Mangaladevi Tuesday, 17th May 2022

On this Day 

May 17, 2022

 have a blissful darshan of Sri Devi

ಓಂ ಜಯದೇವಿ ನಮಸ್ತುಭ್ಯಂ | ಜಯ ಭಕ್ತ ವರಪ್ರದೇ | ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ||

ನಂಬಿದವರ ಕೈ ಬಿಡದೆ ಬೇಡಿದನ್ನು ನೀಡುವ ಕೇಳಿದನ್ನು ಕರುಣಿಸಿ, ಭಕ್ತರ ಪಾಲಿಗೆ ಮಾತೃ ಸ್ವರೂಪಿಣಿಯಾಗಿ ಸಕಲ ಸನ್ಮಂಗಳವನ್ನುಂಟು ಮಾಡುತ್ತ ಬಂದಿರುವ ಭಾರ್ಗವ ಕ್ಷೇತ್ರದ ಕರುಣಾಮೂರ್ತಿ ಸರ್ವಮಂಗಳೆಗೆ ಇಂದು ಪುನರ್ ಪ್ರತಿಷ್ಠಾ ಮಹೋತ್ಸವದ ಉತ್ಸವದ ಸುದಿನ. ಬನ್ನಿ ಪಾಲ್ಗೊಳ್ಳಿ ಅಮ್ಮನೊಂದಿಗೆ ಸಂಭ್ರಮಿಸಿ.

ಇಂದು ಮೇ ೧೭ ಶ್ರೀ ಮಂಗಳಾದೇವಿ ಅಮ್ಮನವರ ಪುನರ್ ಪ್ರತಿಷ್ಠಾ ಮಹೋತ್ಸವವು ಪೂರೈಸಿದ ಮಹಾಸುದಿನ. ದಿನಾಂಕಾನುಸಾರ ಇಂದಿಗೆ ಶ್ರೀ ದೇವಿಯ ಪುನರ್ ಪ್ರತಿಷ್ಟೆಯು ನೆರವೇರಿ ಮೂವತ್ತ ಮೂರು ವರ್ಷಗಳು (೧೭-೫ -೧೯೮೯ ರಿಂದ ೧೭-೫-೨೦೨೨) ತುಂಬಲಿದ್ದು ಶ್ರೀ ದೇವಿಯ ಪೂರ್ಣಾನುಗ್ರಹಕ್ಕೆ ಪುನಃ ಪ್ರತಿಷ್ಠಾ ವರ್ಧಂತಿಯು ಕಾರಣವಾಗಲಿದೆ.👏

ಜಗದಂಬೆಯ ಪರಮಾನುಗ್ರಹದಿಂದ ಸ್ವಸ್ತಿ ಶ್ರೀಮನೃಪ ಶಾಲಿವಾಹನಶಕೆ ೧೯೧೧ ಶುಕ್ಲನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲ ಪಕ್ಷ ಶುದ್ಧ ದ್ವಾದಶಿಯ ಬುಧವಾರ ಮೇ ೧೭’ ೧೯೮೯’ ನೇ ಇಸವಿಯ ವರ್ಷದಂದು ಶ್ರೀ ಮಂಗಳಾದೇವಿ ಅಮ್ಮನವರ ಪುನರ್-ಪ್ರತಿಷ್ಟಾಪನೆಯು ಪ್ರಪಂಚದ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯವಾಗಿ ಬಹು ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ಸಹಿತ ಕಂಡು ಕೇಳರಿಯದ ರೀತಿಯಲ್ಲಿ ಆ ಕಾಲಕ್ಕೆ ವೈಭವದಿಂದ ನೆರವೇರಿತ್ತು.

ಶ್ರೀ ದೇವಿಯ ದಯೆ, ಪೂರ್ಣಾನುಗ್ರಹದಿಂದ ದೇಗುಲವನ್ನು ಜೀರ್ಣೋದ್ಧಾರದ ಮೂಲಕ ಪುನರ್ನವೀಕರಣ ಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ಸರ್ವ ಕಾಲಕ್ಕೂ ತಿಥಿಯ ಹೊರತು, ದಿನಾಂಕಾನುಸಾರವಾಗಿ ಶ್ರೀ ದೇವಿಯ ಪುನರ್ -ಪ್ರತಿಷ್ಟಾ ಮಹೋತ್ಸವವು ಪ್ರತಿ ಬಾರಿಯಂತೆ ಮೇ ೧೭’ರಂದು ಉತ್ಸವಾದಿಗಳ ಮೂಲಕ ವೈಭವದಿಂದ ನಡೆಯುವುದು ವಾಡಿಕೆ.

