On this Day the 1st of March 2022 have a blissful darshan of Sri Devi
࿐नमः शिवाय࿐
ಓಂ ಶಂಭವೇ ನಮಃ
ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ
ಮಹಾದೇವಾಯ ತ್ರ್ಯಂಬಕಾಯ
ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ
ಕಾಲಾಗ್ನಿರುದ್ರಾಯ ನೀಲಕಂಠಾಯ
ಸರ್ವೇಶ್ವರಾಯ ಸದಾಶಿವಾಯ
ಶಂಕರಾಯ ಮೃತ್ಯುಂಜಯಾಯ
ಶ್ರೀ ಮನ್ಮಹಾದೇವಾಯ ನಮಃ||ॐ
🔱ॐ ⬩ ॐ ⬩ ॐ ⬩ ≈⬩ ॐ ⬩ ॐ ⬩ ॐ ⬩ ॐ🔱
𝘞𝘢𝘳𝘮 𝘨𝘳𝘦𝘦𝘵𝘪𝘯𝘨𝘴 𝘰𝘯 𝘵𝘩𝘦 𝘰𝘤𝘤𝘢𝘴𝘪𝘰𝘯 𝘰𝘧 𝘚𝘩𝘪𝘷𝘳𝘢𝘵𝘳𝘪 𝘵𝘰 𝘺𝘰𝘶. 𝘐𝘵’𝘴 𝘵𝘩𝘦 𝘥𝘢𝘺 𝘰𝘧 𝘤𝘦𝘭𝘦𝘣𝘳𝘢𝘵𝘪𝘰𝘯 𝘪𝘯 𝘔𝘢𝘯𝘨𝘢𝘭𝘢𝘥𝘦𝘷𝘪 𝘛𝘦𝘮𝘱𝘭𝘦 𝘵𝘰𝘥𝘢𝘺 𝘰𝘯 𝘵𝘩𝘦 𝘰𝘤𝘤𝘢𝘴𝘪𝘰𝘯 𝘰𝘧 𝘔𝘢𝘩𝘢𝘴𝘩𝘪𝘷𝘳𝘢𝘵𝘳𝘪. 𝘖𝘶𝘳 ß𝘦𝘭𝘰𝘷𝘦𝘥 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘩𝘢𝘴 𝘣𝘦𝘦𝘯 𝘢𝘥𝘰𝘳𝘯𝘦𝘥 𝘣𝘦𝘢𝘶𝘵𝘪𝘧𝘶𝘭𝘭𝘺 𝘸𝘪𝘵𝘩 𝘵𝘩𝘦 𝘢𝘭𝘵𝘢𝘳 𝘰𝘧 𝘈𝘳𝘥𝘩𝘢𝘯𝘢𝘳𝘦𝘦𝘴𝘩𝘸𝘢𝘳𝘢.
