ಬರುತ್ತದೆ. ‘ತಮಸೋಮ ಜ್ಯೋತಿರ್ಗಮಯ’ ಎನ್ನುವಂತೆ ಅಜ್ಞಾನದಿಂದ ಸುಜ್ಞಾನದತ್ತ ತಮಸ್ಸಿನಿಂದ ಬೆಳಕಿನತ್ತ ಒಯ್ಯುವ ಇದೇ ಶಿವರಾತ್ರಿಯ ಪ್ರಸನ್ನ ಕಾಲವು ನಾಳಿನ ಗುರುವಾರದಂದು ಸನ್ನಿಹಿತಗೊಂಡಿದ್ದು ಎಲ್ಲೆಡೆ ಕರುಣಾಮಯನಾದ ಶ್ರೀ ಮಂಜುನಾಥ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ ಆರಾಧಿಸಲಾಗುತ್ತದೆ.
ದುಃಖವನ್ನು ನೀಗಿಸಿ ಸುಖದ ಫಲವನ್ನು ನೀಡುವ ರಾತ್ರಿಯೇ ಶಿವರಾತ್ರಿ ಎಂದರೆ ತಪ್ಪಾಗದು.

ಇದೇ ಪ್ರಯುಕ್ತ ಭಾರ್ಗವ ಪ್ರತಿಷ್ಟಿತ ಕ್ಷೇತ್ರವಾದ
ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಸಂಭ್ರಮವು ಮೇಳೈಸಲಿದೆ.
ವಿಶೇಷವಾಗಿ ನಾಳಿನ ದಿನದಂದು ಮಂಗಳಮ್ಮನನ್ನು ಅರ್ಧನಾರೀಶ್ವರ/ಅರ್ಧನಾರೀಶ್ವರಿ ಅಲಂಕಾರದಲ್ಲಿ ಕಣ್ತುಂಬಿಕೊಳ್ಳಬಹುದು.😍

ಪ್ರಧಾನವಾಗಿ ಶ್ರೀ ಕ್ಷೇತ್ರದಲ್ಲಿ ದೇವಿಯನ್ನು ಶಿವಶಕ್ತಿ ಸ್ವರೂಪದ ಲಿಂಗರೂಪದ ಬಿಂಬದಲ್ಲಿ ನಂಬಿಕೊಂಡು ಬಂದು ಪೂಜಿಸಲಾಗುತ್ತದೆ. ಶ್ರೀ ದೇವಿಯು ಶಿವ ಸಮೇತಳಾಗಿ ಬಿಂಬ ರೂಪದಲ್ಲಿ ಶಿವನ ಅಧಿಷ್ಟಾನದೊಂದಿಗೆ ನೆಲೆಸಿರುವಳು ಎಂಬ ನಂಬಿಕೆ. ಇದೇ ಪ್ರಕಾರವಾಗಿ ತಾಯಿಗೆ ನಡೆಯುವ ರುದ್ರಾಭಿಷೇಕ ಸೇವೆ, ಪ್ರಾತಃಕಾಲದ ಪ್ರತಿನಿತ್ಯ ಅಭಿಷೇಕದ ಸಂದರ್ಭದಲ್ಲಿ ಬಿಂಬದ ಮೇಲ್ಭಾಗದಲ್ಲಿ ಕಂಡುಬರುವ ‘ಧಾರಾಪಾತ್ರೆ’ ಮುಂತಾದ ಅಂಶಗಳು ನಂಬಿಕೆಗೆ ಮಗದಷ್ಟು ಪುಷ್ಟಿ ನೀಡುತ್ತವೆ.

