🔱💐𝑃𝑈𝑁𝐴𝑅 𝑃𝑅𝐴𝑇𝐼𝑆𝑇𝐴 𝑀𝐴𝐻𝑂𝑇𝑆𝐴𝑉💐🔱
𝖠 𝗁𝖾𝖺𝗋𝗍𝖿𝖾𝗅𝗍 𝗐𝖾𝗅𝖼𝗈𝗆𝖾 𝗍𝗈 𝖺𝗅𝗅 𝖿𝗈𝗋 𝗍𝗁𝖾 𝖲𝗋𝗂 𝐌𝐚𝐧𝐠𝐚𝐥𝐚𝐝𝐞𝐯𝐢 𝐀𝐦𝐦𝐚’𝐬 34’𝐭𝐡 𝐲𝐞𝐚𝐫 𝖯𝗎𝗇𝖺𝗋 𝖯𝗋𝖺𝗍𝗂𝗌𝗍𝖺 𝖼𝖾𝗅𝖾𝖻𝗋𝖺𝗍𝗂𝗈𝗇.
Blessed by Goddess Mangalamba, Mangaladevi Kashetra is a sacred land active with abundant religious ceremonies, celebrations and festivities. Goddess Mangaladevi fullfills all the wishes and desires of the people who come to her abode, She is the one who provides all the necessities to the people of this land and attracts everyone towards her with her mere beauty and godly powers. Being caught in the hardship of the Samsaara (family), she is only one who can provide peace from all the hardships faced.👏
For our beloved Mother Goddess Mangalamma, who is merrily residing in our hearts, it is the 34th PunarPratista ( a day when there were substancial changes been done in the outlook of the temple) day. As per her will and desire this year, the Punar pratista day shall be celebrated in a grand manner with Gana Homa and Pancha vishanti Kalashabhishekham to be held to goddess along with the Maha pooja performed to her in the afternoon and in the night. Afterwards There shall be Bali utsava, small chariot procession, and also the Vasantha Mantapa Pooja.
She is residing in the hearts of each and every devotees and is ever ready to protect/rescue us from all calamities and disasters that is taking place in and around us. Let us all bow to her divine feet seeking protection and help to fulfill all our wishes and do things that are good to us in our lives. 👏
✨𝐇𝐢𝐬𝐭𝐨𝐫𝐲 𝐛𝐞𝐡𝐢𝐧𝐝 𝐭𝐡𝐞 𝐏𝐮𝐧𝐚𝐫 𝐏𝐫𝐚𝐭𝐢𝐬𝐭𝐚✨
Devotees who once come and bow down to the Goddess, the one is responsible for everything that is happening in this world, come again and again to her. Such is the attraction of the power of our beloved goddess. They bow down in reverence for the sanctity of the temple. Mangaladevi temple is one of the countries significant shrines and pilgrimage destinations of Shaktism. Marching towards the path of development and actively participating in the social welfare and religious activities, we need to bow down to the richness of this great temple.
𝙏𝙝𝙚𝙧𝙚 𝙞𝙨 𝙖 𝙨𝙞𝙜𝙣𝙞𝙛𝙞𝙘𝙖𝙣𝙩 𝙞𝙢𝙥𝙤𝙧𝙩𝙖𝙣𝙘𝙚 𝙩𝙤 𝙩𝙝𝙚 𝙩𝙤𝙢𝙤𝙧𝙧𝙤𝙬’𝙨 𝙙𝙖𝙩𝙚 𝙈𝙖𝙮 17𝙩𝙝 , 𝙏𝙪𝙚𝙨𝙙𝙖𝙮. 𝙄𝙩 𝙞𝙨 𝙖𝙣 𝙖𝙪𝙨𝙥𝙞𝙘𝙞𝙤𝙪𝙨 𝙥𝙚𝙧𝙞𝙤𝙙 𝙞𝙣 𝙤𝙪𝙧 𝙡𝙞𝙫𝙚𝙨 (𝙢𝙪𝙝𝙪𝙧𝙩𝙝). 𝙄𝙩 𝙞𝙨 𝙩𝙝𝙚 𝙥𝙚𝙧𝙞𝙤𝙙 𝙩𝙤 𝙛𝙪𝙡𝙡𝙛𝙞𝙡𝙡 𝙖𝙡𝙡 𝙤𝙪𝙧 𝙧𝙚𝙨𝙤𝙡𝙪𝙩𝙞𝙤𝙣𝙨. 𝙔𝙚𝙨 !! 𝙏𝙤𝙢𝙤𝙧𝙧𝙤𝙬 𝙞𝙨 𝙩𝙝𝙚 𝙙𝙖𝙮 𝙬𝙝𝙚𝙣 𝙩𝙝𝙚 𝙥𝙪𝙣𝙖𝙧 𝙥𝙧𝙖𝙩𝙞𝙨𝙩𝙖 𝙬𝙖𝙨 𝙙𝙤𝙣𝙚 𝙩𝙤 𝙤𝙪𝙧 𝙗𝙚𝙡𝙤𝙫𝙚𝙙 𝙂𝙤𝙙𝙙𝙚𝙨𝙨. 𝙁𝙧𝙤𝙢 17’𝙩𝙝 𝙈𝙮 1989 𝙩𝙤 17𝙩𝙝 𝙈𝙖𝙮 2022, 𝙞𝙩 𝙞𝙨 𝙗𝙚𝙞𝙣𝙜 33 𝙮𝙚𝙖𝙧𝙨 𝙨𝙞𝙣𝙘𝙚 𝙩𝙝𝙞𝙨 𝙗𝙚𝙖𝙪𝙩𝙞𝙛𝙪𝙡 𝙢𝙤𝙢𝙚𝙣𝙩 𝙝𝙖𝙫𝙚 𝙥𝙖𝙨𝙨𝙚𝙙 𝙖𝙣𝙙 𝙬𝙞𝙡𝙡 𝙗𝙚 𝙩𝙝𝙚 𝙘𝙖𝙪𝙨𝙚 𝙛𝙤𝙧 𝙪𝙨 𝙩𝙤 𝙧𝙚𝙘𝙚𝙞𝙫𝙚 𝙛𝙪𝙡𝙡 𝙜𝙧𝙖𝙘𝙚 𝙛𝙧𝙤𝙢 𝙤𝙪𝙧 𝙗𝙚𝙡𝙤𝙫𝙚𝙙 𝙜𝙤𝙙𝙙𝙚𝙨𝙨.
𝙏𝙝𝙞𝙨 𝙘𝙚𝙣𝙩𝙪𝙧𝙞𝙚𝙨 𝙤𝙡𝙙 𝙩𝙚𝙢𝙥𝙡𝙚 𝙬𝙖𝙨 𝙞𝙣 𝙖 𝙙𝙞𝙧𝙚 𝙨𝙩𝙖𝙩𝙚, 33 𝙮𝙚𝙖𝙧𝙨 𝙖𝙜𝙤 𝙙𝙪𝙧𝙞𝙣𝙜 𝙩𝙝𝙚 𝙥𝙚𝙧𝙞𝙤𝙙 𝙤𝙛 1980’𝙨. 𝙒𝙞𝙩𝙝 𝙩𝙝𝙚 𝙜𝙧𝙖𝙘𝙚 𝙤𝙛 𝙜𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞, 𝙩𝙝𝙚 𝙩𝙚𝙢𝙥𝙡𝙚 𝙬𝙖𝙨 𝙗𝙧𝙤𝙪𝙜𝙝𝙩 𝙗𝙖𝙘𝙠 𝙩𝙤 𝙞𝙩’𝙨 𝙛𝙪𝙡𝙡 𝙜𝙡𝙤𝙧𝙮 𝙖𝙛𝙩𝙚𝙧 𝙩𝙝𝙚 𝙧𝙚𝙣𝙤𝙫𝙖𝙩𝙞𝙤𝙣 𝙬𝙤𝙧𝙠 𝙗𝙚𝙞𝙣𝙜 𝙙𝙤𝙣𝙚 𝙞𝙣 𝙩𝙝𝙚 𝙮𝙚𝙖𝙧 1989.
𝙒𝙞𝙩𝙝 𝙩𝙝𝙚 𝙗𝙡𝙚𝙨𝙨𝙞𝙣𝙜𝙨 𝙤𝙛 𝙩𝙝𝙚 𝙂𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞, 𝘼𝙨 𝙥𝙚𝙧 𝙝𝙞𝙣𝙙𝙪 𝙘𝙖𝙡𝙚𝙣𝙙𝙚𝙧, 𝙨𝙬𝙖𝙨𝙩𝙞 𝙨𝙧𝙞 𝙎𝙝𝙪𝙠𝙡𝙖 𝙉𝙖𝙢𝙖 𝙎𝙖𝙢𝙫𝙖𝙩𝙨𝙖𝙧𝙖 (𝙮𝙚𝙖𝙧 𝙘𝙖𝙡𝙡𝙚𝙙 𝙨𝙝𝙪𝙠𝙡𝙖), 𝙑𝙖𝙨𝙖𝙣𝙩𝙝𝙖 𝙧𝙞𝙩𝙪 ( 𝙨𝙥𝙧𝙞𝙣𝙜 𝙨𝙚𝙖𝙨𝙤𝙣), 𝙐𝙩𝙩𝙖𝙧𝙖𝙮𝙖𝙣𝙖 (𝙨𝙪𝙢𝙢𝙚𝙧 𝙎𝙤𝙡𝙨𝙩𝙞𝙘𝙚), 𝙢𝙤𝙣𝙩𝙝 𝙣𝙖𝙢𝙚𝙙 𝙑𝙖𝙞𝙨𝙝𝙖𝙠𝙝𝙖, 𝙎𝙝𝙪𝙠𝙡𝙖 𝙥𝙖𝙠𝙨𝙝𝙖 ( 𝙖𝙨𝙘𝙚𝙣𝙙𝙞𝙣𝙜 (𝙬𝙖𝙭𝙞𝙣𝙜) 𝙥𝙝𝙖𝙨𝙚 𝙤𝙛 𝙩𝙝𝙚 𝙢𝙤𝙤𝙣 ), 17’𝙩𝙝 𝙬𝙚𝙙𝙣𝙚𝙨𝙙𝙖𝙮, 𝙋𝙪𝙣𝙖𝙧 𝙥𝙧𝙖𝙩𝙞𝙨𝙩𝙖 𝙬𝙖𝙨 𝙜𝙡𝙤𝙧𝙞𝙤𝙪𝙨𝙡𝙮 𝙛𝙪𝙡𝙛𝙞𝙡𝙡𝙚𝙙 𝙖𝙩 𝙩𝙝𝙖𝙩 𝙩𝙞𝙢𝙚, 𝙬𝙝𝙞𝙘𝙝 𝙘𝙖𝙣 𝙣𝙚𝙫𝙚𝙧 𝙗𝙚 𝙛𝙤𝙧𝙜𝙤𝙩𝙩𝙚𝙣 𝙞𝙣 𝙩𝙝𝙚 𝙝𝙞𝙨𝙩𝙤𝙧𝙮 𝙤𝙛 𝙩𝙝𝙞𝙨 𝙜𝙧𝙚𝙖𝙩 𝙩𝙚𝙢𝙥𝙡𝙚.🙏
In these 33 years after the completion of the purna pratista, goddess has made sure that she has renovated the interior and outer regions of the temple time and again with her will. Sitting majestically inside the sanctum sanctroum of the temple like a beautiful queen, it is her orders/will that presides the renovation works and it is indeed a bliss to see her change the temple according to the current prevailing style and generation.
