On this Day
April 15, 2022
have a blissful darshan of Sri Devi
ಓಂ ಜಯದೇವಿ ನಮಸ್ತುಭ್ಯಂ | ಜಯ ಭಕ್ತ ವರಪ್ರದೇ | ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ||
ಸೌರಮಾನ ಯುಗಾದಿಯ ವರ್ಷಾರಂಭದ ಮೊದಲ ದಿನದ ಶುಕ್ರವಾರದಂದು ಮೂಲ ಬಿಂಬದ ಲಿಂಗರೂಪದಲ್ಲಿ ನಮ್ಮೆಲ್ಲರಿಗೂ ಯುಗಾದಿಯಂದು ಪ್ರಾಪ್ತವಾದ ಶ್ರೀ ಮಂಗಳಾದೇವಿ ಅಮ್ಮನವರ ವಿಷುಕಣಿಯ ದರ್ಶನ
ಸೂರ್ಯ ನಾರಾಯಣನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ ‘ಮೇಷ ಸಂಕ್ರಮಣದ’ ಮರುದಿನದ ‘ಹೊಸ ‘ವಿಕ್ರಮಶಕೆ’ಯ ಹೊಸವರ್ಷದ ಇಂದಿನ ಸೌರಮಾನ ಯುಗಾದಿಯನ್ನು ನವ ಚೈತನ್ಯದಿಂದ ಆಚರಿಸಿ ತನ್ನ ಸನ್ನಿಧಾನಕ್ಕೆ ವಿಷುಕಣಿಯ ದರ್ಶನಕ್ಕೆ ಪ್ರಾತಃಕಾಲ ಮಹಾತಾಯಿಯು ಅನುಗ್ರಹಿಸಿದ್ದಾಳೆ
ವಿಷುಕಣಿಯ ದರ್ಶನವನ್ನು ಪಡೆದು ಹೊಸ ವರ್ಷದಲ್ಲಿ ಸಂಪದ್ಭರಿತ ಸುಖ ಶಾಂತಿ, ಸಮೃದ್ಧಿಯುತ ಜೀವನ ಪ್ರಾಪ್ತಿಗಾಗಿ ಮಹಾದೇವಿಯಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ಸೌರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಹರ್ಷದಾಯಕವಾಗಿ’ ಕ್ಷೇಮದಾಯಕವಾಗಿರಲಿ ಎಂಬ ಸಂಕಲ್ಪದಿಂದ ತಾಯಿಯಲ್ಲಿ ಆಶೀರ್ವಾದವನ್ನು ಕೋರುತ್ತಾ ತಮಗೆಲ್ಲರಿಗೂ ನೂತನ ಶುಭಕೃತನಾಮ ಸಂವತ್ಸರವು ನಿತ್ಯ ಶುಭ ಸನ್ಮಂಗಳ ಶ್ರೇಯಸ್ಸನ್ನುಂಟುಮಾಡಲಿ.
☀️ಶುಭ ಸುಪ್ರಭಾತ☀️
✨🌸ಸಮಸ್ತ ಲೋಕಾ ಸರ್ವೇ ಜನಾ ಸುಖಿನೋ ಭವಂತು🌸✨
ಸೌರಮಾನ ಯುಗಾದಿಯ ವರ್ಷಾರಂಭದ ಮೊದಲ ದಿನದ ಶುಕ್ರವಾರದಂದು ಸಾಕ್ಷಾತ್ ಮಹಾಲಕ್ಷ್ಮಿಯಾಗಿ ಸರ್ವಾಲಂಕೃತಳಾದ ಶ್ರೀ ಮಂಗಳಾದೇವಿ ಅಮ್ಮನವರು. ಇಂದು ಮಹಾದೇವಿಯ ಸನ್ನಿಧಾನದಲ್ಲಿ ವಿಷುಕಣಿ ಪೂಜೆಯ ಸಂಭ್ರಮ.