ಇಂದಿಗೆ ಮೂವತ್ತ ಮೂರು ವರ್ಷಗಳು ಪೂರ್ಣಗೊಂಡು ಮೂವತ್ತ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಪುನಃ ಪ್ರತಿಷ್ಠಾ ದಿನದ ಈ ಶುಭ ಸಂದರ್ಭದಲ್ಲಿ ಶೋಭಾಯಮಾನಾಳಾಗಿ ಸಾಕ್ಷಾತ್ ಮಹಾರಾಣಿಯಂತೆ ಅಲಂಕೃತಳಾದ ಜಗನ್ಮಾತೆಯು ಕೆಂಪು ಸ್ವರ್ಣ ಮಿಶ್ರಿತವರ್ಣದ ಸೀರೆಯನ್ನು ಧರಿಸಿ, ಸರ್ವಾಭರಣ ಭೂಷಿತಳಾಗಿ ಚಕ್ರ ಗದೆಯನ್ನು ಧಾರಣೆ ಮಾಡಿಕೊಂಡು, ಭಕ್ತ ಪರಾಧಿನಳಾದ ಮಂಗಳಾದೇವಿಯು ಕಾಲಂದುಗೆಯನ್ನು ಚಾಚಿಕೊಂಡು ಸಿಂಹವಾಹಿನಿಯಾಗಿ ವಿಜೃಂಭಿಸುತ್ತಿರುವಳು

ಇಂದಿಗೆ ಶ್ರೀ ದೇವಿಯ ಕರುಣಾಕಟಾಕ್ಷದಿಂದ ದೇವಸ್ಥಾನವು ಉತ್ತುಂಗಕ್ಕೇರಿ ಉಚ್ಛ್ರಾಯಮಾನವಾಗಿ ಬೆಳಗುತಲ್ಲಿದ್ದು ಭಕ್ತ ಜನಕೋಟಿಗೆ ನಿತ್ಯ ಮಾರ್ಗದರ್ಶಿಯಾಗಿದೆ.
ಶ್ರೀ ದೇವಿಯು ಕಾಲನುಕಾಲಕ್ಕೆ ಅನುಕ್ರಮವಾಗಿ ತನ್ನ ಸ್ವಯೀಚ್ಛೆಯಂತೆ ತನ್ನ ದೇವಳದ ಜೀರ್ಣೋದ್ಧಾರ ಕಾರ್ಯ ಸಹಿತ ಸರ್ವ ಅಭಿವೃದ್ಧಿಯನ್ನು ತನ್ನ ಭಕ್ತಾದಿಗಳಿಂದ ಮಾಡಿಕೊಂಡು ಅದರಲ್ಲಿ ಪಾಲ್ಗೊಂಡು ಧನ್ಯರಾಗುವ ಸೌಭಾಗ್ಯವನ್ನು ಅನುಗ್ರಹಿಸುತ್ತಾ ಬಂದಿದ್ದಾಳೆ.
ನಮ್ಮಿಂದ ಕೊಟ್ಟು ಪಡೆದುಕೊಳ್ಳುವ ತಾಯಿ ತನ್ನ ಸಮಸ್ತ ಕ್ಷೇತ್ರವೃದ್ಧಿ, ಸಾನಿಧ್ಯವೃದ್ಧಿಯನ್ನು ಮಾಡಿಸಿಕೊಂಡು ತನ್ನ ಸುಪರ್ಧಿಗೆ ವಹಿಸಿ ತಾನು ಮೆರೆಯಲ್ಪಡುವ ವೈಭವವನ್ನು ಕಂಡು ಧನ್ಯರಾಗುವ ಸೌಭಾಗ್ಯವನ್ನು ಇಂದು ನಮ್ಮೆಲ್ಲರಿಗೂ ಕರುಣಿಸಿದ್ದಾಳೆ.