𝐀𝐜𝐜𝐨𝐫𝐝𝐢𝐧𝐠 𝐭𝐨 𝐭𝐡𝐞 𝐡𝐢𝐧𝐝𝐮 𝐜𝐚𝐥𝐞𝐧𝐝𝐞𝐫 𝐜𝐚𝐥𝐥𝐞𝐝 𝐩𝐚𝐧𝐜𝐡𝐚𝐧𝐠𝐚, 𝐭𝐡𝐢𝐬 𝐲𝐞𝐚𝐫 𝐩𝐫𝐚𝐭𝐢𝐬𝐭𝐚 𝐝𝐚𝐲 𝐟𝐚𝐥𝐥𝐬 𝐨𝐧 𝐭𝐡𝐞 𝐒𝐰𝐚𝐬𝐭𝐢 𝐒𝐫𝐢 𝐒𝐡𝐮𝐛𝐡𝐚𝐤𝐫𝐢𝐭𝐡 𝐧𝐚𝐦𝐚 𝐬𝐚𝐦𝐯𝐚𝐭𝐬𝐚𝐫𝐚 (𝐲𝐞𝐚𝐫 𝐜𝐚𝐥𝐥𝐞𝐝 𝐒𝐡𝐮𝐛𝐡𝐚𝐤𝐫𝐢𝐭𝐡), 𝐢𝐧 𝐭𝐡𝐞 𝐕𝐚𝐬𝐚𝐧𝐭𝐡𝐚 𝐠𝐫𝐢𝐬𝐡𝐦𝐚 𝐫𝐢𝐭𝐮 (𝐬𝐮𝐦𝐦𝐞𝐫 𝐬𝐞𝐚𝐬𝐨𝐧), 𝐯𝐚𝐢𝐬𝐡𝐚𝐤𝐡𝐚 𝐦𝐨𝐧𝐭𝐡, 𝐮𝐭𝐭𝐚𝐫𝐚𝐲𝐚𝐧𝐚 (𝐬𝐮𝐦𝐦𝐞𝐫 𝐬𝐨𝐥𝐬𝐭𝐢𝐜𝐞), 𝐬𝐡𝐮𝐤𝐥𝐚 𝐩𝐚𝐤𝐬𝐡𝐚 (𝐰𝐚𝐱𝐢𝐧𝐠 𝐩𝐡𝐚𝐬𝐞 𝐨𝐟 𝐭𝐡𝐞 𝐦𝐨𝐨𝐧), 𝐓𝐮𝐞𝐬𝐝𝐚𝐲, 𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢’𝐬 𝐩𝐮𝐧𝐚𝐫 𝐩𝐫𝐚𝐭𝐢𝐬𝐭𝐚 𝐝𝐚𝐲 𝐬𝐡𝐚𝐥𝐥 𝐛𝐞 𝐜𝐞𝐥𝐞𝐛𝐫𝐚𝐭𝐞𝐝 𝐢𝐧 𝐠𝐫𝐚𝐧𝐝𝐞𝐮𝐫.
The Name Mangaladevi itself contains auspiciousness in it. Mangala in regional languages mean Good, auspicious. There is a direct link between the Mangaladevi temple and the city named Mangalore, the divine name Mangaladevi is associated with the Mangalore city. It is because of the Goddess Mangaladevi, this city came to called Mangalapura, Mangalore etc.
The city of Mangalore was ruled by the mighty rulers of the Alupa dynasty. From time to time, renovation works was in progress and was done by various rulers of the Alupa dynasty. King Kundavarma, who ruled Mangalapura from 950 A.D to 980 A.D, is said to have renovated the Kadali Manjunatha temple and Mangaladevi temple at the same time in the year 960 A.D
In Skanda purana, it is said that, Bangaraja who came after the reigns of Kundavarma, of Alupa dynasty, built the city of Mangalore as per the orders given by Goddess Mangaladevi in the kings dream. It is understood that Bangaraja ruled the city of Mangalapura from the year 1157 AD but we are unable to pin point the name of the king who built the Mangalapura town upon the orders of the goddess. It is in belief that the Mangaladevi temple was built and renovation works were carried out even before the 8th century AD.
With all these significance, mythological and historical, the glorious backdrop of Mangalore, the famous Mahatobara Sri Mangaladevi Temple was completely dilapidated during the 1986 – 1987 period.
According to the tabular present the outside the temple, it is written that, Mangaladevi temple was renovated by the last ruler Veera Pandya II in the year 1390. After this the temple had undergone renovations at various stages from the year 1390 to 1987 by the people who stayed nearby the temple premises.
𝐀𝐫𝐨𝐮𝐧𝐝 1987, 𝐛𝐞𝐟𝐨𝐫𝐞 𝐥𝐚𝐲𝐢𝐧𝐠 𝐭𝐡𝐞 𝐟𝐨𝐮𝐧𝐝𝐚𝐭𝐢𝐨𝐧 𝐬𝐭𝐨𝐧𝐞 𝐭𝐨 𝐭𝐡𝐞 𝐧𝐞𝐰 𝐭𝐞𝐦𝐩𝐥𝐞, 𝐭𝐡𝐞 𝐎𝐫𝐢𝐠𝐢𝐧𝐚𝐥 𝐟𝐨𝐫𝐦 𝐨𝐟 𝐭𝐡𝐞 𝐠𝐨𝐝𝐝𝐞𝐬𝐬 𝐰𝐚𝐬 𝐦𝐨𝐯𝐞𝐝 𝐟𝐫𝐨𝐦 𝐭𝐡𝐞 𝐬𝐚𝐧𝐜𝐭𝐮𝐦 𝐬𝐚𝐧𝐜𝐭𝐫𝐨𝐮𝐦 𝐭𝐨 𝐭𝐡𝐞 𝐜𝐮𝐫𝐫𝐞𝐧𝐭 𝐋𝐨𝐫𝐝 𝐆𝐚𝐧𝐞𝐬𝐡𝐚’𝐬 𝐩𝐫𝐞𝐬𝐢𝐝𝐢𝐧𝐠 𝐩𝐥𝐚𝐜𝐞 𝐚𝐬 𝐚 𝐩𝐚𝐫𝐭 𝐨𝐟 𝐭𝐡𝐞 𝐩𝐫𝐞-𝐩𝐥𝐚𝐧 𝐚𝐭 𝐚 𝐬𝐮𝐢𝐭𝐚𝐛𝐥𝐞 𝐭𝐢𝐦𝐞 𝐩𝐫𝐞𝐬𝐜𝐫𝐢𝐛𝐞𝐝 𝐛𝐲 𝐭𝐡𝐞 𝐓𝐚𝐧𝐭𝐫𝐢 𝐚𝐟𝐭𝐞𝐫 𝐜𝐨𝐧𝐝𝐮𝐜𝐭𝐢𝐧𝐠 𝐚 𝐫𝐢𝐭𝐮𝐚𝐥 𝐜𝐚𝐥𝐥𝐞𝐝 𝐭𝐡𝐞 ‘𝐀𝐬𝐭𝐚 𝐌𝐚𝐧𝐠𝐚𝐥𝐚 𝐩𝐫𝐚𝐬𝐡𝐧𝐞’. 𝐀 𝐁𝐚𝐚𝐥𝐚𝐥𝐚𝐲𝐚 (𝐀 𝐭𝐞𝐦𝐩𝐨𝐫𝐚𝐫𝐲 𝐬𝐡𝐞𝐥𝐭𝐞𝐫) 𝐰𝐚𝐬 𝐛𝐮𝐢𝐥𝐭 𝐭𝐨 𝐭𝐡𝐞 𝐠𝐨𝐝𝐝𝐞𝐬𝐬 𝐚𝐧𝐝 𝐭𝐡𝐞 𝐝𝐚𝐢𝐥𝐲 𝐫𝐢𝐭𝐮𝐚𝐥𝐬 𝐚𝐥𝐨𝐧𝐠 𝐰𝐢𝐭𝐡 𝐭𝐡𝐞 𝐏𝐨𝐨𝐣𝐚𝐬 𝐚𝐬 𝐩𝐫𝐞𝐬𝐜𝐫𝐢𝐛𝐞𝐝 𝐢𝐧 𝐭𝐡𝐞 𝐯𝐞𝐝𝐢𝐜 𝐭𝐞𝐱𝐭𝐬 𝐰𝐞𝐫𝐞 𝐜𝐨𝐧𝐝𝐮𝐜𝐭𝐞𝐝 𝐭𝐨 𝐭𝐡𝐞 𝐠𝐨𝐝𝐝𝐞𝐬𝐬 𝐝𝐮𝐫𝐢𝐧𝐠 𝐭𝐡𝐢𝐬 𝐩𝐞𝐫𝐢𝐨𝐝.
In order to fulfill all the aspirations of the religious heritage, the construction of the new temple began by demolishing of the old structures and creating a new one instead which is very beautiful and atractive.
The Archeological department that comes under the central government of India, took over the control of the Mangaladevi temple for it’s historical importance. Even today, the archeological department, legally, renovates the temple from time to time, as and when it is required. The main financial contribution to the construction of the new temple was given by this department along with the donations received from the devotees. A newly built sanctum sactorum and the outer surroundings of the temple were constructed during this period in the year 1988 – 1989.
In the newly constructedtemple, a Kalasha had to be placed in the peak of the main sanctum sanctroum of the temple, as per the vedic rituals to mark the completion of the renovation work and revive the presence of Goddess Mangaladevi inside it. This beautiful moment was held on wednesday, May 17th 1989
Under the guidance of Nileshwar Padmanabha Tantri, The main Priest Ramachandra Aithal, M Namadeva Shenoy, who was the chief administratrive officer of the temple the punar pratista Mahotsav of Sri Mangaladevi was held in great grandeur in the presence of thousands of her beloved devotees. Thus by the presence of Mangaladevi, this land became a heavenly abode on this planet.
The original form of the Goddess was brought to the newly built sanctum sanctorum from the temporary shelter built before the renovation work began. The goddess was placed on the Main Paani peeta (seat) after placing the Asta bandha lepa (a herbal mixture of eight elements placed to fit the moola roopa in the seat tightly). It seemed as though the goddess was very pleased and merrily rejoicing in the newly renovated sanctum sanctorum and showered her blessings upon her devotees in the form of a heavy rain.
Thousand of devotees witnessed the vedic rituals being held as a part of punar pratista that began even before the sunrise. Even the non believers praised the success of this grand event held with great devotion and brother hood by her devotees. There was a Hari katha short story called ‘Sri Mangaladevi Mahatme’ was performed by the renowned artist Bhadragiri Achutadasa on this celebration in the night.
From then till today, it is customary to celebrate the punar pratista of Sri Devi on a regular basis on May 17’th each year with great grandeur and zeal.
Today the temple has reached its highest position with the blessings of Sri Mangaladevi and has turned into an eternal guide to her devotees. The powress of the goddess Mangaladevi has grown exponentially by the performance of the Trikaala pooja, Abhishekha and other vedic rituals done by the priests with great devotion. Mangaladevi who resides in the Linga form, fullfils all the wishes and rightful desires of her beloved devotees who come to her abode surrendering themselves completely to her and is the reason behind the inspiration for the renovation and other developments being done in the temple. It is with her sheer will and wish that all the renovation and other developments are being done by the temple authorities.
Around one and a half centuries ago, Sri Subbaraya Bhat handed over the worship and temple pooja rituals to Gangadhar Aithal, belonging to the barkoor. This marked the begining of the Pooja seva performed by the families belonging to the Gangadhar Aithal. The pooja is performed to the goddess accoring to the shaivism and the families who conduct the pooja to the goddess change every year. 14 families belonging to the Aithal sect and 2 from the Upadhyaya sect take turns every year to perform the pooja to the goddess. one out of these 16 families perform the pooja to the goddess from the month of Karkataka until the same month, next year. Thus these families, inturn circulate the pooja services offered to goddess by their familes in an yearly manner.
The construction of the present temple is magnificent and includes many specialties. Situated at the intersection of three roads, it is located facing the east. As we enter the premises of the temple, we can see a huge pupil tree standing high up into the sky.
Statues of Naga Devathas are present below this tree and are present directly facing the main entrance of the temple. We can see Maha Bali peeta being placed at the entrance of the temple and a flag pole having twice the height of the temple. Besides these, we can see the circumbulation path (pradakshina patha), a hall for cultural events and a main hall. The front of the entrance of the temple is decorated with a triangular doorway in the style of Kerala and as a decorative part, we can find Shri Devi Navratri’s decorative wall posters here.
As we enter the temple, We can find the temple’s administrative office to its left, interiors and also the Roof columns having an artistic wooden enclosing on its top. We can also find brass suspension bells on both the sides, that can be rung while the Maha pooja is in progress to the goddess. accommodate during worship. The entire space in the front yard is being carved out of two pillars. On the outskirts of the sanctum sanctorum, we can find the circumbulation path along with the statues of the Dwara Palakies (Gate keepers) holding a trident in their hands. The RangaMantapa infront of the sanctum sanctorum, consists of a roof top made up of wooden cravings and a lion seated right infront of the goddess.
To the right of the sanctum sactorum, we can find a grand statues of sage Veda Vyasa unveiling the story of Mahabharataha to lord Ganapathi, who is inturn making a note of it using his broken right teeth on a palm leaf. Next to this wall carving, we can find the treasure room of the temple consisting of valuable items like golden and diamond ornaments of the goddess, her palanquin, umbrella, chamara (Traditional fan) etc. Sanctum sactorum of the Goddess, the presence of Lord Mahaganapathy, the gaurdians dieties like Raktheshwari, Nandi Kona, Guligeshwar. A Tulasi plant along with the temple kitchen room and a place where the prasadam are packed can be seen in the inner courtyards of the Temple.