ನಮ್ಮೆಲ್ಲರಿಗೂ ಸೌರಮಾನ ಯುಗಾದಿಯಂದು ಸಂಪ್ರಾಪ್ತವಾದ ಸರ್ವಮಂಗಳೆಯ ಅಲಂಕೃತ ವಿಷುಕಣಿಯ ದರ್ಶನ. ವಿಷುವಿನ ದಿನ ಶ್ವೇತ ವಸನೆಯಾಗಿ ಕಮಲಪುಷ್ಪ ಹಾರದಿಂದ ಪರಿಶೋಭಿಸುತ್ತಾ ಕಮಲ ಧಾರಿಣಿಯಾಗಿ ವಿರಾಜಮಾನಳಾದ ತಾಯಿಯ ಪರಿಪೂರ್ಣ ಅನುಗ್ರಹ ನಮ್ಮೆಲ್ಲರ ಮೇಲಾಗಿ ಸಕಲ ಸಂಕಷ್ಟಗಳು ದೂರವಾಗಲಿ.
ನೂತನ ಶುಭಕೃತ ನಾಮ ಸಂವತ್ಸರವು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸುತ್ತಾ ಹೊಸ ವರುಷವು ಹೊಸ ಹರುಷವನ್ನು ನವ ಚೈತನ್ಯವನ್ನು ತರಲಿ ಎಂದು ಮಂಗಳಮ್ಮನಲ್ಲಿ ಪ್ರಾರ್ಥಿಸುತ್ತಾ ತಮ್ಮೆಲ್ಲರಿಗೂ ಸೌರಮಾನ ಯುಗಾದಿ ಹಬ್ಬದ ಪ್ರೀತಿಯ ಶುಭಾಶಯಗಳು.🌹😊👏
ಸಂಸ್ಕೃತ ಸಾಹಿತ್ಯದಲ್ಲಿ “ಶುಭಕೃತ್” ಎಂದರೆ ಧರ್ಮೀಯವೆನಿಸಿದ ಉತ್ತಮ ಕಾರ್ಯಗಳನ್ನು ಮಾಡಲು ಅಣಿಗೊಳಿಸಿದ ಸಮಯ” ಎಂದರ್ಥ.
ಸನಾತನ ಹಿಂದೂ ಧರ್ಮದ ಪ್ರಭವಾದಿ 60 ಸಂವತ್ಸರಗಳಲ್ಲಿ ಶುಭಕೃತ್ 36ನೇಯದು. “ಶುಭಕೃತ್” ಎಂಬ ಸಂಸ್ಕೃತ ಪದಕ್ಕೆ ‘ಶೋಭಿಸುವ”,ತೇಜಸ್ಸು”, “ಮಂಗಳ”, “ಸುಖ”, “ಸಮೃದ್ಧಿ, “ಅದೃಷ್ಟ”, “ಸೌಜನ್ಯ” ಅಥವಾ “ನಮ್ರತೆ”, “ಕಲಿಕೆ”, “ಚತುರತೆ” ಮತ್ತು “ಅತ್ಯುನ್ನತವಾದ ಪುಣ್ಯ ಕಾರ್ಯಗಳೆಂಬ” ಅರ್ಥವಿದೆ. ಇಲ್ಲಿ “ಶುಭ” ಎಂದರೆ “ಉತ್ಕೃಷ್ಟವಾದ” ಮತ್ತು “ಕೃತ” ಎಂದರೆ “ಕಾರ್ಯ” ಅಥವಾ “ಕೆಲಸ” ಎಂದು ವ್ಯಾಖ್ಯಾನಿಸಬಹುದು. ಶುಭಕೃತವು ಸಂತಸದ ಶುಭ ಪಯಣಕ್ಕೆ ನಾಂದಿಯಾಗಿ ಜೀವನವು ಶೋಭಾಯಮಾನವಾಗಿರಲಿ.🤩
ಕಳೆದ ಪ್ಲವನಾಮ ಸಂವತ್ಸರದಲ್ಲಿ ಜೀವನವೆಂಬ ಭವ ಸಾಗರವನ್ನು ದಾಟಿಸುವ ಆ ಭಗವತಿ ಪ್ಲವ ಸ್ವರೂಪಳಾಗಿ ಆಯುರಾರೋಗ್ಯ ಭಾಗ್ಯವನ್ನು ನೀಡಿ ನಮ್ಮೆಲ್ಲರನ್ನು ಸಂರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಿದ್ದಾಳೆ. ಇದೀಗ ಶುಭಕೃತ ನಾಮ ಸಂವತ್ಸರದಲ್ಲಿ ಶುಭಪ್ರದಳಾದ ಆಕೆ ಶುಭವನ್ನುಂಟು ಮಾಡುವ ಶುಭಂಕರಿ.