ಪೌರಾಣಿಕವಾಗಿ ಅರ್ಥೈಸ ಬಹುದಾದರೆ ಪ್ರಧಾನವಾಗಿ ಶ್ರೀ ದೇವಿಯ ಉಲ್ಲೇಖ ಕಂಡುಬರುವುದು
‘ಭಾರದ್ವಾಜ ಸಂಹಿತೆಯ ಶ್ರೀ ಕದಲೀ ಮಂಜುನಾಥ ಮಹಾತ್ಮೆಯಲ್ಲಿ. ಇದನ್ನು ಭಾರದ್ವಜ ಮುನಿಗಳು ತಮ್ಮ ಶಿಷ್ಯರಲ್ಲೊಬ್ಬನಾದ ಸುಮಂತುವಿಗೆ ಹೇಳಿರುವುದರಿಂದ ಈ ಸಂಹಿತೆಗೆ ‘ಭಾರದ್ವಾಜ ಸಂಹಿತೆ’ ಎಂಬ ಈ ನಾಮವು ಅನ್ವರ್ಥವಾಗಿ ಬಂದಿದೆ.

‘ಓಂ ನಮೋ ಭಗವತೇ ಮಂಜುನಾಥಯ’ ಎಂಬ ಏಕಾದಶಾಕ್ಷರಿ ಮಂತ್ರ ಸಿದ್ಧಿಯಿಂದ ಭಾರ್ಗವ ರಾಮನು ಪರಶಿವನನ್ನು ಒಲಿಸಿಕೊಂಡನು.

ಭಕ್ತರ ಇಷ್ಟಾರ್ಥವನ್ನು ಪೂರೈಸಲು ಭಕ್ತಿಗೆ ಒಲಿದುಕೊಳ್ಳುವ ದೇವದೇವ ಮಂಜುನಾಥೇಶ್ವರನು ಕದಲೀ ವನ ಮಧ್ಯದಲ್ಲಿರುವ ರಸಕೂಪದಲ್ಲಿ ಉದ್ಭವ ಜ್ಯೋತಿರ್ಲಿಂಗ ಸ್ವರೂಪನಾಗಿ ಅವತರಿಸಲು ಹಾಗೂ ಮಂಜುನಾಥನು ನೆಲೆಸಿರುವ ಕದಲೀವನದ ಸಮೀಪದ ದಕ್ಷಿಣ ದಿಕ್ಕಿನಲ್ಲಿ ಮಂಗಳಾಂಬಿಕೆಯ ಪ್ರಾದುರ್ಭಾವದ ಕುರಿತಾದ ಈ ಲೀಲೆಯೇ ಕದಲೀ ಕ್ಷೇತ್ರ ಮಹಾತ್ಮೆಯಾಗಿದೆ.

ಇತ್ಯುಕ್ತ್ವಾತೇನ ರೂಪೇಣ ತತ್ರೈವಾಸ್ತೇ ಮಹೇಶ್ವರಃ|
ಪ್ರೀತ್ಯರ್ಥಂ ಭಾರ್ಗವಸ್ಯಾಸ್ಯ ಲೋಕಾನಾಂ ಹಿತಕಾಮ್ಯಯಾ’ ಎಂದು ಮಹಾತ್ಮೆಯಲ್ಲಿನ ೧೦’ನೇ ದಶಮೋಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಮಂಜುನಾಥನಿಗೆ ಈ ಕದಲೀ ಸ್ಥಾನವೇ ತನ್ನ ಎಲ್ಲಾ ಸ್ಥಾನಗಳಿಗಿಂತಲೂ ಉತ್ತಮವಾದುದೆಂದು, ಮಂಜುನಾಥನು ಭಾರ್ಗವನ ಪ್ರೀತಿಗಾಗಿ ಲೋಕೋದ್ಧಾರಕ್ಕಾಗಿಯು, ಭಕ್ತರ ಹಿತಕ್ಕಾಗಿಯೂ ರಸಕೂಪದಲ್ಲಿ ಉದ್ಭವ ಲಿಂಗದಲ್ಲಿ ಐಕ್ಯನಾಗಿರುತ್ತಾನೆ.
ದೇವನ ಆಜ್ಞಾನುಸಾರ ಸಪ್ತಕೋಟಿ ಮಂತ್ರಗಳು ಕ್ಷೇತ್ರದಲ್ಲಿ ಸಪ್ತತೀರ್ಥಗಳಾಗಿ ನೆಲೆಸಿದವು.