Cleanliness, Sanctity, Loyal staff members, Selfless service done by the Volunteers and the pooja done by the Priests with great devotion etc are few of the hallmarks of this great centuries old temple.
Culturals are given a great prominence in the temple. Cultural programs such as literature, oration given by great scholars on different topics like bhagavath geethaa and other mythological stories and their importance in our lives, the folk art of the district – Yakshagana, Harikatha etc. are arranged every day in the temple. Sri Devi Mahatme and its legendary chapters are performed successfully by the yakshagana artists belonging to the Sri Mangaladevi Yakshagana mela. This mela was created to safegaurd the cultural and folk arts of this district.
The temple of Mangaladevi, which gives peace of mind to all of us, is on the path of development as each day progresses.
❁Brahmakalashotsava and punar pratista was performed to the beloved goddess in the newly constructed temple,in the year 1989. ✻
❁ Dhanur maasa pooja was started as a part of service to goddess in the year 1993.✻
❁ March 15th, 1998, Sunday, foundation for the new flag pole was laid from the divine hands of ‘Jagadguru Bharathi teertha Swamiji’, seer belonging to the Sringeri Sharadha Mutt. ✻
❁ Brahmakalashotsava was performed to the goddess in the year 2002. The Brahma kalashotsava is performed every 12 years to increase the presence and powress of the goddess present in the temple. On this occassion a Kerala model style, triangular doorway, with images of the Goddess carved on it was installed. ✻
❁ March 23rd, 2002, Thursday, a Sun rays prabhavali (a representation of a halo in art, as a radiance-circle painted surrounding the head or a decorated wheel sculpted behind the head of an idol) made of silver and a Silver Axe (Bhargava kodali / representing the axe of Parasurama) was offerd to the goddess on the occassion of Annual jathra Mahotsav. ✻
❁ May 10th, 2002, Friday the welcome gateway was constructed besides the Mahanavami katte and was inaugrated by the Udupi Sri Krishna Mutt, Pejawara seer ‘Sri Visvesha Tirtha Sripadangalu’. ✻
❁ October 12th, 2002, Friday, on the first day of Navaratri, a Silver covering was presented to the gateway belonging to the entrance of the temple. On the same occassion, Anna santarpana commenced and on each friday, nutritious food is being provided to the devotees after the afternoon Mahapooja. This programme of Anna Santarpana continues till date without anyhindarance. ✻
❁ On the occassion of Navaratri in the year 2008, a new built modular kitchen and Vasantha Mantapa were offered to the divine feet of the goddess. ✻
❁ October 8th, 2010, on the first day of Navaratri, a silver covering was presented to the doors of main entrance to the temple along with a golden face was offered to the goddess. ✻
❁ Covering made up of gold was offered to Lord Ganesha on the occassion of Ganesh Chaturthi on 1st September 2011, thursday. ✻
❁ October 5th, 2013, on the first day of Navaratri, construction of a new roof cover was done in the inner and outer courtyards of the temple and was offered to the divine feet of the goddess. ✻
❁ 2015, March 4th to 15th, brahmakalashotsava was performed in the temple. On this occassion golden folwer mirror was offered to the festive diety of Sri Mangaladevi and a new seva counter was built and presented to the temple and on the occassion of Navratri, stone slabs were put in the main hall. ✻
❁ October 2’nd, Sunday,2016, on the occassion of Navaratri, Golden eyes were offered to the original idol of goddess Mangaladevi. ✻
❁ March 5th, 2018, tuesday, a five headed snake prabhavali made up of silver was placed on top of the main door to the entrance of the temple and was offered to the lotus feet of the goddess Mangaladevi. ✻
❁ October 10, 2018, wednesday, during the occassion of Navratri, copper and silver plated cover was dedicated to the seat of the flag pole of the temple. ✻
❁ October 29th, 2019, on the occassion of Navaratri, Shri Devi was offered with a new wooden hand on her right hand holding the abhaya mudra.✻
❁ To wash the soiled plates of the anna santarpana program, dish washer was dedicated on March 20th 2021, tuesday during the annual jathra mahotsav celebrations.✻
❁ Feb 21st 2021, Monday to March 28th Sunday, work done for more than a month, the inner and outer courtyards stone slabs where replaced with granite stones. ✻
It is with the blessings and wish of Sri Mangallamba all these renovation works were possible. She is the only one who is responsible for the upliftment of our temple, leading to its steadyprogress from time to time.
With the grace and blessings of goddess Mangaladevi, many of her devotees have overcome various difficulties in their paths of life. The Mother who gives us all the good fortune to be blessed with, has timely accepted our services done with love and devotion, also taken these services from us, herself on few occassions and ensured that this temple and her powress has grown so immensely with the progress of the time. We need to be thankful to our beloved goddess for allowing us to have glimpses of her majestic looks, merrily rejoicing in the inner sanctum sanctorum of the temple like a royal queen.
Tomorrow’s day shall mark the completion of 33 long years after the renovation works were fully completed in the temple. On this auspicious occassion, may the goddess bestow upon us and the whole world, a good fortune, good health and longevity.
May this punar pratista mahotsav be an occassion for us to receive her complete blessings filled with motherly love, care and affection. May all the righteous people enjoy the fruits of this celebration and bestow goodness back in their lives. Let us all be blessed with more opprotunities to do her service with great devotion and gratitude and reap the benefits of it in our lives ahead.
🌼♦️‹°ಶ್ರೀ ಮಂಗಳಾದೇವಿ ಅಮ್ಮನವರ ೩೩’ನೇ ವರ್ಷದ ಪುನರ್ ಪ್ರತಿಷ್ಠಾ ಮಹೋತ್ಸವ°›♦️🌼
✨ ೧೯೮೯ ಮೇ ೧೭ ~ ೨೦೨೨ ಮೇ ೧೭ ✨
ನಮ್ಮ ಆರಾಧ್ಯಮೂರ್ತಿ ಪ್ರೀತಿಯ ಮಂಗಳಮ್ಮನಿಗೆ ೩೪’ನೇ ಪುನರ್ಪತಿಷ್ಠಾ ವರ್ಧಂತಿಯ ಉತ್ಸವ. ” ತ್ವದ್ಭಕ್ತಿಯುಕ್ತಾರ್ಧಾ ಮಂಜುನಾಥ ಪ್ರಸಾದಿನಿ| ನಿವಸಾಮ್ಯತ್ರ ಸುಖಿನೀ ಸಹ ನಿತ್ಯ ಮಹೋತ್ಸವಾ ಉಪಾರೈರಮೋಘಾರ್ಥೈಃ|| ಯೇ ಮಾ ಮತ್ರತ ಮಾನವಾಃ ಪೂಜಯಂತ್ಯೇವಮೇತೇಭ್ಯೋದದಾಮಿ ಮಹತೀಂ ಶ್ರೀಯಂ ತ್ವಮಪ್ಯಾವ್ಯಾಹತೈಶ್ವರ್ಯಃ ಸರ್ವೇಷಾಮುಪರಿಸ್ಥಿತಃ”
ಎಂದು ಭಾರ್ಗವ ರಾಮನಿಗೆ ನೀಡಿದ ಆಶೀರ್ವಚನದ ಕೊಟ್ಟ ಮಾತಿನಂತೆ ಮಹಾದೇವಿಯು ಮಂಜುನಾಥ ದೇವರ ಸಹಿತ ಕಲ್ಪಾಂತರ ಪರ್ಯಂತ ಶ್ರೀ ಕ್ಷೇತ್ರದ ಸನ್ನಿಧಾನದಲ್ಲಿ ನೆಲೆಸಿ ತನ್ನ ನಂಬಿ ಬಂದವರಿಗೆ ಶುಭ ಶೋಭನಾದಿ ನಿತ್ಯ ಕಲ್ಯಾಣವನ್ನು ನಿತ್ಯ ಸನ್ಮಂಗಳವನ್ನೂ ಅನುಗ್ರಹಿಸುತ್ತಾ ಬಂದಿರುವ ಜಗನ್ಮಂಗಳೆಯಾದ ಶ್ರೀ ಮಂಗಳಾಂಬಿಕೆಗೆ ನಾಳಿನ ಮಂಗಳವಾರದಂದು ೩೩’ನೇ ವರ್ಷದ ಪುನಃ ಪ್ರತಿಷ್ಠಾ ಮಹೋತ್ಸವದ ಸಂಭ್ರಮ.
ಆಸ್ತಿಕ ಭಕ್ತರ ಮನೋರಥಗಳನ್ನು ಪೂರೈಸುವ ಮಂಗಳಾದೇವಿ ಕ್ಷೇತ್ರವು ಇತರ ಪುಣ್ಯ ಕ್ಷೇತ್ರಗಳಿಗಿಂತಲೂ ಮಿಗಿಲಾಗಿದ್ದು ಮಂಗಳಾಂಭೆಯ ದೇವತಾರಾಧನೆಯ ದೇವಲೋಕವೆನಿಸಿಕೊಂಡಿದೆ. ಲಿಂಗ ರೂಪದ ಬಿಂಬದಲ್ಲಿ ವಿರಾಜಮಾನಳಾಗಿ ಭಕ್ತ ಶ್ರೇಷ್ಠರಿಗೆ ನೆಲೆಯಾಗಿ ಕಂಗೊಳಿಸುವುದರಿಂದ ಹೊಗಳಿಕೆಗೆ ಅರ್ಹವಾದ “ಮಂಗಳಾಪುರ ವಾಸಿನಿ” ಎಂಬ ಪ್ರಶಂಸೆಯಿಂದ ಲೋಕ ವಿಖ್ಯಾತಳಾಗಿ ಮೆರೆಯಲ್ಪಡುತ್ತಿರುವ ಶ್ರೀ ದೇವಿಯ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ನಮ್ಮ ಶ್ರೀ ಮಂಗಳಾದೇವಿ.
✨ ಪುನರ್ ಪ್ರತಿಷ್ಠಾ ಮಹೋತ್ಸವ ಹಿನ್ನೆಲೆ✨
ಕಾಂತಿಸಂಪನ್ನಯುತ ಅಲಂಕಾರಪ್ರಾಯಃ ಸ್ವಯಂವ್ಯಕ್ತಳಾಗಿದ್ದು ತಾಯಿಯ ದರ್ಶನಮಾತ್ರದಿಂದಲೆ ಆಸ್ತಿಕರ ಮನೋಗತ ನೆರವೇರಿ ಆಶ್ರಯಿಸಿದವರಿಗೆ ಕಲ್ಪವೃಕ್ಷದಂತೆ ಸನ್ಮಂಗಳವನ್ನು ಅನುಗ್ರಹಿಸುತ್ತಾಳೆ ಎನ್ನುವುದು ಭಕ್ತರ ಅಂಬೋಣ.
“ಸಪ್ತ ಜನ್ಮ ಕೃತಂ ಪಾಪಂ ಕ್ಷಣ ಮಾತ್ರ ವಿನಶ್ಯತಿ” ಎನ್ನುವಂತೆ ಭಕ್ತಿಯಿಂದ ಪ್ರಾರ್ಥಿಸುವಲ್ಲಿ ಸದ್ಭಕ್ತರ ಪಾಪಗಳನ್ನು ಕ್ಷಣಾರ್ಧದಲ್ಲೇ ಕಳೆದು ಸಮಸ್ತ ಮಂಗಳವನ್ನೇ ದಯಪಾಲಿಸುವ ದೇವಾನು ದೇವತೆಗಳಿಗೆ ಅಧಿದೇವತೆಯಾದ ಮಂಗಳೆಯ ಈ ಪರಿಯ ಪ್ರೇಮವನ್ನು ನಾವೆಲ್ಲರು ಎಷ್ಟು ಕೊಂಡಾಡಿದರೂ ಸಾಲದು.
ಮಂಗಳಮ್ಮನ ಮಹಿಮೆಯೇ ಅಂತಹದ್ದು.