“✨ಜಯ ಕಲ್ಯಾಣಸುಖದೇ ಜಯ ಮಂಗಲದೇ ಶುಭೇ✨” ಎಂದು ಸನ್ಮಂಗಳಕಾರಿಣಿಯಾದ ಅಮ್ಮನಲ್ಲಿ ಶುಭ ಕಲ್ಯಾಣ ಶ್ರೇಯೋಭಿವೃದ್ಧಿಯ ವರಗಳನ್ನು ಪ್ರಾರ್ಥಿಸುತ್ತಾ ಭವಿಷ್ಯದ ದಾರಿ ದೀಪವಾಗಿ ಅನವರತ ನಮ್ಮ ಬೆಂಗಾವಲಿಗಿದ್ದು ಈ ಶುಭಕೃತ ನೂತನ ವರ್ಷದಲ್ಲಿ ಬರತಕ್ಕಂತಹ ಸಕಲಾರಿಷ್ಟ ದುರಿತಗಳನ್ನು ಉಪಶಮನಗೊಳಿಸಿ, ದೀರ್ಘ ಆಯುರಾರೋಗ್ಯ ಸುಖ-ಶಾಂತಿ ನೆಮ್ಮದಿಗಳನ್ನಿತ್ತು ಸಲಹಲೆಂದು ವಿಜ್ಞಾಪಿಸುತ್ತಾ ವರ್ಷಪೂರ್ತಿ ಸಮೃದ್ಧಿಗಾಗಿ ಶ್ರೀ ಮಂಗಳಾದೇವಿಯಲ್ಲಿ ಸಂಪ್ರಾರ್ಥಿಸೋಣ.👏
📖✨ ಪಂಚಾಂಗ ಶ್ರವಣ✨📖
ಶ್ರೀ ಮಂಗಳಾದೇವಿ ಅಮ್ಮನವರ ಸನ್ನಿಧಾನದಲ್ಲಿ ಕಲಿಯುಗ ೫೧೨೪ ಶ್ರೀ ಶಾಲಿವಾಹನ ಶಕೆ ೧೯೪೪ ಶುಭಕೃತ ನಾಮ ಸಂವತ್ಸರದ ಪಂಚಾಂಗ ಶ್ರವಣ.👏
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾ:|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾ: ಸುಖಿನೋ ಭವಂತು ||🌹
ಕಾಲೇ ವರ್ಷಂತು ಪರ್ಜನ್ಯ: ಪ್ರಥಿವೀ ಸಸ್ಯಶಾಲಿನೀ | ದೇಶೋಯಂ ಕ್ಷೋಭರಹಿತೋ ಸಜ್ಜನಾ: ಸಂತು ನಿರ್ಭಯಾ: ||🌹
ಅಪುತ್ರಾ: ಪುತ್ರಿಣ: ಸಂತು ಪುತ್ರಿಣ: ಸಂತು ಪೌತ್ರಿಣ:|
ಅಧನಾ: ಸದನಾ: ಸಂತು ಜೀವಂತು ಶರದಾಂ ಶತಮ್ ||🌹
ಧಿಯೋ ಯೋನಃ ಪ್ರಚೋದಯತ್ ” ಅನೋ ಭದ್ರಾ: ಕೃತವೋ ಯಂತು ವಿಶ್ವತ:”🌹
ಓಂ ಸರ್ವೇ ಭವಂತು ಸುಖಿನಃ| ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು| ಮಾ ಕಶ್ಚಿದ್ ದುಖಃ ಭಾಗ್ಭವೇತ್||🌹