ಆ ರಸಕೂಪವನ್ನು ನೋಡಿದ ಮಾತ್ರದಿಂದಲೇ ಅಷ್ಟಲೋಹವನ್ನು ಕಾಂಚನವನ್ನಾಗಿ ಮಾಡುವ ಲೋಹ ಸಿದ್ಧಿಯೂ, ದರ್ಶನ ಮಾತ್ರದಿಂದಲೇ ಅಜರಾಮರವಾದ ದೇಹಸಿದ್ಧಿಯೂ ರಸಕೂಪದ ವೈಶಿಷ್ಟ್ಯ, ಅಂತಹ ರಸಕೂಪದಲ್ಲಿ ಪರಶಿವನು ಅವತರಿಸಲು ದೇವಿ ಮಂಗಳೆಯು ಶಿವ ಸಮೇತಳಾಗಿ ತಾನೂ ಇಲ್ಲಿಯೇ ನೆಲೆಸಿದಳು…ಎಂಬುವುದು ಮಹಾತ್ಮೆಯಲ್ಲಿನ ೧೨’ನೇಯ ದ್ವಾದಶೋಧ್ಯಾಯದಲ್ಲಿ ಚರಣದ ೪’ ಶ್ಲೋಕದ ಸಾಲುಗಳಲ್ಲಿ ಮನೋಜ್ಞವಾಗಿ ಉಲ್ಲೇಖಿತವಾಗಿದೆ.

ಅಥ ತೌಳವ ದೇಶಸ್ಯ ಪ್ರಶಸ್ತೀಂ ನಾಮ ವೈ ಪುರೀಂ |
ಶ್ರುತ್ವಾ ತತ್ರ ಧೃತಿ ಚಕ್ರೇ ಮಂಗಲಾ ವಿಂಧ್ಯವಾಸಿನೀ ||
ಅಲೋಕ್ಯ ತೌಳವೀಂ ಭೂಮಿ ಮಖಿಲಾನನಗೃಹ್ಣತೀ |
ಕದಲೀವನ ಪರ್ಯಂತೇ ದಕ್ಷಿಣೇ ವಿಧದೇ ಸ್ಥಿತಿಮ್||