ಜಗತ್ತಿನ ಸರ್ವಕಾರ್ಯಗಳಿಗೂ ಕಾರಣೀಭೂತಳಾದ ದೇವಿಯಲ್ಲಿ ಒಮ್ಮೆ ಸಂದರ್ಶಿಸಿದ ಭಕ್ತಾದಿಗಳು ಮತ್ತೊಮ್ಮೆ ಮಗದೊಮ್ಮೆ ಕ್ಷೇತ್ರದಿಂದ ಆಕರ್ಷಿತರಾಗುತ್ತಾರೆ. ಕ್ಷೇತ್ರದ ಪಾವಿತ್ರ್ಯತೆಗೆ ಭಕ್ತಿಯಿಂದ ತಲೆಬಾಗುತ್ತಾರೆ. ದೇಶದ ಜಾಗೃತಶಕ್ತಿ ಪೀಠಗಳಲ್ಲೊಂದಾಗಿ ಮೆರೆಯುತ್ತಿರುವ ಮಂಗಳಮ್ಮನ ಸನ್ನಿಧಾನ ಮಂಗಳಾದೇವಿ’ತನ್ನ ಅಭಿವೃದ್ಧಿಯ ದಿಶೆಯಲ್ಲಿ ಸಾಗಿ ಸಮಾಜದಲ್ಲಿ ಧಾರ್ಮಿಕ ಜನ ಜಾಗೃತಿಮೂಡಿಸುವ ದಿಕ್ಸೂಚಿಯಂತಿದ್ದು ಕ್ಷೇತ್ರದ ಶ್ರೀಮಂತಿಕೆಗೆ ನಾವೆಲ್ಲಾ ತಲೆ ಬಾಗಲೇ ಬೇಕು.
ನಾಳಿನ ವಿಶೇಷ ದಿನವಾದ ಮೇ ೧೭’ರ ಮಂಗಳವಾರಕ್ಕೆ ಶ್ರೇಷ್ಠ ಸ್ಥಾನವಿದೆ. ಇದು ಮಂಗಳ ಮುಹೂರ್ತ. ಜೀವನದ ಉತ್ಕರ್ಷನೀಯ ಸಂಕಲ್ಪಗಳೆಲ್ಲವನ್ನು ಸಾಕಾರಗೊಳಿಸುವ ಮಹಾ ಸುದಿನ. ಹೌದು.! ದಿನಾಂಕಾನುಸಾರ ನಾಳಿಗೆ ಶ್ರೀ ದೇವಿಯ ಪುನರ್ ಪ್ರತಿಷ್ಟೆಯು ನೆರವೇರಿ ಮೂವತ್ತ ನಾಲ್ಕು ವರ್ಷಗಳು (೧೭-೫ -೧೯೮೯ ರಿಂದ ೧೭-೫-೨೦೨೨) ತುಂಬಲಿದ್ದು ಶ್ರೀ ದೇವಿಯ ಪೂರ್ಣಾನುಗ್ರಹಕ್ಕೆ ಪುನಃ ಪ್ರತಿಷ್ಠಾ ವರ್ಧಂತಿಯು ಕಾರಣವಾಗಲಿದೆ.
ಶತ ಶತಮಾನಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಪುರಾತನವಾದ ಮಂಗಳಾದೇವಿ ಕ್ಷೇತ್ರವು ಮೂವತ್ತು ದಶಕಗಳ ಹಿಂದೆ ಎಂದರೆ ೮೦’ರ ದಶಕದಲ್ಲಿ ಸಂಪೂರ್ಣವಾಗಿ ಅಜೀರ್ಣಾವಸ್ಥೆಯನ್ನು ತಲುಪಿತ್ತು. ಶ್ರೀ ದೇವಿಯ ದಯೆ, ಪೂರ್ಣಾನುಗ್ರಹದಿಂದ ದೇಗುಲವನ್ನು ಜೀರ್ಣೋದ್ಧಾರದ ಮೂಲಕ ಪುನರ್ನವೀಕರಣ ಗೊಳಿಸಲಾಯಿತು.
ಜಗದಂಬೆಯ ಪರಮಾನುಗ್ರಹದಿಂದ ಸ್ವಸ್ತಿ ಶ್ರೀಮನೃಪ ಶಾಲಿವಾಹನಶಕೆ ೧೯೧೧ ಶುಕ್ಲನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲ ಪಕ್ಷ ಶುದ್ಧ ದ್ವಾದಶಿಯ ಬುಧವಾರ ಮೇ ೧೭’ ೧೯೮೯’ ನೇ ಇಸವಿಯ ವರ್ಷದಂದು ಶ್ರೀ ಮಂಗಳಾದೇವಿ ಅಮ್ಮನವರ ಪುನರ್-ಪ್ರತಿಷ್ಟಾಪನೆಯು ಪ್ರಪಂಚದ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯವಾಗಿ ಬಹು ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ಸಹಿತ ಕಂಡು ಕೇಳರಿಯದ ರೀತಿಯಲ್ಲಿ ಆ ಕಾಲಕ್ಕೆ ವೈಭವದಿಂದ ನೆರವೇರಿತ್ತು.
ಅಂದಿನಿಂದ ಇಂದಿನ ವರೆಗೆ ಸರ್ವ ಕಾಲಕ್ಕೂ ತಿಥಿಯ ಹೊರತು, ದಿನಾಂಕಾನುಸಾರವಾಗಿ ಶ್ರೀ ದೇವಿಯ ಪುನರ್ -ಪ್ರತಿಷ್ಟಾ ಮಹೋತ್ಸವವು ಪ್ರತಿ ಬಾರಿಯಂತೆ ಮೇ ೧೭’ರಂದು ಉತ್ಸವಾದಿಗಳ ಮೂಲಕ ವೈಭವದಿಂದ ನಡೆಯುವುದು ವಾಡಿಕೆ.
ಅದರಲ್ಲೂ ನಾಳಿನ ೩೪’ನೇ ವರ್ಷದ ಪೂರೈಕೆಯ ಸಂದರ್ಭದಲ್ಲಿ ದೇವಿಯ ಕೃಪಾವೃಷ್ಠಿಯಿಂದ ತನ್ನ ಕ್ಷೇತ್ರವನ್ನು ತನಗೆ ಬೇಕಾದ ರೀತಿಯಲ್ಲಿ ಸ್ವಯೀಚ್ಛೆಯಿಂದ ಜೀರ್ಣೋದ್ಧಾರ ಮಾಡಿಕೊಂಡು ರಾಜ ಗರ್ಭಗೃಹದಲ್ಲಿ ಸಾಕ್ಷತ್ ಮಹಾರಾಣಿಯಂತೆ ವಿಜೃಂಭಿಸುವ ಆಕೆಯ ಮೇರು ವೈಭವವನ್ನು ಕಂಡು ಕೃತಾರ್ಥರಾಗಲು ನಾವೆಲ್ಲರೂ ಎದುರುಗಾಣಬೇಕಿದೆ.
ಈ ಬಾರಿಯ ಪಂಚಾಂಗದ ಅನ್ವಯ ಸ್ವಸ್ತೀ ಶ್ರೀ ಶುಭಕೃತ ನಾಮ ಸಂವತ್ಸರದ ಗ್ರೀಷ್ಮಋತು ವೈಶಾಖ ಮಾಸ ಉತ್ತರಾಯಣ ಶುಕ್ಲ ಪಕ್ಷದ ನಾಳಿನ ದಿನವಾದ ಮಂಗಳವಾರದಂದು ಶ್ರೀ ದೇವಿಯ ಪುನರ್-ಪ್ರತಿಷ್ಟಾ ಮಹೋತ್ಸವವು ತಾಯಿಯ ದಿವ್ಯ ಸನ್ನಿಧಾನದಲ್ಲಿ ಸಂಭ್ರಮದಿ ನಡೆಯಲಿದೆ.
ಸಾನಿಧ್ಯ ವಿಶೇಷವೆಂಬಂತೆ ಶ್ರೀ ಮಂಗಳಾದೇವಿ ಎಂಬ ಆಕೆಯ ನಾಮದಲ್ಲಿರುವುದೇ ಮಂಗಳವಾಚಕ. ‘ಮಂಗಳ’ ಎಂದರೆ ಒಳಿತು, ಶುಭ ಎಂದರ್ಥ. ಮಂಗಳಾದೇವಿ ದೇವಸ್ಥಾನಕ್ಕೂ ಹಾಗೂ ಮಂಗಳೂರು ಎಂಬ ಹೆಸರಿಗೂ ನೇರ ಸಂಬಂಧವಿದ್ದು ‘ಮಂಗಳೂರು’ಎಂಬ ಹೆಸರಿನ ಜೊತೆಗೆ ಅಂತರ್ಗತವಾಗಿರುವ ದಿವ್ಯ ನಾಮ ಮಂಗಳಾದೇವಿಯೇ.. ಇಂತೆ ದೇವಿ ಮಂಗಳೆಯಿಂದಾಗಿ ಮಂಗಳಾಪುರ ಮಂಗಳೂರು’ಎಂಬ ಹೆಸರು ಕೀರ್ತಿ ಪತಾಕೆಯಾಗಿ ಶಾಶ್ವತಗೊಂಡಿದೆ.
ಅಂದಿನಿಂದ ಅದೆಷ್ಟೋ ಆಳುಪರಾಜ ಮನೆತನಗಳು ಪ್ರಾಚೀನ ಮಂಗಳಾಪುರವನ್ನು ವೈಭವದಿ ಆಳಿ ಹೋಗಿದ್ದಾರೆ. ಕಾಲಾಂತರದಲ್ಲಿ ಹಲವು ಬಾರಿ ಅನೇಕಾನೇಕ ಆಳುಪರಸರಿಂದ ದೇವಸ್ಥಾನವು ಜೀರ್ಣೋದ್ಧಾರಗೊಂಡಿದೆ. ಹೀಗೆ ಪ್ರಾಕದಲ್ಲಿ ಕಾಲಾನುಕಾಲಕ್ಕೆ ದೇವಸ್ಥಾನವು ಆಳುಪ ಅರಸರ ಆಶ್ರಯದ ಮೇರೆಗೆ ಜೀರ್ಣೋದ್ಧಾರವಾಗುತ್ತಲೇ ಇತ್ತು. ಅದರಲ್ಲೂ ವಿಶೇಷವಾಗಿ ಕ್ರಿ.ಶ ೯೫೦’ರಿಂದ ೯೮೦’ರ ವರೆಗೆ ಆಳ್ವಿಕೆಯನ್ನು ನಡೆಸಿದ ಆಳುಪರಸ ಕುಂದವರ್ಮನು ಕ್ರಿ.ಶ ೯೬೮’ರಲ್ಲಿ ಕದಲೀ ಮಂಜುನಾಥ ಕ್ಷೇತ್ರವನ್ನು ಹಾಗೂ ಮಂಗಳಾದೇವಿ ಕ್ಷೇತ್ರವನ್ನು ಏಕಕಾಲಕ್ಕೆ ಪುನರ್ನವೀಕರಣ ಮಾಡಿದನು ಎಂಬುವುದಾಗಿ ತಿಳಿದುಬರುತ್ತದೆ.
ತದನಂತರ ಬಂದ ಬಂಗರಾಜನು ಸ್ವಪ್ನದಲ್ಲಿ ದರ್ಶನವನ್ನಿತ್ತ ಶ್ರೀ ದೇವಿಯ ಆಜ್ಞಾನುಸಾರ ಮಂಗಳಾಪುರವನ್ನು ನಿರ್ಮಾಣ ಮಾಡಿದನೆಂದು ಸ್ಕಾಂದ ಪುರಾಣದಲ್ಲಿ ತಿಳಿಸಿದೆ. ಬಂಗರಾಜರು ಶಾಲಿವಾಹನ ಶಕ ೧೦೭’ರಿಂದ (ಕ್ರಿ.ಶ ೧೧೫೭) ಮಂಗಳಾದೇವಿಯನ್ನು ಆಳತೊಡಗಿದರೆಂದು ತಿಳಿದು ಬರುತ್ತದೆ. ಆದರೆ ಬಂಗರಾಜರಲ್ಲಿ ಪಟ್ಟಣವನ್ನು ದೇವಿಯ ಆದೇಶದಂತೆ ನಿರ್ಮಿಸಿದ ರಾಜನು ಯಾರೆಂದು ತಿಳಿದು ಬಂದಿಲ್ಲ. ೮’ನೇ ಶತಮಾನಕ್ಕಿಂತ ಪೂರ್ವದಲ್ಲೇ ಈತನಿಂದ ದೇವಸ್ಥಾನವು ಪುನರ್ನಿರ್ಮಾಣವಾಗಿ ಸ್ಥಾಪಿಸಲ್ಪಟ್ಟಿರಬಹುದೆಂಬ ನಂಬಿಕೆ.