ನಮ್ಮ ಜೀವನದಲ್ಲಿ ಶ್ರೀ ದೇವಿಯು ಶುಭಪ್ರದಳಾಗಿ ನೂತನ ಶುಭಕೃತ ಸಂವತ್ಸರದಲಿ ಉತ್ತಮ ಮಳೆಯಾಗಿ ಇಳೆ ತಣಿದು ಬೆಳೆ ಬೆಳೆದು ವಸುಂಧರೆ ಸಸ್ಯ ಶ್ಯಾಮಲೆಯಾಗಲಿ. ಗೋ ಸಂಪತ್ತು ಹೆಚ್ಚಲಿ, ಚಂದನ ಅಗರು ವೃದ್ಧಿಸಲಿ. ಪಾಂಡಿತ್ಯ ಪ್ರವರ್ಧಮಾನಕ್ಕೆ ಬರಲಿ. ಸುಖ ಸೌಖ್ಯ ಶಾಂತಿ ಆಯುರಾರೋಗ್ಯ ನೆಲೆಸಿ ವಿಶ್ವದ ಕಷ್ಟ ನಷ್ಟದಲ್ಲಿರುವ ಜನರ ಅನಿಷ್ಟ ನಿವಾರಣೆಯಾಗಲಿ. ರೋಗ ರುಜಿನಾದಿಗಳು ತೊಲಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಿ ಸರ್ವರೂ ಯಶೋವಂತರಾಗಲಿ.🙏
ಸರ್ವೇಷಾಂ ಸ್ವಸ್ತಿರ್ಭವತು✨
ಸರ್ವೇಷಾಂ ಶಾಂತಿರ್ಭವತು|✨
ಸರ್ವೇಷಾಂ ಪೂರ್ಣಂ ಭವತು✨
ಸರ್ವೇಷಾಂ ಮಂಗಲಂ ಭವತು ||✨
ಸರ್ವರಿಗೂ ಯುಗಾದಿ ಹಬ್ಬದ ಪ್ರೀತಿಯ ಶುಭಾಶಯಗಳು. ಶುಭಕೃತನಾಮ ಸಂವತ್ಸರ ಸರ್ವರಿಗೂ ಒಳಿತನ್ನುಂಟುಮಾಡಲಿ.👏
๛:°✺🌼𝙎𝙤𝙪𝙧𝙖𝙢𝙖𝙖𝙣 𝙐𝙜𝙖𝙙𝙞🌼✺๛:°
The Glory of Goddess Mangaladevi has spread across this country. There are no limitations to the enormous love and affection shown by the goddess to her devotees. With a mere thought of her, goddess shall come and reside in the heart, mind and the residence of her devotees. This Solar new year shall be very special compared to the rest with the grace of Goddess Mangaladevi.
The festival of Vishu is popularly termed as It is the beginning of a whole new year with spirit being high in the minds of the people.