ಪರಶಿವನ ಆಜ್ಞೆಯಂತೆ ಸಹ್ಯಾದ್ರಿಯಿಂದ ಹತ್ತು ಯೋಜನ ದೂರದಲ್ಲಿರುವ ಕದಲೀ ವನವೂ, ಅದರ ಮಧ್ಯ ಭಾಗದಲ್ಲಿ ರಸಕೂಪವೂ ಗೋಚರಿಸುವುದರೊಂದಿಗೆ ಉದ್ಭವ ಲಿಂಗ ಸ್ವರೂಪದಲ್ಲಿ ಪರಶಿವನು ಮಂಜುನಾಥನಾಗಿ ಭಾರ್ಗವ ರಾಮನಿಗೆ ಒಲಿದನು. ಶಿವನ ಆಜ್ಞಾನುಸಾರ ಭಾರ್ಗವ ರಾಮನು ದೇವ ಶಿಲ್ಪಿಯಾದ ‘ವಿಶ್ವ ಕರ್ಮನಿಂದ’ ಮಂಜುನಾಥ ಸ್ವಾಮಿಗೆ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಿದನು. ನೇತ್ರಾವತಿಯ ಪವಿತ್ರ ಜಲ ಸೇಚನದಿಂದ ಪರಿಶುದ್ಧವೂ ಧನಧಾನ್ಯ ಸಮೃದ್ಧಿಯುಕ್ತವಾಗಿ ಸಕಲ ವೈಶಿಷ್ಟ್ಯಗಳಿಂದ ಶೋಭಿಸಲ್ಪಡುವ ತೌಳವ ದೇಶಕ್ಕೆ ಅನುಗ್ರಹಿಸಬೇಕೆಂಬ ಇಚ್ಛೆಯಿಂದ ದೇವದೇವನ ಅರ್ಧಾಂಗಿಯಾದ ಪರಶಿವೆಯೂ ಈ ಕ್ಷೇತ್ರದಲ್ಲಿ ಅನುಗ್ರಹಿಸಿ ನೆಲೆಸಲು ಸನ್ನದಳಾಗಿ ವಿಂಧ್ಯಾಂಚಲ ವಾಸಿನಿಯಾದ ಲೋಕ ಪಾವನೆಯಾದ ಶ್ರೀ ಮಂಗಳಾದೇವಿಯು, ಕಲಿಯುಗದ ಪ್ರಥಮ ಪಾದದ ಆದಿಭಾದಲ್ಲಿ ದ್ವಿ-ಬಾಹು ಸಮೇತ ಸ್ತ್ರೀಯಾಕಾರದ ಶಿವಶಕ್ತಿ ಬಿಂಬ ಸ್ವರೂಪದಲ್ಲಿ ಸಹ್ಯಾದ್ರಿಯ ದಕ್ಷಿಣ ಭಾಗ(ಬಲ ಭಾಗ)ದ ಸಾಗರ ತೀರದ ಭೂ ಖಂಡದಲ್ಲಿ ಭಾರ್ಗವ ರಾಮನಿಗೆ ಒಲಿದಳು ಎಂಬುವುದಾಗಿ ತಾತ್ಪರ್ಯ.

ದದರ್ಶದೇವದೇವೇಶೀಂ ದೇವೀಂ ದಿವ್ಯ ಸ್ವರೂಪಿಣೀಂ | ಸಹಸ್ರಾದಿತ್ಯ ಸಂಕಾಶಂ ಸಚ್ಚಿದಾನಂದ ವಿಗ್ರಹಾಂ, ದೃಷ್ಟ್ವಾನ ನಾಮ ಪದಯೋ: ದೇವ್ಯಾ: ಸಭೃಗುನಂದನಃ||
ಭ.ಸಂ.ಅ ೧೨ ಶ್ಲೋ.೨೫

ಜಯದೇವಿ ಮಹಾದೇವಿ ಜಯೇಶ್ವರಿ ಮಹೇಶ್ವರಿ | ಜಯಶಕ್ತೇ ಜಯವ್ಯಕ್ತೇ ಜಯಭಕ್ತೇ ನಮೋನಮಃ || ತ್ವಂ ಮಾತ ಸರ್ವ ಲೋಕಾನಾಂ ಆದಿ ದೇವಿ ಶಿವಾತ್ಮಿಕೆ| ತ್ವಮೇವ ಶರಣಂ ಮಾತಃ ಸ್ಥಾವರಸ್ಯ ಚರಸ್ಯಚ || ಶರಣಂತ್ವಾಂ ಪ್ರಪನ್ನೋಸ್ಮಿ ರಕ್ಷಮಾಂ ಮಂಗಲೇಶ್ವರಿ | ಇತಿಸ್ತುತ್ವಾ ಜಾಮದಗ್ನ್ಯ ಹರ್ಷಗದ್ಗ ದಯಾಗಿರಾ | ವ ವಂದೇ ಮಂಗಲಾಂ ದೇವಿ ಮಂಗಲಾಂಗೀ ಪುನಃಪುನಃ ಭ.ಸಂ.ಅ ೧೨ಶ್ಲೋ.೩೨