ಈ ಎಲ್ಲಾ ಮಹತ್ವಗಳಿಂದಲೂ ಪೌರಾಣಿಕವಾಗಿ ಹಾಗು ಐತಿಹಾಸಿಕವಾಗಿ ಮಂಗಳೂರಿನ ವೈಭವಪೂರ್ಣ ಹಿನ್ನೆಲೆಯನ್ನು ಹೊಂದಿರುವ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನವು ಅಂದು ಕ್ರಿ.ಶ ೧೯೮೬-೧೯೮೭’ರ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಶಿಥಿಲಾವಸ್ಥೆಯನ್ನು ಹೊಂದಿತು.
ದೇವಾಲಯದ ಹೊರಭಾಗದಲ್ಲಿ ಕಂಡುಬರುವ ಆಳುಪ ಅರಸರ ಕಾಲಮಾನ ಕೋಷ್ಠಕದ ಪ್ರಕಾರ ಆಳುಪ ವಂಶದ ಅರಸರ ಪೈಕಿ ಕೊನೆಯ ರಾಜನಾದ ಎರಡನೇ ವೀರ ಪಾಂಡ್ಯದೇವನು ೧೩೯೦’ರಲ್ಲಿ ಶ್ರೀ ದೇವಿಯ ದೇವಾಲಯವನ್ನು ಪುನರ್ನವೀಕರಣಗೊಳಿಸಿದನು.
೧೩೯೦’ ರಿಂದ ೧೯೮೭’ರ ವರೆಗನ ಸುಧೀರ್ಘ ಕಾಲಾಂತರದ ಮಧ್ಯದಲ್ಲಿ ಆಗಾಗ ಊರಿನ ಆಢ್ಯ ಗ್ರಹಸ್ಥರೆಲ್ಲರೂ ಸೇರಿ ದೇವಸ್ಥಾನವನ್ನು ಕಾಲಕಾಲಕ್ಕೆ ಜೀರ್ಣೋದ್ಧಾರ ಮಾಡಿಕೊಂಡು ಬರುತ್ತಿದ್ದರೆಂಬ ಉಲ್ಲೇಖವಿದೆ.
ಅದು ೧೯೮೭’ರ ಸಮಯ.ಶಿಲಾನ್ಯಾಸಕ್ಕೆ ಪೂರ್ವಭಾವಿಯಾಗಿ ಸೂಕ್ತ ಮುಹೂರ್ತವನ್ನು, ತಂತ್ರಿವರೇಣ್ಯರಿಂದ ‘ಅಷ್ಟಮಂಗಲ’ ಪ್ರಶ್ನೆಯನ್ನಿಟ್ಟು, ದೇವಸ್ಥಾನದ ನಿರ್ಮಾಣದ ಬಗೆಗಿನ ವೈದಿಕ ವಿಧಿ-ವಿಧಾನಗಳನ್ನು ಆಗಮಶಾಸ್ತ್ರದ ನಿಯಮಗಳಿಗನುಗುಣವಾಗಿ ನಡೆಸಿ….
“ದೇವಿಯ ಮೂಲ ಬಿಂಬವನ್ನುಗರ್ಭಗೃಹದಿಂದ ಸ್ಥಾನಪಲ್ಲಟಗೊಳಿಸಿ ಈಗಿನ
ಮಹಾ ಗಣಪತಿ ದೇವರ ಗರ್ಭಸ್ಥಾನವಿರುವ ಸ್ಥಳದಲ್ಲಿ ‘ಬಾಲಾಲಯ’ವನ್ನು ನಿರ್ಮಿಸಿ ತಾತ್ಕಾಲಿಕವಾಗಿ ಪ್ರತಿಷ್ಟಾಪಿಸಲಾಯಿತು. ಮತ್ತು ಬಾಲಾಲಯದಲ್ಲಿ ಸಂಸ್ಥಾಪಿತಗೊಂಡ ಬಿಂಬಕ್ಕೆ ದೈವೀಕಲೆಯನ್ನು ಊರ್ಜಿತಗೊಳಿಸಿ, ಆ ಸ್ಥಳದಲ್ಲಿ
ನಿತ್ಯಾನುಷ್ಟಾನದಂತೆ ಪೂಜಾವಿಧಾನಗಳನ್ನು ಮುಂದುವರಿಸಲಾಯಿತು.
ಧಾರ್ಮಿಕ ಪರಂಪರೆಯ ಎಲ್ಲಾ ಆಶಯಗಳನ್ನು ಶಾಸ್ತ್ರೋಕ್ತವಾಗಿ ಈಡೇರಿಸುವ ನಿಟ್ಟಿನಲ್ಲಿ ಜೀರ್ಣಾವಸ್ಥೆಯನ್ನು ತಲುಪಿದ ಪ್ರಾಚೀನ ದೇವಳವನ್ನು ಕೆಡವಿ ಸುತ್ತು ಪೌಳಿಗಳ ಸಮೇತ ಸುಂದರವಾದ ತುಂಬು ಆಕರ್ಷಕವೂ, ಸುವಿಶಾಲವಾದ ಈಗಿನ ದೇವಾಲಯವು ರೂಪುಗೊಳ್ಳುತ್ತಾ ಅದರ ನಿರ್ಮಾಣದ ಕಾರ್ಯವು ಪ್ರಾರಂಭವಾಯಿತು.
ಪ್ರಧಾನವಾಗಿ ಮಂಗಳಾದೇವಿ ದೇವಸ್ಥಾನವು ಬಹು ಪ್ರಚೀನವಾದರಿಂದ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ(Archeological department of central government of India) ಯ ಅಧಿನಕ್ಕೆ ಒಳಪಟ್ಟಿದ್ದು ಕಾಲಕಾಲಕ್ಕೆ ಇಲ್ಲಿನ ಎಲ್ಲಾ ಜೀರ್ಣೋದ್ಧಾರವು ಇಂದಿಗೂ ಕೂಡ ಕಾನೂನಿನಾತ್ಮಕ ಆರ್ಥಿಕ ಚಟುವಟಿಕೆಗಳೊಂದಿಗೆ ಸಾಗುತ್ತಲಿದೆ. ಇದೇ ಪ್ರಕಾರವಾಗಿ ಈ ಇಲಾಖೆಯಿಂದ ಸಂದಾಯವಾದ ಆರ್ಥಿಕ ಮೊಬಲಗಿನಿಂದ..,
ಇದರೊಂದಿಗೆ ಭಕ್ತ ಜನರು ತಮ್ಮ ಶಕ್ತ್ಯಾನುಸಾರ ನೀಡಿದ ದೇಣಿಗೆ-ದವಂತಿಗೆಯನ್ನು ಸಂಗ್ರಹಿಸಿ ಸದ್ವಿನಿಯೋಗದಿಂದ ಅವೆಲ್ಲವನ್ನು ತಾಯಿಯ ದೇವಳದ ಜೀರ್ಣೋದ್ಧಾರದ ಪುಣ್ಯಕಾರ್ಯಕ್ಕೆ ವಿನಿಯೋಗಿಸಲ್ಪಟ್ಟು ನಮ್ಮೆಲ್ಲರ ಆಶಯದಂತೆ ೧೯೮೯’ರ ವರ್ಷಾರಂಭದಲ್ಲಿ ಮಂಗಳಾಂಭೆಯ ಭವ್ಯ ದೇಗುಲವು ನವೀಕೃತ ಗರ್ಭಗೃಹ, ಸುತ್ತು ಪೌಳಿಯ ಅಭಿವೃದ್ಧಿಯಾಗಿ ರಾರಾಜಿಸಿತು.
ನೂತನವಾಗಿ ನಿರ್ಮಿತಗೊಂಡ ದೇವಳದಲ್ಲಿ ಶಿಖರ ಕಲಶ ಪ್ರತಿಷ್ಟೆಯಾಗಿ, ಶಾಸ್ತ್ರೋಕ್ತವಾಗಿ ನಡೆಸಬೇಕಾದ ಧಾರ್ಮಿಕ ವಿಧಾನಗಳನ್ನು ನಡೆಸಿ ಕೊನೆಗೂ ಶ್ರೀ ದೇವಿಯ ಪುನರ್-ಪ್ರತಿಷ್ಟೆಯ ಅಭೂತಪೂರ್ಣ ಘಳಿಗೆ
ಮೇ. ೧೭. ೧೯೮೯ ಬುಧವಾರ ಸಂಪ್ರಾಪ್ತವಾಯಿತು.
ನಿಲೇಶ್ವರ ಪದ್ಮನಾಭ ತಂತ್ರಿವರೇಣ್ಯರ ನೇತೃತ್ವದಲ್ಲಿ, ಅಂದಿನ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ರಾಮಚಂದ್ರ ಐತಾಳ’ರವರ ಮಾರ್ಗದರ್ಶನದಲ್ಲಿ, ಅಂದಿನ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ಎಮ್. ನಾಮದೇವ ಶೆಣೈ’ಯವರ ಮುಂದಾಳತ್ವದಲ್ಲಿ ಹಾಗು ಆಡಳಿತ ಮಂಡಳಿ, ಭಗವದ್ಭಕ್ತಾಭಿಮಾನಿಗಳ ಸಮಾಕ್ಷಮದಲ್ಲಿ ಶ್ರೀ ಮಂಗಳಾದೇವಿ ಅಮ್ಮನವರ ಪುನರ್-ಪ್ರತಿಷ್ಟಾಪನೆಯು ವೈಭವದಿ ಜರುಗಿ ಅವಳ ಪಾದ ಸ್ಪರ್ಶದಿಂದ ತೌಳವ ದೇಶವೇ ಪರಮ ಪಾವನವಾಯಿತು.
ದೇವಿಯ ಮೂಲಬಿಂಬವನ್ನು ಬಾಲಾಲಯದಿಂದ ತಂದು ಪಾಣಿಪೀಠದ ಮೇಲೆ ಪ್ರತಿಷ್ಟಾಪಿಸಿ, ಅಷ್ಟಬಂಧಲೇಪನದೊಂದಿಗೆ, ಬ್ರಹ್ಮಕಲಶಾಭಿಷೇಕವೂ ನಡೆಯಿತು. ಬಿಂಬದಲ್ಲಿ ಕಳಾಸಾನಿಧ್ಯಳಾಗಿ ಮೆರೆದು, ನವೀಕೃತ ಸನ್ನಿಧಿಯಲ್ಲಿ ಪ್ರತ್ಯಕ್ಷವಾದಳೋ ಎಂಬಂತೆ ಭಕ್ತ ಸಾಗರಕ್ಕೆ ಆಶಿರ್ವದಿಸಿದ್ದಾಳೆ. ದೇವಿಯ
ಆ ದಿನದಂದು ವೈಚಿತ್ರ್ಯವೆಂಬಂತೆ ಬೆಳಗ್ಗಿನಿಂದಲೂ ಬಹು ಜೋರು ಮಳೆಯು ಸುರಿಯಲಾರಂಭಿಸಿತ್ತಂತೆ. ಸುರಿದು ಈ ಮಳೆಯು ಸಾಕ್ಷಾತ್ ದೇವಿಯೇ ತನ್ನ ಪುನರ್-ಪ್ರತಿಷ್ಟೆಯಿಂದಾಗಿ ಹರ್ಷೋಲ್ಲಾಸಗೈದು ಪೀತ್ಯರ್ಥಳಾದಳೆಂಬಂತೆ ನಿದರ್ಶನವಾಯಿತು.
ಅಂದು ಸೂರ್ಯೋದಯಕ್ಕು ಮುನ್ನವೇ ಪ್ರಾರಂಭಗೊಂಡ ಸರ್ವ ವೈದಿಕ ವಿಧಿ ವಿಧಾನಗಳನ್ನು ಸಹಸ್ರಾರು ಸದ್ಭಕ್ತರು ಕಣ್ತುಂಬಿಕೊಂಡಿದ್ದರು. ತಾಯಿಯ ಇಚ್ಛೆ ಹಾಗು ಕೃಪೆಯಿಂದ, ಸರ್ವರ ಕೂಡುವಿಕೆಯ ಸಹಭಾಗಿತ್ವದಿಂದ ನಿರೀಕ್ಷೆ ಮೀರಿ ಯಶಸ್ಸು ಗಳಿಸಿದ್ದಲ್ಲದೆ ಸರ್ವ ಆಸ್ತಿಕ ಸಮೂದಾಯದ ಶ್ಲಾಘನೆಗೆ ಪಾತ್ರವಾಗಿತ್ತು.