𝘐𝘯 𝘵𝘩𝘦 𝘮𝘰𝘯𝘵𝘩 𝘰𝘧 𝘔𝘢𝘨𝘩𝘢 𝘥𝘶𝘳𝘪𝘯𝘨 𝘵𝘩𝘦 𝘧𝘰𝘶𝘳𝘵𝘦𝘦𝘯𝘵𝘩 𝘥𝘢𝘺 𝘰𝘧 𝘵𝘩𝘦 𝘧𝘢𝘥𝘪𝘯𝘨 𝘱𝘩𝘢𝘴𝘦 𝘰𝘧 𝘵𝘩𝘦 𝘮𝘰𝘰𝘯 (𝘒𝘳𝘪𝘴𝘩𝘯𝘢 𝘗𝘢𝘬𝘴𝘩𝘢), 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪, 𝘸𝘪𝘭𝘭 𝘣𝘦 𝘥𝘦𝘤𝘰𝘳𝘢𝘵𝘦𝘥 𝘪𝘯 𝘵𝘩𝘦 𝘧𝘰𝘳𝘮 𝘰𝘧 𝘈𝘳𝘥𝘩𝘢𝘯𝘢𝘳𝘦𝘦𝘴𝘩𝘸𝘢𝘳𝘢 𝘧𝘳𝘰𝘮 𝘢 𝘭𝘰𝘯𝘨 𝘱𝘦𝘳𝘪𝘰𝘥 𝘰𝘧 𝘵𝘪𝘮𝘦. 𝘖𝘯𝘭𝘺, 𝘰𝘯𝘤𝘦 𝘪𝘯 𝘢 𝘺𝘦𝘢𝘳, 𝘚𝘳𝘪 𝘋𝘦𝘷𝘪 𝘸𝘪𝘭𝘭 𝘵𝘢𝘬𝘦 𝘵𝘩𝘦 𝘧𝘰𝘳𝘮 𝘰𝘧 𝘴𝘩𝘪𝘷𝘢’𝘴 𝘢𝘭𝘵𝘢𝘳 𝘈𝘳𝘥𝘩𝘢𝘯𝘢𝘳𝘦𝘦𝘴𝘩𝘸𝘢𝘳𝘢 𝘢𝘯𝘥 𝘵𝘩𝘦 𝘤𝘦𝘭𝘦𝘣𝘳𝘢𝘵𝘪𝘰𝘯 𝘰𝘧 𝘴𝘩𝘪𝘷𝘢𝘳𝘢𝘵𝘳𝘪 𝘴𝘩𝘢𝘭𝘭 𝘣𝘦 𝘥𝘰𝘯𝘦 𝘪𝘯 𝘢 𝘨𝘳𝘦𝘢𝘵 𝘱𝘰𝘮𝘱 𝘢𝘯𝘥 𝘴𝘱𝘭𝘦𝘯𝘥𝘰𝘳.👏
𝖯𝖾𝗈𝗉𝗅𝖾 𝗁𝖺𝗏𝗂𝗇𝗀 𝖿𝗎𝗅𝗅 𝖿𝖺𝗂𝗍𝗁 𝖺𝗇𝖽 𝖽𝖾𝗏𝗈𝗍𝗂𝗈𝗇 𝗍𝗈𝗐𝖺𝗋𝖽𝗌 𝗈𝗎𝗋 𝖻𝖾𝗅𝗈𝗏𝖾𝖽 𝗀𝗈𝖽𝖽𝖾𝗌𝗌, 𝗌𝗁𝖺𝗅𝗅 𝗉𝗋𝖺𝗂𝗌𝖾 𝖺𝗇𝖽 𝖼𝗁𝖺𝗇𝗍 𝗁𝖾𝗋 𝗐𝗂𝗍𝗁 𝗍𝗁𝗂𝗌 𝗍𝗁𝖾 𝗌𝗁𝗅𝗈𝗄𝖺, “𝖩𝖺𝗒𝖺 𝖲𝗁𝖺𝗇𝗄𝖺𝗋𝖺 𝖵𝖺𝗆𝖺𝗇𝖺 𝖬𝖺𝗇𝗀𝖺𝗅𝖾 𝖲𝖺𝗋𝗏𝖺 𝖬𝖺𝗇𝗀𝖺𝗅𝖾” 𝖺𝗅𝗐𝖺𝗒𝗌 𝖺𝗇𝖽 𝗌𝖾𝖾𝗄 𝗁𝖾𝗋 𝖻𝗅𝖾𝗌𝗌𝗂𝗇𝗀𝗌. 