ಸಂಹಿತೆಯ ಪ್ರಕಾರ “ಹೀಗೆ ತನಗೊಲಿದ ವಿಜಯೀ’ಸ್ವರೂಪಿ ದೇವದೇವೇಶಿ’ಯೂ ಸಹಸ್ರ ಸೂರ್ಯ ಪ್ರಕಾಶೆಯಾಗಿ ಸರ್ವಾಲಂಕರ’ಯುಕ್ತಳಾಗಿ ಪ್ರತ್ಯಕ್ಷಳಾದ ಸಾಕ್ಷಾತ್ ಮಂಗಳಾದೇವಿಯನ್ನು ಕಂಡುತನ್ನ ಸಂತೋಷಕ್ಕೆ ಪಾರವೇಯಿಲ್ಲ ವೆಂಬಂತೆ ಭಾರ್ಗವನು ತಾಯಿಯನ್ನು ಸ್ತುತಿಸಲಾರಂಭಿಸಿ, ಸರ್ವೋತ್ಕರ್ಷವನ್ನು ಹೊಂದಿರುವ, ಸರ್ವಲೋಕಗಳಿಗೂ ಜನನಿಯಾಗಿರುವ ಲೋಕ ಶರಣ್ಯಳಾದ ಜಗದಂಬೆ ಮಂಗಳೇಶ್ವರಿಗೆ ತಾನು ಸೃಷ್ಟಿಸಿದ ಈ ತೌಳವ ಭೂಮಿಯಲ್ಲಿ ಕಲ್ಪಾಂತರ ಅಂತ್ಯ ಪರ್ಯಂತ ನೆಲೆಸಿ ಉದ್ಧರಿಸಬೇಕೆಂದು ಪ್ರಾರ್ಥಿಸುತ್ತಾ ಆ ಮಂಗಳಾಂಗಿಯ ಚರಣಾರವಿಂದಗಳಿಗೆ ಪುನಃಪುನಃ ಸಾಷ್ಟಾಂಗ ಪ್ರಣಾಮವನ್ನು ಮಾಡುತ್ತಾನೆ. ಭಾರ್ಗವನ ಸ್ತುತಿಯಿಂದ ಸಂತುಷ್ಟಳಾದ ಮಂಗಳಾಂಭೆಯು ಇಂತೆಂದಳು.

ವತ್ಸ! ತ್ವದ್ಭಕ್ತಿಯುಕ್ತಾರ್ಧಾ ಮಂಜುನಾಥ ಪ್ರಸಾದಿನಿ| ನಿವಸಾಮ್ಯತ್ರ ಸುಖಿನೀ ಸಹ ನಿತ್ಯ ಮಹೋತ್ಸವಾ ಉಪಾರೈರಮೋಘಾರ್ಥೈಃ|| ಯೇ ಮಾ ಮತ್ರತ ಮಾನವಾಃ ಪೂಜಯಂತ್ಯೇವಮೇತೇಭ್ಯೋದದಾಮಿ ಮಹತೀಂ ಶ್ರೀಯಂ ತ್ವಮಪ್ಯಾವ್ಯಾಹತೈಶ್ವರ್ಯಃ ಸರ್ವೇಷಾಮುಪರಿಸ್ಥಿತಃ ನಿತ್ಯಶುದ್ಧೋನಿರಾಯಾಸೋ ನಿವೃತೋಭಾವ ಭಾರ್ಗವ||
ಭ.ಸಂ.೨೭ ಶ್ಲೋ.೩೯