ಅಲ್ಲದೆ ಅದೇ ದಿನದಂದು ರಾತ್ರಿ ಈ ಪುಣ್ಯೋತ್ಸವದ ಅಂಗವಾಗಿ ಶ್ರೀ ಮಂಗಳಾದೇವಿ ಮಹಾತ್ಮೆ ಎಂಬ ಹರಿಕಥೆಯ ಕಾರ್ಯಕ್ರಮವು ಹರಿ ಕೀರ್ತನಾಕಾರರಾದ ವಿಧ್ವಾಂಸ ಭದ್ರಗಿರಿ ಅಚ್ಯುತ್ತದಾಸರ ಮೂಲಕ ನೆರವೇರಿತು.
ಇಂದಿಗೆ ಶ್ರೀ ದೇವಿಯ ಕರುಣಾಕಟಾಕ್ಷದಿಂದ ದೇವಸ್ಥಾನವು ಉತ್ತುಂಗಕ್ಕೇರಿ ಉಚ್ಛ್ರಾಯಮಾನವಾಗಿ ಬೆಳಗುತಲ್ಲಿದ್ದು ಭಕ್ತ ಜನಕೋಟಿಗೆ ನಿತ್ಯ ಮಾರ್ಗದರ್ಶಿಯಾಗಿದೆ.
ಸದಾಕಾಲ ಬಿಂಬದಲ್ಲಿ ಸನ್ನಿಹಿತಳಾಗಿರುವ ಮಂಗಳಾಂಬಿಕೆಗೆ ಶೃದ್ಧಾಭಕ್ತಿಯಿಂದ ನಡೆಸುವ ಅಭಿಷೇಕಾದಿಗಳು,ತ್ರಿಕಾಲ ಪೂಜೆ, ಹಾಗೂ ಉತ್ಸವಾದಿಗಳ ಸಹಿತ ಅನುಷ್ಟಾನಗಳು..ದೇವತಾ ಬಿಂಬದಲ್ಲಿ ದೇವಿಯ ಸಂಪೂರ್ಣ ಸಾನಿಧ್ಯವನ್ನು ಹಾಗೂ ಅನುಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿದೆ. ಈ ರೀತಿಯಾಗಿ ತಂತ್ರಿವರೇಣ್ಯರಿಂದ ಬಿಂಬದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾನಿಧ್ಯ ಶಕ್ತಿಯನ್ನು ಅರ್ಚನಾದಿ ವಿಧಿಮುಖೇನ ವೃದ್ಧಿಗೊಳಿಸಿದಲ್ಲಿ ಭಕ್ತಜನ ಸಮೂಹಕ್ಕೆ ಇಷ್ಟಾರ್ಥದಾಯಕ ಅನುಗ್ರಹ ದೊರಕಿಸಿ ಕೊಡುವುದರ ಮೂಲಕ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನವನ್ನು ಪಡೆಯುವುದು ಮಂಗಳಮ್ಮನಿಂದ.
ತನಗೆ ಬೇಕು-ಬೇಡಗಳನ್ನು ನಿರ್ಧರಿಸುತ್ತಾ ಎಲ್ಲವನ್ನೂ ತನ್ನ ಸ್ವಯೀಚ್ಛೆಯಂತೆ ಆ ಮಹಾತಾಯಿ ನಡೆಸಿಕೊಂಡು ಬಂದಿದ್ದಾಳೆ.
ಶ್ರೀ ಕ್ಷೇತ್ರದ ಆಲಯವೊಂದು ಪರಿಪೂರ್ಣವೆನಿಸಲು ಪ್ರಶಸ್ತವಾದ ಭೂಮಿ, ಅದರ ಮೇಲೆ ಭದ್ರವಾದ ಅಡಿಪಾಯ, ಆ ಅಡಿಪಾಯದ ಮೇಲೆ ಗೋಡೆ, ಆ ಗೋಡೆಗಳನ್ನಾಧರಿಸಿ ಮಾಡಿನ ಪಾಗರ ಇರುವಂತೆ ದೇವ ಸಾನ್ನಿಧ್ಯವಿರಬೇಕಾದ ದೇವಾಲಯಗಳಿಗೆ ನಂಬಿ ಆರಾಧಿಸುವ ಭಕ್ತ ಜನಸಮೂಹ, ನಿಸ್ವಾರ್ಥತಾ ಮನೋಭಾವನೆಯ ಧರ್ಮದರ್ಶಿ (ಆಡಳಿತ)ಮಂಡಳಿ, ಶಾಸ್ತ್ರವೇತ್ತ ಅರ್ಚಕ -ತಂತ್ರಿವರೇಣ್ಯರು ಇರಬೇಕು.
ಕುಟುಂಬಕ್ಕೋರ್ವ ಕುಲ ಪುರೋಹಿತರಿದ್ದಂತೆ ದೇವಾಲಯಗಳಲ್ಲಿ ತಂತ್ರಿವರೇಣ್ಯರದ್ದು ಪ್ರಧಾನ ಪಾತ್ರ. ದೇವತಾ ಸಾನ್ನಿಧ್ಯದ ಪ್ರತಿಷ್ಠಾ ಮಹಾಕಾರ್ಯ, ಉತ್ಸವಾದಿ ಮಹೋತ್ಸವಗಳ ಮೇಲುಸ್ತುವಾರಿ ಇವರ ಹೊಣೆಗಾರಿಕೆ.
ಪುರಾತನ ಕಾಲದಿಂದ ಪಾಲಿಸಿಕೊಂಡು ಬಂದ ಆಲಯ ಪದ್ದತಿಗೆ, ರೀತಿ ರಿವಾಜುಗಳಲ್ಲಿ ವ್ಯತ್ಯಸ್ತವಾಗದಂತೆ ನಡೆದುಕೊಳ್ಳಲು ಸಮಯಾನುಸಮಯ ಭಕ್ತರಿಗೆ, ಧರ್ಮದರ್ಶಿ ಮಂಡಳಿಗೆ, ಅರ್ಚಕರಾದಿಯಾಗಿ ಪರಿಚಾರಕ ಭೃತ್ಯವರ್ಗಕ್ಕೆ ಮಾರ್ಗದಶನ ನೀಡುವುದರ ಮುಖೇನ ದೇವತಾ ಸಾನ್ನಿಧ್ಯಶಕ್ತಿಯ ವಿಕಸನಕ್ಕೆ ಇವರು ಮಾರ್ಗದರ್ಶಕರಾಗಿರುತ್ತಾರೆ.
ಅಂತೆಯೇ ನಮ್ಮ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಉಚ್ಚಿಲತ್ತಾಯ ನೀಲೇಶ್ವರ ತಂತ್ರಿ ಮನೆತನದವರು ತಲತಲಾಂತರದಿಂದ ದೇವಳದ ತಂತ್ರಿ ಕಾರ್ಯದ ಅಧಿಕಾರವನ್ನು ಹೊಂದಿದವರಾಗಿದ್ದು, ಪ್ರಸ್ತುತ ಉಚ್ಚಿಲತ್ತಾಯ ನೀಲೇಶ್ವರ ತಂತ್ರಿ ಮನೆತನದ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿವರ್ಯರು ಶ್ರೀ ಕ್ಷೇತ್ರದ ಸರ್ವ ಧಾರ್ಮಿಕ- ದೇವತಾ ಕಾರ್ಯಗಳ ತಂತ್ರ ಪ್ರಕ್ರಿಯೆಯ ಜವಾಬ್ದಾರಿಯನ್ನು ಹೊಂದಿದ್ದು ಇವರ ನೇತೃತ್ವದಲ್ಲಿಯೇ ಸಮಗ್ರ ತಾಂತ್ರಿಕ ಧಾರ್ಮಿಕ ಕಾರ್ಯಗಳು ನಡೆದುಕೊಂಡು ಬಂದಿರುತ್ತದೆ.
ಸುಮಾರು ಒಂದುವರೆ ಶತಮಾನಗಳ ಹಿಂದೆ ಶ್ರೀ ಸುಬ್ರಾಯ ಭಟ್ಟ ರೆಂಬುವವರು ಶ್ರೀ ದೇವಿಯ ಪೂಜೆಯನ್ನು ಬಾರಕೂರಿನ ಗಂಗಾಧರ ಐತಾಳರಿಗೆ ಒಪ್ಪಿಸಿಕೊಟ್ಟರು. ಮುಂದೆ ಶ್ರೀ ದೇವಿಯ ಪೂಜಾ ಭಾಗ್ಯವು ಐತಾಳ ವಿಪ್ರ ವಂಶಸ್ಥರಿಗೆ ದೊರಕಿ ಇಂದಿನವರೆಗೂ ತಲತಲಾಂತರದಿಂದ ಅನುವಂಶಿಕವಾಗಿ ನಡೆದುಕೊಂಡು ಬಂದಿದೆ. ಶೈವ ಸಂಪ್ರದಾಯದ ತಂತ್ರಸಾರ ಪದ್ಧತಿಯ ಅನುಸಾರ ನಡೆಯುವ ಪೂಜಾ ಕೈಂಕರ್ಯಗಳು ಒಂದು ವರ್ಷದ ಪರ್ಯಾಯ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ.
ಐತಾಳ ಮನೆತನದ ೧೪ ಕುಟುಂಬಗಳು ಹಾಗು ಉಪಾಧ್ಯಾಯ ಮನೆತನದ ೨ ಕುಟುಂಬಗಳು ಒಟ್ಟು ೧೬ ವಿಪ್ರ ಮನೆತನವು ಸೇರಿ ಪ್ರತಿ ವರ್ಷ ಜುಲಾಯಿ ೧೭’ರ ಕರ್ಕಾಟಕ(ಆಷಾಢ) ಮಾಸದಿಂದ ಮತ್ತೊಂದು ಕರ್ಕಾಟಕ ಮಾಸದವರೆಗೆ ಪೂಜಾ ಹಕ್ಕನ್ನು ಪಡೆದುಕೊಳ್ಳುತ್ತದೆ ಹೀಗೆ ವಾರ್ಷಿಕ ಪರ್ಯಾಯದೊಂದಿಗೆ ವರ್ಷಕ್ಕೆ ಒಂದರಂತೆ ನಿಯುಕ್ತಿಗೊಂಡು ಪೂಜೆಯು ಬದಲಾಗುತ್ತದೆ.
ಈಗಿನ ಪ್ರಸ್ತುತ ದೇವಾಲಯದ ನಿರ್ಮಾಣ ಅತ್ಯದ್ಭುತವಾಗಿದ್ದು, ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಮೂರು ರಸ್ತೆಗಳು ಸಂಧಿಸಿ ಕೇಂದ್ರಿಕೃತಗೊಳ್ಳುವ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ನೆಲೆಗೊಂಡಿದೆ. ದೇವಾಲಯದ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಕಾಣಸಿಗುವ ಎತ್ತರೆತ್ತರಕ್ಕೆ ಆಕಾಶಕ್ಕೆ ತಲೆಯೆತ್ತಿ ನಿಂತಿರುವ ಅಶ್ವತ್ಥವೃಕ್ಷಗಳ ಸಮೂಹ ಅವರ್ಣನೀಯ. ದೇವಳಕ್ಕೆ ಅಭಿಮುಖವಾಗಿ ಪ್ರತ್ಯಕ್ಷ ನಾಗ ದೇವರ ಸಾನಿಧ್ಯವಿದೆ. ದೇವಳದ ಪ್ರಧಾನ ಪ್ರವೇಶ ಮಹಾದ್ವಾರದ ಹೊರಗೆ,ದೇವಿಯ ಸನ್ನಿಧಿಗೆ ನೇರ ಅಭಿಮುಖವಾಗಿ ‘ಮಹಾ ಬಲಿಪೀಠವೂ’ ಅದರ ಹಿಂಭಾಗದಲ್ಲಿ ದೇಗುಲದ ಎತ್ತರಕ್ಕಿಂತ ೨’ಪಟ್ಟು ಎತ್ತರವಿರುವ ಧ್ವಜಸ್ತಂಭವನ್ನು ಕಾಣಬಹುದು. ಹೊರ ಭಾಗದಲ್ಲಿ ಪ್ರದಕ್ಷಿಣಾ ಪಥ, ಸಾಂಸ್ಕೃತಿಕ ವೇದಿಕೆ, ರಾಜಾಂಗಣವನ್ನು ಹೊಂದಿದೆ. ದೇವಳದ ಪ್ರವೇಶ ಭಾಗದ ಮುಂಭಾಗವು ಕೇರಳ ಮಾದರಿಯ ಶೈಲಿಯಲ್ಲಿ ತ್ರಿಕೋನಾಕಾರದ ದ್ವಾರರಚನೆಯು ಕಂಡು ಬರುವುದರೊಂದಿಗೆ ಭೂಷಣಪ್ರಾಯವೆನ್ನುವಂತೆ ಶ್ರೀ ದೇವಿಯ ನವರಾತ್ರಿಯ ಅಲಂಕಾರದ ಭಿತ್ತಿ ಚಿತ್ರ ಗಳನ್ನು ಇಲ್ಲಿ ವೀಕ್ಷಿಸಬಹುದು.