𝖲𝗂𝗍𝗍𝗂𝗇𝗀 𝖻𝖾𝗌𝗂𝖽𝖾𝗌 𝗁𝖾𝗋 𝖻𝖾𝗅𝗈𝗏𝖾𝖽 𝗁𝗎𝗌𝖻𝖺𝗇𝖽 𝖲𝗁𝗂𝗏𝖺, 𝗍𝗈𝗐𝖺𝗋𝖽𝗌 𝗁𝗂𝗌 𝗅𝖾𝖿𝗍, 𝗈𝗎𝗋 𝖻𝖾𝗅𝗈𝗏𝖾𝖽 𝗀𝗈𝖽𝖽𝖾𝗌𝗌 𝖼𝖺𝗇 𝖻𝖾 𝗌𝖾𝖾𝗇 𝗁𝗈𝗅𝖽𝗂𝗇𝗀 𝖺 𝗍𝗋𝗂𝖽𝖾𝗇𝗍 𝗂𝗇 𝗁𝖺𝗇𝖽 𝖺𝗇𝖽 𝗆𝖺𝗃𝖾𝗌𝗍𝗂𝖼𝖺𝗅𝗅𝗒 𝖺𝗇𝖽 𝗂𝗇 𝖺 𝗎𝗇𝗉𝗋𝖾𝖼𝖾𝖽𝖾𝗇𝗍𝖾𝖽 𝖿𝗈𝗋𝗆, 𝖺𝖽𝗈𝗋𝗇𝗂𝗇𝗀 𝗍𝗁𝖾 𝖺𝗅𝗍𝖺𝗋 𝗈𝖿 𝖠𝗋𝖽𝗁𝖺𝗇𝖺𝗋𝖾𝖾𝗌𝗁𝗐𝖺𝗋𝖺🥰🌷
𝖲𝗁𝗂𝗏𝖺𝗋𝖺𝗍𝗋𝗂 𝗂𝗌 𝖼𝖾𝗅𝖾𝖻𝗋𝖺𝗍𝖾𝖽 𝗆𝖺𝗃𝖾𝗌𝗍𝗂𝖼𝖺𝗅𝗅𝗒 𝗂𝗇𝗌𝗂𝖽𝖾 𝗍𝗁𝖾 𝗍𝖾𝗆𝗉𝗅𝖾 𝖺𝗇𝖽 𝗂𝗍 𝗂𝗌 𝗈𝗇𝗅𝗒 𝗈𝗇 𝗍𝗁𝗂𝗌 𝖽𝖺𝗒, 𝗀𝗈𝖽𝖽𝖾𝗌𝗌 𝖺𝖽𝗈𝗋𝗇𝗌 𝗍𝗁𝗂𝗌 𝖻𝖾𝖺𝗎𝗍𝗂𝖿𝗎𝗅 𝖿𝗈𝗋𝗆 𝗈𝖿 𝖠𝗋𝖽𝗁𝗇𝖺𝗋𝗂𝗌𝗁𝗐𝖺𝗋𝖺. 𝖥𝗋𝗈𝗆 𝖺𝗇𝖼𝗂𝖾𝗇𝗍 𝗍𝗂𝗆𝖾𝗌, 𝖨𝗍 𝗂𝗌 𝗂𝗇 𝗉𝗋𝖺𝖼𝗍𝗂𝖼𝖾 𝗍𝗈 𝖽𝖾𝖼𝗈𝗋𝖺𝗍𝖾 𝗀𝗈𝖽𝖽𝖾𝗌𝗌 𝖬𝖺𝗇𝗀𝖺𝗅𝖺𝖽𝖾𝗏𝗂 𝗂𝗇 𝗍𝗁𝗂𝗌 𝖿𝗈𝗋𝗆 𝖺𝗇𝖽 𝗂𝗌 𝖽𝗈𝗇𝖾 𝗈𝗇𝗅𝗒 𝗈𝗇𝖼𝖾 𝖽𝗎𝗋𝗂𝗇𝗀 𝗍𝗁𝖾 𝗐𝗁𝗈𝗅𝖾 𝗒𝖾𝖺𝗋 𝗈𝗇 14𝗍𝗁 𝖽𝖺𝗒 𝗈𝖿 𝗍𝗁𝖾 𝖿𝖺𝖽𝗂𝗇𝗀 𝗉𝗁𝖺𝗌𝖾 𝗈𝖿 𝗍𝗁𝖾 𝗆𝗈𝗈𝗇 𝗂𝗇 𝗍𝗁𝖾 𝗆𝗈𝗇𝗍𝗁 𝗈𝖿 𝖬𝖺𝗀𝗁𝖺 𝖺𝖼𝖼𝗈𝗋𝖽𝗂𝗇𝗀 𝗍𝗈 𝖧𝗂𝗇𝖽𝗎 𝖼𝖺𝗅𝖾𝗇𝖽𝖺𝗋.