𝐓𝐡𝐞 𝐋𝐮𝐧𝐚𝐫 𝐧𝐞𝐰 𝐲𝐞𝐚𝐫 𝐟𝐚𝐥𝐥𝐬 𝐨𝐧 𝐭𝐡𝐞 𝐟𝐢𝐫𝐬𝐭 𝐝𝐚𝐲 𝐨𝐟 𝐭𝐡𝐞 𝐦𝐨𝐧𝐭𝐡 𝐨𝐟 𝐂𝐡𝐚𝐢𝐭𝐫𝐚, 𝐰𝐡𝐞𝐫𝐞 𝐚𝐬 𝐭𝐡𝐞 𝐒𝐨𝐥𝐚𝐫 𝐧𝐞𝐰 𝐲𝐞𝐚𝐫 𝐟𝐚𝐥𝐥𝐬 𝐨𝐧 𝐭𝐡𝐞 𝐟𝐢𝐫𝐬𝐭 𝐝𝐚𝐲 𝐨𝐟 𝐭𝐡𝐞 𝐦𝐞𝐬𝐡 𝐦𝐨𝐧𝐭𝐡 𝐚𝐬 𝐩𝐞𝐫 𝐇𝐢𝐧𝐝𝐮 𝐜𝐚𝐥𝐞𝐧𝐝𝐚𝐫. 𝐈𝐭 𝐢𝐬 𝐩𝐞𝐫𝐢𝐨𝐝 𝐰𝐡𝐞𝐧 𝐭𝐡𝐞 𝐒𝐮𝐧 𝐞𝐧𝐭𝐞𝐫𝐬 𝐭𝐡𝐞 𝐳𝐨𝐝𝐢𝐚𝐜 𝐬𝐢𝐠𝐧 𝐀𝐫𝐢𝐞𝐬 𝐚𝐟𝐭𝐞𝐫 𝐥𝐞𝐚𝐯𝐢𝐧𝐠 𝐭𝐡𝐞 𝐩𝐢𝐞𝐜𝐞𝐬. 𝐓𝐡𝐢𝐬 𝐢𝐬 𝐩𝐨𝐩𝐮𝐥𝐚𝐫𝐥𝐲 𝐭𝐞𝐫𝐦𝐞𝐝 𝐚𝐬 𝐒𝐨𝐥𝐚𝐫 𝐧𝐞𝐰 𝐲𝐞𝐚𝐫.🤩
We celebrate Lunar new year by having Jaggery and Neem symbolising us to see the times of happiness and sadness in a same platform. The celebration of solar new is different from that of the lunar one. It is the time for salutations to our mother earth. All the fruits and vegetables grown from the womb of mother earth is kept in front of a mirror in the previous day night and the first thing on the new year, we shall see this as the first sight called as ‘𝙠𝙖𝙣𝙞’ on the new year day. This is way of our salutations to the mother goddess Mangaladevi to help us to lead a life filled with happiness, peace and prosperity. ✨
𝙏𝙝𝙚 𝙩𝙚𝙧𝙢 𝙑𝙞𝙨𝙝𝙪 𝙝𝙖𝙨 𝙘𝙤𝙢𝙚 𝙛𝙧𝙤𝙢 𝙩𝙝𝙚 𝙎𝙖𝙣𝙨𝙠𝙧𝙞𝙩 𝙩𝙚𝙧𝙢 𝙫𝙞𝙨𝙝𝙬𝙖𝙙. 𝙏𝙝𝙚 𝙩𝙚𝙧𝙢 𝙫𝙞𝙨𝙝𝙬𝙖𝙙 𝙢𝙚𝙖𝙣𝙨 𝙩𝙝𝙚 𝙙𝙖𝙮 𝙬𝙝𝙚𝙣 𝙩𝙝𝙚 𝙣𝙞𝙜𝙝𝙩 𝙖𝙣𝙙 𝙙𝙖𝙮 𝙖𝙧𝙚 𝙨𝙞𝙢𝙞𝙡𝙖𝙧 𝙞𝙣 𝙣𝙖𝙩𝙪𝙧𝙚. 𝙏𝙝𝙞𝙨 𝙝𝙖𝙥𝙥𝙚𝙣𝙨 𝙤𝙣𝙡𝙮 𝙤𝙣 𝙩𝙝𝙚 𝙙𝙖𝙮 𝙤𝙛 𝙑𝙞𝙨𝙝𝙪. 