ಭಾರ್ಗವರಾಮರಿಂದ ಪ್ರತಿಷ್ಠಾಪಿಸಲ್ಪಟ್ಟು ಮಂಗಳಾಪುರದ ಈ ಪುಣ್ಯಭೂಮಿಯಲ್ಲಿ ಉತ್ತರೋತ್ತರ ಅಭಿವೃದ್ಧಿಯನ್ನು ನಿತ್ಯ ಮಂಗಲವನ್ನು ಅನುಗ್ರಹಿಸಿ ಶುಭಂಕರಿಯು ನಮ್ಮೆಲ್ಲರನ್ನು ಪ್ರೀತಿಯಿಂದ ಸಲಹುತ್ತಾ ಬಂದಿದ್ದಾಳೆ.
ಶ್ರೀ ದೇವಿಯು ಕಾಲನುಕಾಲಕ್ಕೆ ಅನುಕ್ರಮವಾಗಿ ತನ್ನ ಇಚ್ಛೆಯಂತೆ ತನ್ನ ದೇವಳದ ಜೀರ್ಣೋದ್ಧಾರ ಕಾರ್ಯ ಸಹಿತ ಸಮಗ್ರ ಅಭಿವೃದ್ಧಿಯನ್ನು ತನ್ನ ಭಕ್ತಾದಿಗಳಿಂದ ಮಾಡಿಸಿಕೊಂಡು ಅದರಲ್ಲಿ ಪಾಲ್ಗೊಂಡು ಧನ್ಯರಾಗುವ ಸೌಭಾಗ್ಯವನ್ನು ಕರುಣಿಸಿದ್ದಾಳೆ. ಸರ್ವಾಲಂಕಾರಯುಕ್ತಳಾಗಿ ನಿತ್ಯ ಉತ್ಸವಾದಿ ಮಹೋತ್ಸವಗಳಿಂದ ಸಂಪೂಜಿಸಲ್ಪಡುತ್ತಿರುವ ಭಕ್ತವತ್ಸಲೆ ತನ್ನ ನಂಬಿದ ಆಸ್ತಿಕರನ್ನು ಕೈ ಬಿಡದೆ ಸಲಹಿ ಆಶೀರ್ವದಿಸಲು, ಕಷ್ಟ ಕಾರ್ಪಣ್ಯಗಳು ದುಃಖ ಶೋಕಗಳು ದೂರವಾಗಿ ಶಾಂತಿ ಸಮಾಧಾನ ಹೊಂದಿ ಶ್ರೇಯಸ್ಸು ಯಶಸ್ಸನ್ನುಗಳಿಸಿ ಉತ್ತರೋತ್ತರ ಅಭಿವೃದ್ಧಿ ಹೊಂದುವರು.

ಇಂದು ಶ್ರೀ ದೇವಿಯ ಪುನರ್-ಪ್ರತಿಷ್ಟೆಯು ನಡೆದು ಸುದೀರ್ಘ ೩೩ ವರ್ಷಗಳು ಸಲ್ಲುತ್ತದೆ. ಈ ಶುಭಾವಸರದಲ್ಲಿ ಪ್ರಾತಃಕಾಲ ನೆರವೇರಿದ ಪಂಚವಿಶಂತಿ ಕಲಶಾಭಿಷೇಕದಿಂದ ಬಿಂಬದಲ್ಲಿ ಪೂರ್ಣ ಕಳಾಸಾನಿದ್ಯಳಾಗಿ ಮೆರೆದು ಇದೀಗ ಅಲಂಕಾರದ ಮುಖೇನ ದರ್ಶನ ನೀಡಿದ ತಾಯಿಗೆ ಮಧ್ಯಾಹ್ನ ಮಹಾಪೂಜೆ ನಡೆದು ಉತ್ಸವಾರ್ಥ ರಾತ್ರಿ ೮’ಕ್ಕೆ ಮಹಾಪೂಜೆಯು ನೆರವೇರಿ ಬಲಿ ಉತ್ಸವವು ನಡೆಯಲಿದ್ದು ಬಳಿಕ ದೇವಾಲಯದ ರಾಜಾಂಗಣದಲ್ಲಿ ಸಣ್ಣ ಭಂಡಿಸುತ್ತು ನಡೆಯಲಿದೆ. ಇಂತೆ ವಸಂತ ಪೂಜೆಯು ನಡೆದು ದೇವಿಯು ಗರ್ಭಗೃಹವನ್ನು ಸೇರಲು ಆರತಿಯಾದ ಬಳಿಕ ಶ್ರೀ ದೇವಿಯ ಪ್ರತಿಷ್ಟಾ ವರ್ಧ್ಯಂತೋತ್ಸವವು ದೇವಳದಲ್ಲಿ ಸಂಪನ್ನವಾಗಲಿದೆ.

Mangalarathi