𝐏𝐚𝐫𝐯𝐚𝐭𝐢 𝐚𝐧𝐝 𝐒𝐡𝐢𝐯𝐚 𝐢𝐬 𝐭𝐞𝐫𝐦𝐞𝐝 𝐭𝐨 𝐛𝐞 𝐭𝐡𝐞 𝐩𝐚𝐫𝐞𝐧𝐭𝐬 𝐨𝐟 𝐭𝐡𝐢𝐬 𝐰𝐡𝐨𝐥𝐞 𝐮𝐧𝐢𝐯𝐞𝐫𝐬𝐞 𝐛𝐲 𝐭𝐡𝐞 𝐕𝐞𝐝𝐚𝐬. 𝐓𝐡𝐞𝐲 𝐚𝐫𝐞 𝐭𝐡𝐞 𝐫𝐞𝐚𝐬𝐨𝐧 𝐛𝐞𝐡𝐢𝐧𝐝 𝐭𝐡𝐞 𝐠𝐞𝐧𝐞𝐫𝐚𝐭𝐢𝐨𝐧, 𝐦𝐚𝐢𝐧𝐭𝐞𝐧𝐚𝐧𝐜𝐞 𝐚𝐧𝐝 𝐝𝐞𝐬𝐭𝐫𝐮𝐜𝐭𝐢𝐨𝐧 𝐨𝐟 𝐞𝐚𝐜𝐡 𝐚𝐧𝐝 𝐞𝐯𝐞𝐫𝐲 𝐥𝐢𝐯𝐢𝐧𝐠 𝐜𝐫𝐞𝐚𝐭𝐮𝐫𝐞𝐬 𝐨𝐟 𝐭𝐡𝐢𝐬 𝐮𝐧𝐢𝐯𝐞𝐫𝐬𝐞. 𝐀𝐫𝐝𝐡𝐧𝐚𝐫𝐢𝐬𝐡𝐰𝐚𝐫𝐚 𝐟𝐨𝐫𝐦 𝐨𝐟 𝐒𝐡𝐢𝐯𝐚 𝐚𝐧𝐝 𝐒𝐡𝐚𝐤𝐭𝐢 𝐜𝐚𝐧𝐧𝐨𝐭 𝐛𝐞 𝐝𝐞𝐬𝐜𝐫𝐢𝐛𝐞𝐝 𝐩𝐫𝐞𝐜𝐢𝐬𝐞𝐥𝐲 𝐞𝐯𝐞𝐧 𝐛𝐲 𝐭𝐡𝐞 𝐯𝐞𝐝𝐚𝐬. 𝐬𝐮𝐜𝐡 𝐢𝐬 𝐢𝐭𝐬 𝐟𝐨𝐫𝐦 𝐚𝐧𝐝 𝐠𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢 𝐡𝐚𝐬 𝐥𝐨𝐯𝐢𝐧𝐠𝐥𝐲 𝐚𝐝𝐨𝐫𝐧𝐞𝐝 𝐭𝐡𝐢𝐬 𝐟𝐨𝐫𝐦 𝐭𝐨𝐝𝐚𝐲. 𝐒𝐡𝐞 𝐜𝐚𝐧 𝐛𝐞 𝐬𝐞𝐞𝐧 𝐢𝐧 𝐚 𝐦𝐚𝐭𝐭𝐞𝐝 𝐡𝐚𝐢𝐫 𝐰𝐢𝐭𝐡 𝐭𝐡𝐞 𝐌𝐨𝐨𝐧 𝐢𝐧 𝐢𝐭 𝐚𝐧𝐝 𝐢𝐬 𝐡𝐨𝐥𝐝𝐢𝐧𝐠 𝐚 𝐃𝐚𝐦𝐚𝐫𝐮, 𝐓𝐫𝐢𝐝𝐞𝐧𝐭 𝐚𝐧𝐝 𝐑𝐮𝐝𝐫𝐚𝐤𝐬𝐡𝐚 𝐦𝐚𝐚𝐥𝐚 𝐢𝐧 𝐡𝐞𝐫 𝐫𝐢𝐠𝐡𝐭 𝐡𝐚𝐧𝐝 𝐫𝐞𝐬𝐞𝐦𝐛𝐥𝐢𝐧𝐠 𝐭𝐡𝐞 𝐟𝐨𝐫𝐦 𝐨𝐟 𝐒𝐡𝐢𝐯𝐚, 𝐨𝐧 𝐭𝐡𝐞 𝐥𝐞𝐟𝐭, 𝐬𝐡𝐞 𝐜𝐚𝐧 𝐛𝐞𝐞𝐧 𝐡𝐨𝐥𝐝𝐢𝐧𝐠 𝐚 𝐂𝐡𝐚𝐤𝐫𝐚, 