𝙄𝙩 𝙞𝙨 𝙩𝙝𝙚 𝙥𝙚𝙧𝙞𝙤𝙙 𝙤𝙛 𝙣𝙚𝙬 𝙮𝙚𝙖𝙧 𝙛𝙤𝙧 𝙢𝙖𝙣𝙮 𝙖𝙣𝙙 𝙞𝙨 𝙬𝙚𝙡𝙘𝙤𝙢𝙚𝙙 𝙬𝙞𝙩𝙝 𝙜𝙧𝙚𝙖𝙩 𝙝𝙖𝙥𝙥𝙞𝙣𝙚𝙨𝙨 𝙖𝙣𝙙 𝙯𝙚𝙖𝙡 𝙬𝙞𝙩𝙝 𝙩𝙝𝙚 𝙨𝙥𝙞𝙧𝙞𝙩 𝙤𝙛 𝙨𝙚𝙚𝙞𝙣𝙜 𝙖𝙡𝙡 𝙩𝙝𝙚 𝙛𝙧𝙪𝙞𝙩𝙨 𝙖𝙣𝙙 𝙫𝙚𝙜𝙚𝙩𝙖𝙗𝙡𝙚𝙨 𝙜𝙧𝙤𝙬𝙣 𝙖𝙨 𝙩𝙝𝙚 𝙛𝙞𝙧𝙨𝙩 𝙨𝙞𝙜𝙝𝙩 𝙤𝙛 𝙩𝙝𝙚 𝙙𝙖𝙮. 𝙏𝙝𝙞𝙨 𝙞𝙨 𝙘𝙖𝙡𝙡𝙚𝙙 𝙑𝙞𝙨𝙝𝙪 𝙆𝙖𝙣𝙞. 𝙏𝙝𝙞𝙨 𝙮𝙚𝙖𝙧, 𝙑𝙞𝙨𝙝𝙪 𝙛𝙖𝙡𝙡𝙨 𝙤𝙣 𝙁𝙧𝙞𝙙𝙖𝙮 𝙙𝙪𝙧𝙞𝙣𝙜 𝙩𝙝𝙚 𝙨𝙚𝙖𝙨𝙤𝙣 𝙘𝙖𝙡𝙡𝙚𝙙 𝙑𝙖𝙨𝙖𝙣𝙩𝙝𝙖 𝙧𝙞𝙩𝙪 𝙖𝙣𝙙 𝙤𝙣 𝙩𝙝𝙞𝙨 𝙖𝙪𝙨𝙥𝙞𝙘𝙞𝙤𝙪𝙨 𝙤𝙘𝙘𝙖𝙨𝙞𝙤𝙣, 𝙖𝙡𝙡 𝙩𝙝𝙚 𝙫𝙚𝙜𝙚𝙩𝙖𝙗𝙡𝙚𝙨 𝙖𝙣𝙙 𝙛𝙧𝙪𝙞𝙩𝙨 𝙨𝙝𝙖𝙡𝙡 𝙗𝙚 𝙥𝙡𝙖𝙘𝙚𝙙 𝙞𝙣 𝙛𝙧𝙤𝙣𝙩 𝙤𝙛 𝙤𝙪𝙧 𝙗𝙚𝙡𝙤𝙫𝙚𝙙 𝙂𝙤𝙙𝙙𝙚𝙨𝙨 𝙖𝙣𝙙 𝙑𝙞𝙨𝙝𝙪 𝙆𝙖𝙣𝙞 𝙥𝙤𝙤𝙟𝙖 𝙨𝙝𝙖𝙡𝙡 𝙗𝙚 𝙥𝙚𝙧𝙛𝙤𝙧𝙢𝙚𝙙 𝙩𝙤 𝙝𝙚𝙧.
𝐖𝐢𝐭𝐡 𝐭𝐡𝐞 𝐫𝐞𝐬𝐨𝐥𝐮𝐭𝐢𝐨𝐧 𝐭𝐡𝐚𝐭, 𝐦𝐚𝐲 𝐭𝐡𝐢𝐬 𝐧𝐞𝐰 𝐲𝐞𝐚𝐫 𝐛𝐞 𝐭𝐡𝐞 𝐧𝐞𝐰 𝐛𝐞𝐠𝐢𝐧𝐧𝐢𝐧𝐠 𝐢𝐧 𝐨𝐮𝐫 𝐥𝐢𝐯𝐞𝐬. 𝐅𝐫𝐞𝐬𝐡𝐥𝐲 𝐠𝐫𝐨𝐰𝐧 𝐟𝐫𝐮𝐢𝐭𝐬, 𝐯𝐞𝐠𝐞𝐭𝐚𝐛𝐥𝐞𝐬, 𝐩𝐚𝐧𝐜𝐡𝐚𝐧𝐠𝐚 𝐛𝐨𝐨𝐤, 𝐦𝐨𝐧𝐞𝐲, 𝐨𝐫𝐧𝐚𝐦𝐞𝐧𝐭𝐬 𝐦𝐚𝐝𝐞 𝐨𝐟 𝐠𝐨𝐥𝐝 𝐚𝐧𝐝 𝐨𝐭𝐡𝐞𝐫 𝐩𝐫𝐞𝐜𝐢𝐨𝐮𝐬 𝐬𝐭𝐨𝐧𝐞𝐬 𝐞𝐭𝐜 𝐚𝐫𝐞 𝐩𝐥𝐚𝐜𝐞𝐝 𝐢𝐧 𝐟𝐫𝐨𝐧𝐭 𝐨𝐟 𝐦𝐨𝐭𝐡𝐞𝐫 𝐠𝐨𝐝𝐝𝐞𝐬𝐬 𝐢𝐧 𝐚 𝐩𝐥𝐚𝐭𝐞. 𝐀𝐥𝐥 𝐭𝐡𝐞𝐬𝐞 𝐢𝐭𝐞𝐦𝐬 𝐚𝐫𝐞 𝐤𝐞𝐩𝐭 𝐢𝐧 𝐟𝐫𝐨𝐧𝐭 𝐨𝐟 𝐚 𝐦𝐢𝐫𝐫𝐨𝐫. 𝐕𝐢𝐬𝐡𝐮 𝐊𝐚𝐧𝐢 𝐩𝐨𝐨𝐣𝐚 𝐬𝐡𝐚𝐥𝐥 𝐛𝐞 𝐡𝐞𝐥𝐝 𝐢𝐧 𝐭𝐡𝐢𝐬 𝐟𝐚𝐬𝐡𝐢𝐨𝐧 𝐢𝐧 𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢 𝐭𝐞𝐦𝐩𝐥𝐞 𝐭𝐨𝐦𝐨𝐫𝐫𝐨𝐰.😁
Solar new year is famous for its kani and is popularly termed as kani seeing festival. The term kani means predicting the future and in our local terms it is told as beginning our new year with the sight of our beloved goddess Mangalamma as our first and foremost sight of the day and new year.