ಭಾರ್ಗವನ ಭಕ್ತಿಗೆ ಮೆಚ್ಚಿ ದೇವಿಯು ” ವತ್ಸಾ, ಮಂಜುನಾಥನ ಒಡಗೂಡಿ, ಮಂಗಳಾದೇವಿ ಎಂಬ ನಾಮಧೇಯದೊಂದಿಗೆ ಮಂಜುನಾಥ ಸ್ವಾಮಿಯ ಸಹಿತ ತನ್ನ ಚೈತನ್ಯದ ಸಾನಿಧ್ಯವು ಶಾಶ್ವತವಾಗಿ ಲಿಂಗರೂಪದಲ್ಲಿ ನೆಲೆಸಿರುವುದಾಗಿಯೂ, ಯಾರು ತನ್ನನ್ನು ಶೃದ್ಧಾ ಭಕ್ತಿಯಿಂದ ವಿದ್ಯುಕ್ತವಾಗಿ ಪೂಜಿಸಿ ಫಲಾಪೇಕ್ಷೆಯೊಂದಿಗೆ ಬರುತ್ತಾರೋ, ಅಂತಹ ಭಕ್ತರಿಗೆ ಸಕಲ ಸಂಪತ್ತುಗಳನ್ನು ನಿರಂತರವಾಗಿ ಅನುಗ್ರಹಿಸಿ, ನಿತ್ಯ ಉತ್ಸವಾದಿ ಮಹೋತ್ಸವಾದಿಗಳಿಂದ ಕಲ್ಪಾಂತ್ಯ ಪರ್ಯಂತ ಮೆರೆಯಲ್ಪಡುವೆನು”. ಎಂದು ಭಾರ್ಗವ ರಾಮನಿಗೆ ವಚನವನ್ನಿತ್ತು ಅಂತರ್ಧಾನಳಾಗಿ, ಲಿಂಗರೂಪದಲ್ಲಿ ಒಲಿದಳು. ಅನಂತರ ಸರ್ವವಂದಿತೆಯಾದ ದೇವಿಯ ಆಜ್ಞೆಯಂತೆ ಆಕೆಗೆ ದೇವಾಲಯವನ್ನು ನಿರ್ಮಿಸಿ ಲಿಂಗರೂಪದ ಶಿವಶಕ್ತಿ ಬಿಂಬವನ್ನು ಪ್ರತಿಷ್ಟಾಪಿಸಿದನು.

ಹೀಗೆ ಮಂಜುನಾಥ ಮಂಗಳಾಂಬಿಕೆಯಿಂದ ವಿಶೇಷ
ವರ ಪ್ರಧಾನ ಪಡೆದ ತೌಳವ ದೇಶವು, ಮಂಗಳಾದೇವಿ ದೇವಸ್ಥಾನದಿಂದ ಪ್ರಾರಂಭವಾಗಿ ಕದಲೀ ಕ್ಷೇತ್ರದ ಭರದ್ವಾಜಾಶ್ರಮದ ವರೆಗೆ ವಿಸ್ತಾರವುಳ್ಳದಾಗಿದ್ದು ಪಡುಗಡಲ ದಡದವರೆಗೆ ಬಹು ಸುಭೀಕ್ಷೆಯಿಂದ ಬೆಳೆಯತೊಡಗಿತು. ಮಂಜುನಾಥ ದೇವರು ತೌಳವಾಧಿಪತಿಯಾಗಿ ಅಧಿಪತ್ಯವನ್ನು ವಹಿಸಲು, ಮಂಜುನಾಥನ ಪಟ್ಟದರಸಿಯಾಗಿ ಮಂಗಳಾಂಭೆಯು ನೆಲೆಸಲು, ದೇವಿಯ ಸಂಪೂರ್ಣ ಕೃಪಾಕಟಾಕ್ಷದಿಂದ ಮಂಗಳಾಪುರವಾಗಿ ಇಂದು ಸುಖ ಶಾಂತಿ ನೆಮ್ಮದಿ ಉತ್ತಮವಾದ ಬಾಳ್ವೆಗೂ ಮೂಲ ಸ್ಥಾನವಾದ ಮಹಾ ನಗರಿಯಾಗಿ ಬೆಳೆದು, ತೌಳವ ದೇಶದ ತಿಲಕಾಯಮಾನವಾದ ಮಂಗಳಾಪುರವೆಂದು ಪ್ರಸಿದ್ಧಿ ಪಡೆಯಿತು.👏

ಆದ್ದರಿಂದ ನಾಳಿನ ಶಿವರಾತ್ರಿಯ ಶುಭ ದಿನದಂದು
ಅರ್ಧನಾರೀಶ್ವರ/ರೀ ಅಲಂಕಾರದಲ್ಲಿ ಶಿವ ಸಮೇತ ಪ್ರಸನ್ನಿತಳಾಗಿ ಮೆರೆಯಲ್ಪಡತಕ್ಕಂತಹ ಮಂಗಳಾಂಭೆಯ ಮೇರು ವೈಭವವನ್ನು ಕಂಡು ಧನ್ಯರಾಗುವ ಸೌಭಾಗ್ಯ ನಮ್ಮನಿಮ್ಮೆಲ್ಲರದು.