𝐥𝐨𝐭𝐮𝐬 𝐟𝐥𝐨𝐰𝐞𝐫𝐬 𝐢𝐧 𝐡𝐞𝐫 𝐡𝐚𝐧𝐝 𝐚𝐧𝐝 𝐢𝐬 𝐡𝐨𝐥𝐝𝐢𝐧𝐠 𝐡𝐞𝐫 𝐥𝐞𝐟𝐭 𝐡𝐚𝐧𝐝 𝐢𝐧 𝐚 𝐯𝐚𝐚𝐦𝐚 𝐦𝐮𝐝𝐫𝐚, 𝐫𝐞𝐬𝐞𝐦𝐛𝐥𝐢𝐧𝐠 𝐭𝐡𝐚𝐭 𝐨𝐟 𝐒𝐡𝐚𝐤𝐭𝐡𝐢 𝐟𝐨𝐫𝐦. 𝐒𝐡𝐞 𝐜𝐚𝐧 𝐛𝐞 𝐬𝐞𝐞𝐧 𝐰𝐞𝐚𝐫𝐢𝐧𝐠 𝐚 𝐛𝐞𝐚𝐮𝐭𝐢𝐟𝐮𝐥 𝐒𝐤𝐲 𝐛𝐥𝐮𝐞 𝐜𝐨𝐥𝐨𝐮𝐫𝐞𝐝 𝐬𝐚𝐫𝐞𝐞 𝐚𝐥𝐨𝐧𝐠 𝐰𝐢𝐭𝐡 𝐭𝐡𝐞 𝐣𝐞𝐰𝐞𝐥𝐬 𝐚𝐩𝐚𝐫𝐭 𝐭𝐨 𝐢𝐭.🌼
𝘈𝘳𝘥𝘩𝘢𝘯𝘢𝘳𝘪𝘴𝘩𝘸𝘢𝘳𝘢 𝘳𝘦𝘱𝘳𝘦𝘴𝘦𝘯𝘵𝘴 𝘵𝘩𝘦 𝘴𝘺𝘯𝘵𝘩𝘦𝘴𝘪𝘴 𝘰𝘧 𝘮𝘢𝘴𝘤𝘶𝘭𝘪𝘯𝘦 𝘢𝘯𝘥 𝘧𝘦𝘮𝘪𝘯𝘪𝘯𝘦 𝘦𝘯𝘦𝘳𝘨𝘪𝘦𝘴 𝘰𝘧 𝘵𝘩𝘦 𝘶𝘯𝘪𝘷𝘦𝘳𝘴𝘦 (𝘗𝘶𝘳𝘶𝘴𝘩𝘢 𝘢𝘯𝘥 𝘗𝘳𝘢𝘬𝘳𝘪𝘵𝘪) 𝘢𝘯𝘥 𝘪𝘭𝘭𝘶𝘴𝘵𝘳𝘢𝘵𝘦𝘴 𝘩𝘰𝘸 𝘚𝘩𝘢𝘬𝘵𝘪, 𝘵𝘩𝘦 𝘧𝘦𝘮𝘢𝘭𝘦 𝘱𝘳𝘪𝘯𝘤𝘪𝘱𝘭𝘦 𝘰𝘧 𝘎𝘰𝘥, 𝘪𝘴 𝘪𝘯𝘴𝘦𝘱𝘢𝘳𝘢𝘣𝘭𝘦 𝘧𝘳𝘰𝘮 𝘚𝘩𝘪𝘷𝘢, 𝘵𝘩𝘦 𝘮𝘢𝘭𝘦 𝘱𝘳𝘪𝘯𝘤𝘪𝘱𝘭𝘦 𝘰𝘧 𝘎𝘰𝘥, 𝘢𝘯𝘥 𝘷𝘪𝘤𝘦 𝘷𝘦𝘳𝘴𝘢. 𝘛𝘩𝘦 𝘶𝘯𝘪𝘰𝘯 𝘰𝘧 𝘵𝘩𝘦𝘴𝘦 𝘱𝘳𝘪𝘯𝘤𝘪𝘱𝘭𝘦𝘴 𝘪𝘴 𝘦𝘹𝘢𝘭𝘵𝘦𝘥 𝘢𝘴 𝘵𝘩𝘦 𝘳𝘰𝘰𝘵 𝘢𝘯𝘥 𝘸𝘰𝘮𝘣 𝘰𝘧 𝘢𝘭𝘭 𝘤𝘳𝘦𝘢𝘵𝘪𝘰𝘯. 