ದೇವಳವನ್ನು ಪ್ರವೇಶಿಸುತ್ತಿದ್ದಂತೆಯೇ ಆಡಳಿತ ಕಛೇರಿ, ಒಳಜಗಲಿ ಹಾಗು ಛಾವಣಿಯನೆತ್ತಿನಿಂತಿರುವ ಸ್ತಂಭಗಳು, ಸುತ್ತಲೂ ಮೇಲ್ಭಾಗದಲ್ಲಿ ಮುಚ್ಚಿದ ಕಲಾತ್ಮಕ ಮರದ ಪಾಗಾರಗಳು, ಪೂಜಾ ಸಂದರ್ಭದಲ್ಲಿ ಮೊಳಘಿಸಲು ಹಿತ್ತಾಳೆಯ ತೂಗು ಘಂಟೆಗಳನ್ನು ಇಕ್ಕಡೆಗಳಲ್ಲಿ ಸಾಲಾಗಿ ಕಾಣಬಹುದು. ಮುಂಭಾಗದ ಪೌಳಿಯನ್ನು ಎರಡು ಕಂಬಗಳ ನೆಲೆಯಲ್ಲಿ ರೂಪಿಸಲಾಗಿದೆ.
ಗರ್ಭಗುಡಿಯ ಹೊರಾವರಣದಲ್ಲಿ ಒಳಜಗಲಿಗೆ ತಾಗಿಕೊಂಡು ಪ್ರದಕ್ಷಿಣಾಪಥವು ಸುತ್ತಲೂ ವ್ಯಾಪಿಸಿರುವುದು. ಪಾರ್ಶ್ವ ಹಾಗು ವಾಮ ಭಾಗಗಳಲ್ಲಿ ತ್ರಿಶೂಲ ಧಾರಿಣಿಯರಾದ ಶಿಲೆಯ ದ್ವಾರ ಪಾಲಿಕೆಯರ ಮೂರ್ತಿಗಳಿವೆ. ರಂಗಮಂಟಪದಲ್ಲಿ ದೇವಿಗೆ ಅಭಿಮುಖವಾಗಿ ಸಿಂಹರಾಜನ ಶಿಲಾಮೂರ್ತಿ ಯೊಂದಿದ್ದು ಮೇಲ್ಭಾಗದಲ್ಲಿ ಮರದ ಮುಚ್ಚಿಗೆಯಲ್ಲಿ ದಾರುಶಿಲ್ಪಗಳನ್ನು ಕೆತ್ತಲಾಗಿದೆ.
ದಕ್ಷಿಣದಲ್ಲಿ ಮಹಾಗಣಪತಿ ದೇವರು ತಾಳೆಗರಿಯ ಓಲೆಯಲ್ಲಿ ವ್ಯಾಸ ಮಹರ್ಷಿಗಳಿಂದ ಉಪದೇಶಿಸಲ್ಪಡತಕ್ಕಂತಹ ಮಹಾಭಾರತವನ್ನು ದಂತದಿಂದ ಬರೆಯುತ್ತಿರುವ ಪ್ರತಿಮೆಯ ಭವ್ಯ ಅನಾವರಣವನ್ನು ಕಾಣಬಹುದು. ಸಮೀಪದಲ್ಲಿ ದೇವಳದ ಪಲ್ಲಕ್ಕಿ, ಛತ್ರ ಚಾಮರ,ಹಸ್ರಕೊಡೆ, ಪಕ್ಕೆ ನಿಶಾನಿ, ಬಿರುದಾವಳಿಗಳು..ಇತ್ಯಾದಿ ರಜತ ಪರಿಕರಗಳನ್ನು ಇಡುವ ಖಜಾನೆ ಕೋಣೆ. ಆವರಣದುದ್ದಕ್ಕೂ ಬಲಿಗಲ್ಲುಗಳನ್ನು ಸ್ಥಾಪಿಸಲಾಗಿದ್ದು, ದೇವಳದ ಒಳಾಂಗಣದಲ್ಲಿ ಶ್ರೀ ದೇವಿಯ ಸಾನಿಧ್ಯ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ, ತುಳಸೀ ಕಟ್ಟೆ, ರಕ್ತೇಶ್ವರಿ ಸಹಿತ ಪರಿವಾರ ದೈವಗಳ ಸಾನಿಧ್ಯ, ತೀರ್ಥ ಬಾವಿ, ನೈವೇದ್ಯ ಶಾಲೆ ಹಾಗು ಸೇವಾ ಪ್ರಸಾದ ತಯಾರಿಕ ಉಗ್ರಾಣವನ್ನು ಕಾಣಬಹುದು.
ಸ್ವಚ್ಛತೆ, ಪಾವಿತ್ರ್ಯತೆ, ಅರ್ಚಕರ ಶೃದ್ಧೆ, ಸಿಬ್ಬಂದಿವರ್ಗದ ವಿಧೇಯತೆ,ಪದಾರ್ಥಿ,ಪರಿಚಾರಕ ಭೃತ್ಯ,ಚಾಕರಿ ವರ್ಗ ಹಾಗು ಸ್ವಯಂ ಸೇವಕರ ನಿಸ್ವಾರ್ಥ ಸೇವೆಯು ದೇವಾಲಯದ ಪ್ರಮುಖ ವಿಶೇಷತೆಯಾಗಿದೆ.
ಕ್ಷೇತ್ರದಲ್ಲಿ ಕಲೋಪಾಸನೆ ಮಹತ್ವಪೂರ್ಣವೆನಿಸಿದೆ. ಕ್ಷೇತ್ರದಲ್ಲಿ ಪ್ರತಿದಿನವೂ ಸಾಹಿತಿ, ವಿಧ್ವಾಂಸರ ಪ್ರವಚನ,ಉಪನ್ಯಾಸ.. ಸಾಯಂಕಾಲ ತಾಳಮದ್ದಳೆ ಭಾಗವತ-ಯಕ್ಷಗಾನ, ಹರಿಕಥೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಗೊಳಿಸಲಾಗುತ್ತದೆ. ಸೇವೆಯಾಟಕ್ಕಾಗಿ ರೂಪುಗೊಂಡ ‘ಮಂಗಳಾದೇವಿ ಯಕ್ಷಗಾನ ಮೇಳ’ ಇದರ ಶ್ರೀ ದೇವಿ ಮಹಾತ್ಮೆ ಹಾಗು ಅದರ ಪೌರಾಣಿಕ ಅಧ್ಯಾಯಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುತ್ತದೆ.
ನಮ್ಮೆಲ್ಲರ ಮನಸ್ಸಿಗೆ ಸದಾ ಶಾಂತಿ ನೆಮ್ಮದಿಯನ್ನು ನೀಡುವ ಮಂಗಳಾದೇವಿ ದೇವಾಲಯವು ದಿನದಿಂದ ದಿನಕ್ಕೆಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
❁೧೯೮೯’ರಂದು ನೂತನ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಹಿತ ಪುನರ್ ಪ್ರತಿಷ್ಟಾಪನೆಯು ನೆರವೇರಿತು. ✻
❁
೧೯೯೩’ರಂದು ಧನುರ್ಮಾಸ ಪೂಜೆಯನ್ನು ಸೇವಾರೂಪದಲ್ಲಿ ನಡೆಸಲು ಆರಂಭವಾಯಿತು. ✻
❁
ಮಾರ್ಚಿ ೧೫, ಭಾನುವಾರ ೧೯೯೮ ರಂದು ನೂತನ ಧ್ವಜಸ್ತಂಭದ ಪ್ರತಿಷ್ಟಾಪನಾ ಕಾರ್ಯವು ‘ಶೃಂಗೇರಿ ಶಾರದಾ ಮಠದ ದಕ್ಷಿಣಾಮ್ಮಾಯ ಪೀಠದ ಪರ್ಯಾಯ ಪೀಠಾದಿಪತಿಗಳಾಗಿರುವ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಯವರ ಅಮೃತ ಹಸ್ತಗಳಿಂದ ನೆರವೇರಿತು. ✻
❁ ೨೦೦೨’ರಂದು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ನಡೆಯಿತು. ಸಾನಿಧ್ಯವೃದ್ಧಿಗಾಗಿ ಪ್ರತೀ ಹನ್ನೆರಡು ವರ್ಷಕೊಮ್ಮೆ ದೇವಳದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಕೇರಳ ಮಾದರಿ ಶೈಲಿಯಲ್ಲಿ ತ್ರಿಕೋನಾಕಾರದ ದ್ವಾರ ರಚನೆಯೂ ಅದರಲ್ಲಿ , ದೇವಿಯ ಭಿತ್ತಿ ಚಿತ್ರಗಳನ್ನು ಪಡಿಮೂಡಿಸಲಾಯಿತು. ✻
❁
ಮಾರ್ಚಿ ೨೩, ಗುರುವಾರ ೨೦೦೨ ರಂದು
ವಾರ್ಷಿಕ ಜಾತ್ರ ಮಹೋತ್ಸವದ ಸಂದರ್ಭ ಶ್ರೀ ದೇವಿಯ ಕಿರೀಟಕ್ಕೆ ಭೂಷಣ ಪ್ರಾಯದಂತೆ ಪ್ರಭಾವಳಿಯ ರೂಪದಲ್ಲಿ ರಜತ ಸೂರ್ಯ ಕಿರಣ ತೇಜೋ ಮಂಡಲವನ್ನುಹಾಗು ‘ರಜತ ಪರಶು (ಭಾರ್ಗವ, ಕೊಡಲಿ)ವನ್ನು ಸಮರ್ಪಿಸಲಾಯಿತು. ✻
❁
ಮೇ ೧೦,ಶುಕ್ರವಾರ ೨೦೦೨ ರಂದು ಮಹಾನವಮಿ ಕಟ್ಟೆಯ ಬಳಿ ಸ್ವಾಗತ ಮಹಾದ್ವಾರವು ನಿರ್ಮಾಣಗೊಂಡಿತು. ನಿರ್ಮಾಣವಾದ ದೇವಸ್ಥಾನದ ಮಹಾದ್ವಾರದ ಉದ್ಘಾಟನೆಯನ್ನು ಉಡುಪಿ ಶ್ರೀ ಕೃಷ್ಣಮಠದ, ಪೇಜಾವರ ಅಧ್ಯೋಕ್ಷ ಮಠದ ಪೀಠಾದಿಪತಿಗಳಾಗಿದ್ದ ಕೀರ್ತಿಶೇಷರಾಗಿರುವ ಶ್ರೀ ವಿಶ್ವೇಶ ತೀರ್ಥ ಪಾದಂಗಳವರ ಮೂಲಕ ನೆರವೇರಿಸಲಾಯಿತು. ✻
❁
ಅಕ್ಟೋಬರ ೧೨, ಶುಕ್ರವಾರ ೨೦೦೭ ರಂದು ನವರಾತ್ರಿಯ ಪ್ರಥಮದಿನ ದೇವಸ್ಥಾನದ ಪ್ರವೇಶ ಮಹಾದ್ವಾರಕ್ಕೆ ರಜತ ಕವಚ ವನ್ನು ಸಮರ್ಪಿಸಲಾಯಿತು.ಇದೇ ಸಂದರ್ಭದಲ್ಲಿ ಪ್ರತೀ ಶುಕ್ರವಾರದಂದು ಅನ್ನ ಸಂತರ್ಪಣೆಯು ವಿದ್ಯುಕ್ತವಾಗಿ ಆರಂಭಗೊಂಡು ಮೃಷ್ಠಾನ್ನ ಭೋಜನ ಇಂದಿಗೂ ಅಕ್ಷಯ ಸದೃಶವಾಗಿ ನಡೆದುಬಂದಿದೆ. ✻
❁
೨೦೦೯ ನವರಾತ್ರಿಯ ಸಂದರ್ಭ ವಿನೂತನ ಮಾದರಿಯ ಶಿಲಾಮಯ ವಸಂತ ಮಂಟಪವನ್ನುಹಾಗೂ ಪಾಕಶಾಲೆ ಯು ನಿರ್ಮಾಣವಾಯಿತು. ✻
❁
ಅಕ್ಟೋಬರ ೮, ಶುಕ್ರವಾರ ೨೦೧೦ ರಂದು ನವರಾತ್ರಿಯ ಪ್ರಥಮದಿನ ದೇವಸ್ಥಾನದ ಪ್ರವೇಶ ಮಹಾದ್ವಾರದ ಬಾಗಿಲುಗಳಿಗೆ ರಜತ ಕವಚ ವನ್ನು ಹಾಗೂ ಅಂದು ದೇವಿಗೆ ೨ ಕೆ.ಜಿ ತೂಕದ ಚಿನ್ನದ ಸ್ವರ್ಣ ಮುಖವಾಡ ವನ್ನು ಸಮರ್ಪಿಸಲಾಯಿತು. ✻
❁
ಸಪ್ಟಂಬರ ೧, ಗುರುವಾರ ೨೦೧೧ ರ ಗಣೇಶ ಚತುರ್ಥಿಯ ದಿನದಂದು ದೇವಸ್ಥಾನದ ಶ್ರೀ ಮಹಾಗಣಪತಿ ದೇವರಿಗೆ ಚಿನ್ನದ ಸ್ವರ್ಣ ಕವಚ ವನ್ನು ಸಮರ್ಪಿಸಲಾಯಿತು. ✻
❁
ಅಕ್ಟೋಬರ ೫, ಶನಿವಾರ ೨೦೧೩ ರಂದು ನವರಾತ್ರಿಯ ಪ್ರಥಮದಿನ ದೇವಸ್ಥಾನದಲ್ಲಿ ಒಳಾಂಗಣದ ಪ್ರಾಂಗಣಕ್ಕೂ ಹಾಗು ಹೊರಾಂಗಣದ ರಾಜಾಂಗಣಕ್ಕೂ ಮೇಲ್ಛಾವಣಿ ಯನ್ನು ಹಾಕಲಾಯಿತು. ✻
❁
೨೦೧೫ ಮಾರ್ಚಿ ೪, ಮಂಗಳವಾರದಿಂದ, ೧೫ ಸೋಮವಾರದ ವರೆಗೆ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವವು ನಡೆಯಿತು. ಶ್ರೀ ದೇವಿಯ ಉತ್ಸವ ಮೂರ್ತಿಗೆ ಚಿನ್ನದಪುಷ್ಪ ಕನ್ನಡಿಯನ್ನು ಹಾಗು ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿತಗೊಂಡ ದೇವಳದ ಕಾರ್ಯಾಲಯ(ಸೇವಾ ಕೌಂಟರ್) ದೇವಸ್ಥಾನಕ್ಕೆ ಸಮರ್ಪಣೆಯಾಯಿತು.