ಸೃಷ್ಟಿ ಕರ್ತ ಹಾಗು ಸೃಷ್ಟಿ ಎರಡೂ ಒಂದೇ ಎಂಬುದೆ ಅರ್ಧನಾರೀಶ್ವರ ತತ್ವ. ಶಿವ ಹಾಗು ಶಕ್ತಿ ಒಂದೇ ಶರೀರದಲ್ಲಿ ಒಂದಾಗಿರುವ ಸುಂದರ ಸಮಾಗಮ.
ಪಾರ್ವತೀ ಪರಮೇಶ್ವರರ ಪ್ರತ್ಯಕ್ಷ ದರ್ಶನವೆಂಬಂತೆ ಮಹಾದೇವಿಯು ಮಹಾದೇವನ ವಾಮಾಂಗ (ಎಡ)ಭೂಷಿತೆಯಾಗಲು,..ಮತ್ತೊಂದೆಡೆ ಪಾರ್ಶ್ವ(ಬಲ) ಭಾಗದಲ್ಲಿ ಪರಶಿವನು ದೇವಿಯಲ್ಲಿ ಅಂತರ್ಗತನಾಗಿ ಅರ್ಧನಾರೀಶ್ವರನಾದನು.
ಈ ಶಿವ-ಶಕ್ತಿಯರ ಅವಿನಾಭಾವದ ಸಂಯೋಗದ ಸಂಕೇತವೇ ನಾಳಿನ ಶಿವರಾತ್ರಿಯಂದು ವಿಶೇಷವಾಗಿ ವರ್ಷಕ್ಕೆ ಒಂದರಂತೆ ಮಾತ್ರ ಶಿವರಾತ್ರಿಯಂದು ತಾಯಿಗೆ ನಡೆಸುವ ಅರ್ಧನಾರೀಶ್ವರ/ರಿ ಅಲಂಕಾರ ಮಹತ್ವಪೂರ್ಣವೆನಿಸಿದೆ.

ಶಂಕರನು ದಯಾಮಯನು ತನ್ನ ಭಕ್ತರ ಯಾವ ಬೇಡಿಕೆಯನ್ನೂ ನಿರಾಕರಿಸದವನು ಎನ್ನುವ ನಂಬಿಕೆ ನಮಗಿದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಶಿವನು ಅಭಿಷೇಕಪ್ರಿಯನು. ಶೃದ್ಧಾ ಭಕ್ತಿಯಿಂದ ಮಾಡುವ ಅಭಿಷೇಕವನ್ನು ಪ್ರೀತಿಯಿಂದ ಸ್ವೀಕರಿಸಿ, ಬೇಡಿದ ವರಗಳನ್ನು ಕ್ಷಣಾರ್ಧದಲ್ಲೇ ಅನುಗ್ರಹಿಪ ಕಾರಣದಿಂದ ಈಶ್ವರನ ಪ್ರೀತ್ಯರ್ಥವಾಗಿ ಶಿವರಾತ್ರಿಯ ಪ್ರಯುಕ್ತ ಪ್ರಾತಃಕಾಲ ದೇವಿಗೆ ರುದ್ರಾಭಿಷೇಕವು ನೆರವೇರಲಿದೆ.