𝘛𝘰 𝘣𝘳𝘪𝘯𝘨 𝘰𝘶𝘵 𝘵𝘩𝘦 𝘴𝘺𝘯𝘵𝘩𝘦𝘴𝘪𝘴 𝘰𝘧 𝘵𝘩𝘪𝘴 𝘮𝘢𝘭𝘦 𝘢𝘯𝘥 𝘧𝘦𝘮𝘢𝘭𝘦 𝘧𝘰𝘳𝘮𝘴 𝘵𝘰 𝘵𝘩𝘦 𝘱𝘦𝘰𝘱𝘭𝘦 𝘪𝘴 𝘵𝘩𝘦 𝘪𝘯𝘵𝘦𝘯𝘵𝘪𝘰𝘯 𝘰𝘧 𝘈𝘳𝘥𝘩𝘯𝘢𝘳𝘪𝘴𝘩𝘸𝘢𝘳𝘢/ 𝘈𝘳𝘥𝘩𝘯𝘢𝘳𝘪𝘴𝘩𝘸𝘢𝘳𝘪 𝘧𝘰𝘳𝘮 𝘰𝘧 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘵𝘰𝘥𝘢𝘺.🤩
𝘖𝘯 𝘵𝘩𝘪𝘴 𝘢𝘶𝘴𝘱𝘪𝘤𝘪𝘰𝘶𝘴 𝘥𝘢𝘺 𝘰𝘧 𝘔𝘢𝘩𝘢𝘴𝘩𝘪𝘷𝘳𝘢𝘵𝘳𝘪, 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘩𝘢𝘴 𝘨𝘪𝘷𝘦𝘯 𝘶𝘴 𝘢𝘯 𝘰𝘱𝘱𝘰𝘳𝘵𝘶𝘯𝘪𝘵𝘺 𝘵𝘰 𝘴𝘦𝘦 𝘩𝘦𝘳 𝘪𝘯 𝘵𝘩𝘦 𝘧𝘰𝘳𝘮 𝘰𝘧 𝘣𝘰𝘵𝘩 𝘚𝘩𝘪𝘷𝘢 𝘢𝘯𝘥 𝘚𝘩𝘢𝘬𝘵𝘩𝘪. 𝘓𝘦𝘵’𝘴 𝘶𝘴 𝘤𝘰𝘯𝘴𝘪𝘥𝘦𝘳 𝘰𝘶𝘳𝘴𝘦𝘭𝘷𝘦𝘴, 𝘵𝘰 𝘣𝘦 𝘣𝘭𝘦𝘴𝘴𝘦𝘥 𝘵𝘰 𝘢𝘣𝘭𝘦 𝘵𝘰 𝘩𝘢𝘷𝘦 𝘢 𝘨𝘭𝘪𝘮𝘱𝘴𝘦 𝘰𝘧 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘪𝘯 𝘵𝘩𝘪𝘴 𝘧𝘰𝘳𝘮. 𝘓𝘦𝘵’𝘴 𝘶𝘴 𝘣𝘰𝘸 𝘰𝘶𝘳 𝘩𝘦𝘢𝘥𝘴 𝘪𝘯 𝘥𝘦𝘷𝘰𝘵𝘪𝘰𝘯 𝘢𝘯𝘥 𝘭𝘰𝘷𝘦 𝘵𝘰𝘸𝘢𝘳𝘥𝘴 𝘵𝘩𝘦 𝘮𝘰𝘵𝘩𝘦𝘳 𝘢𝘯𝘥 𝘧𝘢𝘵𝘩𝘦𝘳 𝘰𝘧 𝘵𝘩𝘪𝘴 𝘸𝘩𝘰𝘭𝘦 𝘶𝘯𝘪𝘷𝘦𝘳𝘴𝘦 𝘢𝘯𝘥 𝘴𝘦𝘦𝘬 𝘵𝘩𝘦𝘪𝘳 𝘣𝘭𝘦𝘴𝘴𝘪𝘯𝘨𝘴 𝘵𝘰 𝘭𝘦𝘢𝘥 𝘢 𝘭𝘪𝘧𝘦 𝘧𝘪𝘭𝘭𝘦𝘥 𝘸𝘪𝘵𝘩 𝘩𝘢𝘱𝘱𝘪𝘯𝘦𝘴𝘴, 𝘱𝘳𝘰𝘴𝘱𝘦𝘳𝘪𝘵𝘺 𝘢𝘯𝘥 𝘨𝘰𝘰𝘥 𝘩𝘦𝘢𝘭𝘵𝘩.