It is believed that goddess Mangaladevi shall bless us with loads of good fortune there by bringing a lot of fame, glory and success in our lives and shall remove all the obstacles and difficulties from our paths, if we see her as our first sight of the day on the new year. She shall fulfill all the desires and wishes of her devotees who visit her with devotion and strong faith on this auspicious day.
From ancient times, it is in practice in the temple premises to read the panchanga and shall understand the good and bad fortunes told in it and inform the same to the people.
𝐏𝐚𝐧𝐜𝐡𝐚𝐧𝐠𝐚 𝐥𝐢𝐭𝐞𝐫𝐚𝐥𝐥𝐲 𝐦𝐞𝐚𝐧𝐬 𝐟𝐢𝐯𝐞 𝐚𝐧𝐠𝐚𝐬 𝐨𝐫 𝐥𝐢𝐦𝐛𝐬. 𝐓𝐡𝐞𝐲 𝐚𝐫𝐞 ‘𝐯𝐚𝐚𝐫𝐚, 𝐭𝐡𝐢𝐭𝐡𝐢, 𝐧𝐚𝐤𝐬𝐡𝐚𝐭𝐫𝐚, 𝐲𝐨𝐠𝐚 𝐚𝐧𝐝 𝐊𝐚𝐫𝐚𝐧𝐚’. 𝐈𝐭 𝐬𝐩𝐞𝐚𝐤𝐬 𝐚𝐛𝐨𝐮𝐭 𝐭𝐡𝐞 𝐰𝐨𝐫𝐭𝐡𝐢𝐧𝐞𝐬𝐬 𝐚𝐧𝐝 𝐜𝐡𝐚𝐫𝐦 𝐟𝐨𝐫 𝐚 𝐩𝐚𝐫𝐭𝐢𝐜𝐮𝐥𝐚𝐫 𝐝𝐚𝐲 𝐚𝐜𝐜𝐨𝐫𝐝𝐢𝐧𝐠 𝐭𝐨 𝐡𝐢𝐧𝐝𝐮𝐬. 𝐔𝐠𝐚𝐝𝐢 𝐢𝐬 𝐭𝐡𝐞 𝐩𝐞𝐫𝐢𝐨𝐝 𝐰𝐡𝐞𝐧 𝐭𝐡𝐢𝐬 𝐩𝐚𝐧𝐜𝐡𝐚𝐧𝐠𝐚 𝐢𝐬 𝐛𝐞𝐞𝐧 𝐰𝐨𝐫𝐬𝐡𝐢𝐩𝐩𝐞𝐝. 