ವರ್ಷವಿಡೀ ಈ ದಿನಕ್ಕಾಗಿಯೇ ಎದುರು ನೋಡಿ ಕಾದು ವರ್ಷಕ್ಕೊಂದು ಬಾರಿ ಮಾತ್ರ ನಮಗೆ ಕಾಣಸಿಗುವ ಅವಿಸ್ಮರಣೀಯ ಕ್ಷಣ ಅದು ಶ್ರೀದೇವಿಗೆ ಮಾಡಲಾಗುವ ಅರ್ಧ ನಾರೀಶ್ವರ/ರಿ ಅಲಂಕಾರ.

ನಾಳಿನ ‘ಅಃತಪಟದ ಪರದೆ’ಯನ್ನು ಸರಿಸುತ್ತಿದ್ದಂತೆಯೇ, ಪಾರ್ಶ್ವ ಭಾಗದಿಂದ ‘ಜಟಾಧರನಾಗಿ’ ಶಿರೋಭೂಷಣವಾಗಿ ಚಂದ್ರನನ್ನು ಧರಿಸಿ, ಪೀತಾಂಬರಯುಕ್ತನಾಗಿ ರುದ್ರಾಕ್ಷಿ ಸಹಿತ ತ್ರಿಶೂಲಧರ ಸಪತ್ನೀ ಸಮೇತನಾದ ಮಂಜುನಾಥ ಸ್ವಾಮಿಯನ್ನೂ…ವಾಮ ಭಾಗದಲ್ಲಿ ಕಪರ್ದಿನಿ’ಯಾಗಿ ಮಂದಸ್ಮಿತಳಾಗಿ ವರದ ಮುದ್ರೆಯ ಹಸ್ತದೊಂದಿಗೆ ಆಶಿರ್ವದಿಸುವ ಮಂಗಳಮ್ಮನನ್ನು ಅರ್ಧನಾರೀಶ್ವರ ಅಲಂಕಾರದಲ್ಲಿ ಕಂಡು ನಮ್ಮ ಜನ್ಮವನ್ನು ಸಾರ್ಥಕಗೊಳಿಸೋಣ.😄

ಮಾತ್ರವಲ್ಲದೆ ಎಂದಿನ ಪ್ರಕಾರ ರಾತ್ರಿ ೮.೩೦’ಗಂಟೆಗೆ ನಿತ್ಯಮಹಾಪೂಜೆಯು ಜರುಗಿದ ಬಳಿಕ ಶಿವರಾತ್ರಿಯ ಪ್ರಯುಕ್ತ ವಿಶೇಷ ಮಹಾಪೂಜೆಯು ೯.’ಕ್ಕೆ ಸರಿಯಾಗಿ ನಡೆಯಲಿದೆ.

ನಮ್ಮ ಪೂರ್ವ ಪುಣ್ಯಾನುಸಾರವಾಗಿ ನಾಳಿನ ಗುರುವಾರ ಲಭಿಸಲಿರುವ ಅವಳ ಮಂಜುನಾಥ ಸ್ವರೂಪ ಅಲಂಕಾರ ದರ್ಶನದಿ ಸರ್ವಾಭೀಷ್ಟಗಳು ಫಲಿಸಲಿ. ತೌಳವ ದೇಶಾಧಿಪನಾದ ಮಂಜುನಾಥನು ಸರ್ವರ ಅಭೀಷ್ಠಗಳನ್ನೆಲ್ಲ ನೆರವೇರಿಸಿ ಸಂಕಷ್ಟಗಳಿಂದ ಪಾರುಮಾಡಿ ಸಂತಸ, ಸಮೃದ್ಧಿಯ ಶಿವರಾತ್ರಿ ಶುಭವನ್ನು ತರಲಿ. ಲೋಕದ ಸರ್ವ ತಾಪತ್ರಯಗಳು ಪರಿಹಾರವಾಗಿ ಸುಖ-ಶಾಂತಿ-ನೆಮ್ಮದಿ ಶಾಶ್ವತವಾಗಿ ನೆಲೆಸಲಿ.

🌹✨°ಶಿವಾರ್ಪಣ ಮಸ್ತು°🌹✨