𝘔𝘢𝘺 𝘵𝘩𝘦 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘣𝘦 𝘸𝘪𝘵𝘩 𝘶𝘴 𝘧𝘰𝘳𝘦𝘷𝘦𝘳 𝘢𝘯𝘥 𝘴𝘩𝘰𝘸 𝘶𝘴 𝘵𝘩𝘦 𝘳𝘪𝘨𝘩𝘵𝘧𝘶𝘭 𝘱𝘢𝘵𝘩 𝘪𝘯 𝘢𝘭𝘭 𝘵𝘩𝘢 𝘱𝘢𝘵𝘩𝘴 𝘰𝘧 𝘰𝘶𝘳 𝘭𝘪𝘧𝘦 𝘢𝘯𝘥 𝘮𝘢𝘺 𝘸𝘦 𝘣𝘦 𝘣𝘭𝘦𝘴𝘴𝘦𝘥 𝘵𝘰 𝘤𝘩𝘢𝘯𝘵 𝘩𝘦𝘳 𝘯𝘢𝘮𝘦 𝘥𝘶𝘳𝘪𝘯𝘨 𝘦𝘢𝘤𝘩 𝘣𝘳𝘦𝘢𝘵𝘩𝘦 𝘰𝘧 𝘰𝘶𝘳 𝘭𝘪𝘧𝘦.
𝐏𝐥𝐞𝐚𝐬𝐞 𝐧𝐨𝐭𝐞 : 𝐌𝐚𝐡𝐚 𝐩𝐨𝐨𝐣𝐚 𝐬𝐡𝐚𝐥𝐥 𝐛𝐞 𝐩𝐞𝐫𝐟𝐨𝐫𝐦𝐞𝐝 𝐭𝐨 𝐠𝐨𝐝𝐝𝐞𝐬𝐬 𝐚𝐭 8.30𝐩𝐦 𝐚𝐧𝐝 𝐭𝐡𝐞𝐫𝐞 𝐬𝐡𝐚𝐥𝐥 𝐛𝐞 𝐚 𝐬𝐩𝐞𝐜𝐢𝐚𝐥 𝐩𝐨𝐨𝐣𝐚 𝐚𝐫𝐨𝐮𝐧𝐝 9𝐩𝐦 𝐭𝐨𝐝𝐚𝐲, 𝐨𝐧 𝐭𝐡𝐞 𝐨𝐜𝐜𝐚𝐬𝐢𝐨𝐧 𝐨𝐟 𝐌𝐚𝐡𝐚𝐬𝐡𝐢𝐯𝐫𝐚𝐭𝐫𝐢🙏
𝚂𝚎𝚎𝚔 𝚝𝚑𝚎 𝚋𝚕𝚎𝚜𝚜𝚒𝚗𝚐𝚜 𝚘𝚏 𝚂𝚑𝚒𝚟𝚊-𝚂𝚑𝚊𝚔𝚝𝚒 𝚘𝚗 𝚝𝚑𝚒𝚜 𝚊𝚞𝚜𝚙𝚒𝚌𝚒𝚘𝚞𝚜 𝚝𝚒𝚖𝚎, 𝚝𝚘𝚗𝚒𝚐𝚑𝚝 𝚒𝚜 𝚜𝚒𝚐𝚗𝚒𝚏𝚒𝚌𝚊𝚗𝚝 𝚝𝚘 𝚠𝚘𝚛𝚜𝚑𝚒𝚙 𝚊𝚗𝚍 𝚖𝚎𝚍𝚒𝚝𝚊𝚝𝚎 𝚍𝚞𝚛𝚒𝚗𝚐 𝚝𝚑𝚎 𝚏𝚘𝚞𝚛 𝚢𝚊𝚖𝚊𝚜/𝚙𝚛𝚊𝚑𝚊𝚛𝚜. 𝙼𝚊𝚢 𝚝𝚑𝚎 𝚋𝚕𝚎𝚜𝚜𝚒𝚗𝚐𝚜 𝚘𝚏 𝙻𝚘𝚛𝚍 𝙼𝚊𝚗𝚓𝚞𝚗𝚊𝚝𝚑 𝚊𝚗𝚍 𝚝𝚑𝚎 𝙶𝚘𝚍𝚍𝚎𝚜𝚜 𝚋𝚎 𝚠𝚒𝚝𝚑 𝚢𝚘𝚞. 𝙷𝚊𝚟𝚎 𝚊 𝚋𝚕𝚎𝚜𝚜𝚎𝚍 𝚊𝚗𝚍 𝚎𝚡𝚞𝚋𝚎𝚛𝚊𝚗𝚝 𝙼𝚊𝚑𝚊𝚜𝚑𝚒𝚟𝚊𝚛𝚊𝚝𝚛𝚒. 𝙻𝚘𝚛𝚍 𝚐𝚛𝚊𝚗𝚝 𝚊𝚕𝚕 𝚢𝚘𝚞𝚛 𝚠𝚒𝚜𝚑𝚎𝚜 𝚊𝚗𝚍 𝚋𝚕𝚎𝚜𝚜 𝚢𝚘𝚞, 𝚠𝚒𝚝𝚑 𝚎𝚟𝚎𝚛𝚕𝚊𝚜𝚝𝚒𝚗𝚐 𝚑𝚊𝚙𝚙𝚒𝚗𝚎𝚜𝚜.