𝐈𝐭 𝐬𝐩𝐞𝐚𝐤𝐬 𝐚𝐛𝐨𝐮𝐭 𝐭𝐡𝐞 𝐡𝐚𝐩𝐩𝐞𝐧𝐢𝐧𝐠𝐬 𝐢𝐧 𝐭𝐡𝐢𝐬 𝐧𝐞𝐰 𝐲𝐞𝐚𝐫 𝐜𝐚𝐥𝐥𝐞𝐝 𝐩𝐥𝐚𝐯𝐚, 𝐢𝐭 𝐬𝐩𝐞𝐚𝐤𝐬 𝐚𝐛𝐨𝐮𝐭 𝐭𝐡𝐞 𝐫𝐚𝐢𝐧𝐬 𝐥𝐢𝐤𝐞 𝐰𝐡𝐞𝐧 𝐬𝐡𝐚𝐥𝐥 𝐢𝐭 𝐛𝐞 𝐦𝐨𝐫𝐞 𝐨𝐫 𝐰𝐡𝐞𝐧 𝐰𝐢𝐥𝐥 𝐢𝐭 𝐛𝐞 𝐥𝐞𝐬𝐬, 𝐡𝐨𝐰 𝐠𝐨𝐨𝐝 𝐰𝐨𝐮𝐥𝐝 𝐛𝐞 𝐭𝐡𝐞 𝐡𝐚𝐫𝐯𝐞𝐬𝐭 𝐬𝐞𝐚𝐬𝐨𝐧𝐬, 𝐭𝐡𝐞 𝐩𝐞𝐫𝐢𝐨𝐝 𝐚𝐧𝐝 𝐞𝐟𝐟𝐞𝐜𝐭 𝐨𝐟 𝐭𝐡𝐞 𝐩𝐥𝐚𝐧𝐞𝐭𝐬 𝐨𝐧 𝐭𝐡𝐞 12 𝐳𝐨𝐝𝐢𝐚𝐜 𝐬𝐢𝐠𝐧𝐬 𝐞𝐭𝐜 𝐬𝐡𝐚𝐥𝐥 𝐛𝐞 𝐭𝐨𝐥𝐝 𝐨𝐧 𝐭𝐡𝐢𝐬 𝐚𝐮𝐬𝐩𝐢𝐜𝐢𝐨𝐮𝐬 𝐝𝐚𝐲 𝐢𝐧𝐟𝐫𝐨𝐧𝐭 𝐨𝐟 𝐠𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢 𝐛𝐲 𝐤𝐞𝐞𝐩𝐢𝐧𝐠 𝐡𝐞𝐫 𝐚𝐬 𝐭𝐡𝐞 𝐰𝐢𝐭𝐧𝐞𝐬𝐬 𝐨𝐫 𝐭𝐞𝐬𝐭𝐚𝐦𝐞𝐧𝐭 𝐭𝐨 𝐭𝐡𝐞 𝐡𝐚𝐩𝐩𝐞𝐧𝐢𝐧𝐠𝐬 𝐢𝐧 𝐭𝐡𝐢𝐬 𝐰𝐡𝐨𝐥𝐞 𝐲𝐞𝐚𝐫 𝐛𝐞𝐠𝐢𝐧𝐧𝐢𝐧𝐠 𝐟𝐫𝐨𝐦 𝐭𝐨𝐦𝐨𝐫𝐫𝐨𝐰 𝐮𝐧𝐭𝐢𝐥 𝐭𝐡𝐞 𝐧𝐞𝐱𝐭 𝐔𝐠𝐚𝐝𝐢 𝐰𝐡𝐞𝐧 𝐭𝐡𝐞 𝐒𝐮𝐧 𝐜𝐨𝐦𝐞𝐬 𝐛𝐚𝐜𝐤 𝐭𝐨 𝐀𝐫𝐢𝐞𝐬 𝐟𝐫𝐨𝐦 𝐩𝐢𝐞𝐜𝐞𝐬. 𝐓𝐡𝐞 𝐔𝐠𝐚𝐝𝐢 𝐜𝐞𝐥𝐞𝐛𝐫𝐚𝐭𝐞𝐝 𝐢𝐧 𝐭𝐡𝐢𝐬 𝐦𝐚𝐧𝐧𝐞𝐫 𝐬𝐡𝐚𝐥𝐥 𝐛𝐫𝐢𝐧𝐠 𝐥𝐨𝐚𝐝𝐬 𝐨𝐟 𝐚𝐮𝐬𝐩𝐢𝐜𝐢𝐨𝐮𝐬 𝐫𝐞𝐬𝐮𝐥𝐭𝐬 𝐢𝐧𝐭𝐨 𝐨𝐮𝐫 𝐥𝐢𝐯𝐞𝐬.
As the new saplings arising out from the old roots, may the bitterness of the past fade away and bring the spirit of happiness in the upcoming days and weeks of this new year. May the new year be the witness to the lovely atmosphere that we shall live in the upcoming days.👏