ನವರಾತ್ರಿ ಸಂದರ್ಭ ರಜಾಂಗಣಕ್ಕೆ ಹಾಸುಗಲ್ಲನ್ನು ಹಾಕಲಾಯಿತು. ✻
❁
ಅಕ್ಟೋಬರ ೨, ಭಾನುವಾರ ೨೦೧೬ ರ ನವರಾತ್ರಿಯಂದು ನವರಾತ್ರಿಯ ಸಂದರ್ಭದಲ್ಲಿ ಶ್ರೀ ದೇವಿಯ ಮೂಲ ಬಿಂಬಕ್ಕೆ ಸ್ವರ್ಣ ದೃಷ್ಟಿ ನೇತ್ರ ವನ್ನು ಸಮರ್ಪಿಸಲಾಯಿತು. ✻
❁
ಮಾರ್ಚಿ ೫, ಮಂಗಳವಾರ ೨೦೧೮ ರ
ವರ್ಷಾವಧಿ ಜಾತ್ರ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನ ಮಹಾದ್ವಾರದ ಮೇಲ್ಭಾಗದಲ್ಲಿ ಪಂಚ ಹೆಡೆಗಳನ್ನುಳ್ಳ ಪನ್ನಗ ರಜತ ಪ್ರಭಾವಳಿ ಕವಚವನ್ನು ದ್ವಾರಕ್ಕೆ ಸಮರ್ಪಿಸಲಾಯಿತು. ✻
❁
ಅಕ್ಟೋಬರ ೧೦, ಬುಧವಾರ ೨೦೧೮ ರ ನವರಾತ್ರಿಯ ಸಂದರ್ಭದಲ್ಲಿ ಕ್ಷೇತ್ರದ ಧ್ವಜಸ್ತಂಭದ ಪೀಠಕ್ಕೆ ತಾಮ್ರ ಹಾಗು ರಜತ ಕವಚ ಹೊದಿಕೆಯನ್ನು ಸಮರ್ಪಿಸಲಾಯಿತು. ✻
❁
ಅಕ್ಟೋಬರ ೨೯, ಭಾನುವಾರ ೨೦೧೯ ರ ಕಳೆದ ನವರಾತ್ರಿಯ ಸಂದರ್ಭದಲ್ಲಿ ಶ್ರೀ ದೇವಿಗೆ ನೂತನ ಮರದ ಕಾಷ್ಟಶಿಲ್ಪದ ಅಭಯ ಹಸ್ತವನ್ನು ಸಮರ್ಪಿಸಲಾಯಿತು.✻
❁
ಫೆಬ್ರವರಿ ೨೧, ಸೋಮವಾರ ೨೦೨೧ ರಿಂದ ಮಾರ್ಚಿ ೨೮ ಭಾನುವಾರದ ವರೆಗೆ ಸತತ ಒಂದು ತಿಂಗಳಿಗಿಂತಲೂ ಅಧಿಕವಾಗಿ ನಡೆದ ಕಾರ್ಯದಲ್ಲಿ ಶ್ರೀ ಕ್ಷೇತ್ರದ ಒಳಾಂಗಣದ ಪ್ರಾಂಗಣಕ್ಕೂ ಹಾಗು ಹೊರಾಂಗಣದ ರಾಜಾಂಗಣಕ್ಕೂ ನೂತನ ಗ್ರಾನೈಟ್ ಶೀಲಾ ಮಾದರಿಯ ಹಾಸುಗಲ್ಲನ್ನು ಹಾಕಲಾಯಿತು.✻
❁
ಮಾರ್ಚಿ ೩೦, ಮಂಗಳವಾರ ೨೦೨೧ ರ ಕಳೆದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷತ್ರದಲ್ಲಿ ನೆರವೇರುವ ಅನ್ನಸಂತರ್ಪಣೆಯ ತಟ್ಟೆಗಳ ಶುಚಿತ್ವಕ್ಕಾಗಿ ‘ತಟ್ಟೆಗಳನ್ನು ತೊಳೆಯುವ ಸ್ವಯಂಚಾಲಿತ ಯಂತ್ರ’ (Dish washer)ವನ್ನು ಸಮರ್ಪಿಸಲಾಯಿತು.✻
❁
ಅಕ್ಟೋಬರ ೬, ಗುರುವಾರ ೨೦೨೧ ರ ಕಳೆದ ನವರಾತ್ರಿಯ ಸಂದರ್ಭದಲ್ಲಿ ನವರಾತ್ರಿಯ ಪ್ರಥಮ ದಿನದಂದು ಶ್ರೀ ದೇವಿಯ ಉತ್ಸವಮೂರ್ತಿಯ ಪುಷ್ಪ ಕನ್ನಡಿಗೆ ೯ ಸುದರ್ಶನ ಸಾಲಿಗ್ರಾಮದ ರಜತ ಹಾರವನ್ನು ಸಮರ್ಪಿಸಲಾಯಿತು. ✻
ಹೀಗೆ ಕಾಲಾನುಕಾಲಕ್ಕೆ ಗಣನೀಯವಾಗಿ ಅಭಿವೃದ್ಧಿಯ ಶಿಖರ ಸ್ಥಿತಿಯಲ್ಲಿ ಉನ್ನತಿಗೊಳ್ಳುತ್ತಿರುವ ನಮ್ಮ ಮಂಗಳಾದೇವಿ ಕ್ಷೇತ್ರದ ಸಕಲ ಏಳ್ಗೆಗೆ ಕಾರಣ ಆ ತಾಯಿ ಶ್ರೀ ಮಂಗಳಾಂಬಿಕೆಯೇ..🙏🏻
ಹಲವು ರೀತಿಯ ತಾಪತ್ರಯಗಳನ್ನು ಭಕ್ತಾದಿಗಳು ದೇವಿಯ ಅನುಗ್ರಹದೊಂದಿಗೆ ಪರಿಹರಿಸಿ ಕೊಂಡಿದ್ದಾರೆ. ನಮ್ಮಿಂದ ಕೊಟ್ಟು ಪಡೆದುಕೊಳ್ಳುವ ತಾಯಿ ತನ್ನ ಸಮಸ್ತ ಕ್ಷೇತ್ರವೃದ್ಧಿ, ಸಾನಿಧ್ಯವೃದ್ಧಿಯನ್ನು ಮಾಡಿಸಿಕೊಂಡು ತನ್ನ ಸುಪರ್ಧಿಗೆ ವಹಿಸಿ ತಾನು ಮೆರೆಯಲ್ಪಡುವ ವೈಭವವನ್ನು ಕಂಡು ಧನ್ಯರಾಗುವ ಭಾಗ್ಯವನ್ನು ನಮ್ಮೆಲ್ಲರಿಗೂ ಕರುಣಿಸಿದ್ದಾಳೆ.
ನಾಳೆಗೆ ಶ್ರೀ ದೇವಿಯ ಪುನರ್-ಪ್ರತಿಷ್ಟೆಯು ನಡೆದು ಸುದೀರ್ಘ ೩೩ ವರ್ಷಗಳು ಸಲ್ಲುತ್ತದೆ.
ಈ ಶುಭಾವಸರದಲ್ಲಿ ಶ್ರೀ ದೇವಿಗೆ ಪಂಚವಿಶಂತಿ ಕಲಶಾಭಿಷೇಕ ಸಹಿತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು ರಾತ್ರಿ ೮’ಕ್ಕೆ ಮಹಾಪೂಜೆಯು ನೆರವೇರಿ
ಬಲಿ ಉತ್ಸವವು ನಡೆಯಲಿದ್ದು ಬಳಿಕ ದೇವಾಲಯದ ರಾಜಾಂಗಣದಲ್ಲಿ ಸಣ್ಣ ಭಂಡಿಸುತ್ತು ನಡೆಯಲಿದೆ.
ಇಂತೆ ವಸಂತ ಪೂಜೆಯು ನಡೆದು ದೇವಿಯು ಗರ್ಭಗೃಹವನ್ನು ಸೇರಲು ಸಣ್ಣದೊಂದು ಆರತಿಯಾದ ಬಳಿಕ ಶ್ರೀ ದೇವಿಯ ಪ್ರತಿಷ್ಟಾ ವರ್ಧ್ಯಂತೋತ್ಸವವು ದೇವಳದಲ್ಲಿ ಸಂಪನ್ನವಾಗಲಿದೆ.
ನಾಳಿನ ಪುನಃ ಪ್ರತಿಷ್ಠಾ ಮಹೋತ್ಸವ ಪರ್ವಕಾಲದಲ್ಲಿ ಸರ್ವರಿಗೂ ಮಂಗಳಾಂಬಿಕೆಯು ಸರ್ವತ್ರ ಮಂಗಳವನ್ನು ಆರೋಗ್ಯ ಭಾಗ್ಯವನ್ನು ಲೋಕಕ್ಕೆ ದಯ ಪಾಲಿಸಲಿ ಎಂದು ತಾಯಿಯಲ್ಲಿ ಭಿನ್ನವಿಸೋಣ. ಶ್ರೀದೇವಿಯ ಪೂರ್ಣಾನುಗ್ರಹಕ್ಕೆ ಪ್ರತಿಷ್ಠಾ ವರ್ಧ್ಯಂತೋತ್ಸವವು ಕಾರಣವಾಗಲಿ. ಇದರ ಮಹಾ ಫಲವನ್ನು ಸಮಸ್ತ ಸಜ್ಜನರೂ ಆಸ್ವಾದಿಸಿ, ಸುಭೀಕ್ಷೆ ನೆಲೆಸುವಂತಾಗಲಿ.
ಅವಳ ಪಾದ ಸೇವೆಯನ್ನು ಇನ್ನೂ ಅಧಿಕವಾಗಿ ನಮ್ಮಿಂದ ಮಾಡಿಸಿಕೊಂಡು ಸರ್ವರನ್ನೂ ಅನುಗ್ರಹಿಸಲಿ.