ಮಹಾ ಶಿವರಾತ್ರಿಯ ಪುಣ್ಯಪ್ರದವಾದ ಇಂದಿನ ಮಂಗಳವಾರ ಪಾರ್ವತೀ ಪರಮೇಶ್ವರರ ಪ್ರತ್ಯಕ್ಷ ದರ್ಶನವಾದ ಅರ್ಧನಾರೀಶ್ವರ ಅಲಂಕಾರದಲ್ಲಿ ಸರ್ವಾಲಂಕೃತಳಾದ ಶ್ರೀ ಮಂಗಳಾದೇವಿ ಅಮ್ಮನವರು 😍🔱📿
ಮಂಗಳಾದೇವಿಯಲ್ಲಿ ಇಂದು ಸಂಭ್ರಮದ ಶಿವರಾತ್ರಿ. ಮಹಾದೇವಿಗೆ ವೈಶಿಷ್ಟ್ಯಪೂರ್ಣ ಅರ್ಧನಾರೀಶ್ವರ ಅಲಂಕಾರ. ಮಾಘಮಾಸದ ಕೃಷ್ಣ ಪಕ್ಷದ ಚತುರ್ಥಿಯು ಶಿವರಾತ್ರಿಯ ಪ್ರಸನ್ನ ಕಾಲವಾಗಿರುವುದರಿಂದ ಈ ಸಮಯದಲ್ಲಿ ಶ್ರೀ ಮಂಗಳಾದೇವಿ ಅಮ್ಮನಿಗೆ ಅರ್ಧ ನಾರೀಶ್ವರ ಅಲಂಕಾರವನ್ನು ನಡೆಸುವ ಸಂಪ್ರದಾಯ ಪೂರ್ವ ಪ್ರಾಚೀನ ಕಾಲದಿಂದಲೂ ಶ್ರೀ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದೆ. ವರ್ಷದಲ್ಲಿ ಒಂದು ದಿನದಂದು ಮಾತ್ರ ಶ್ರೀ ದೇವಿಗೆ ಶಿವ ಸ್ವರೂಪಿ ಅರ್ಧನಾರೀಶ್ವರನ ಅಲಂಕಾರವನ್ನು ನಡೆಸಿ ಶಿವರಾತ್ರಿಯನ್ನು ವಿಜೃಂಭಣೆಯಿಂದ ಶ್ರೀ ಕ್ಷೇತ್ರದಲ್ಲಿ ಇಂದು ಆಚರಿಸಲಾಗುತ್ತದೆ. 🌷
ಜಯ ಶಂಕರ ವಾಮಾಂಗಿ ಮಂಗಳೇ ಸರ್ವ ಮಂಗಳೇ❤️ ಎಂದು ತಾಯಿಯನ್ನು ನಾವೆಲ್ಲರೂ ಪ್ರತಿ ನಿತ್ಯ ಅನುಕ್ಷಣ ಸ್ತುತಿಸಲ್ಪಪಡುವಂತೆ ಸಂಪೂರ್ಣವಾಗಿ ಪರಮೇಶ್ವರನ ವಾಮ ಭಾಗದಲ್ಲಿ ನೆಲೆಸಿರುವ ಮಂಜುನಾಥನ ಮಹಾರಾಣಿ ಸಾಕ್ಷಾತ್ ಅರ್ಧನಾರೀಶ್ವರ ಅಲಂಕಾರದಲ್ಲಿ ತ್ರಿಶೂಲವನ್ನು ಧರಿಸಿ ವೈಭವೋಪೂರ್ಣವಾಗಿ ಮೆರೆಯಲ್ಪಡುವ ಅಪೂರ್ವ ಸುಸಂದರ್ಭವಿದು 🥰👏
🌹ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ । ಜಗತಃ ಪಿತರೌ ‘ವಂದೇ ಪಾರ್ವತೀಪರಮೇಶ್ವರೌ’ ॥🌹
ಬ್ರಹ್ಮಾಂಡಕ್ಕೆ ಮಾತ ಪಿತೃ ದೇವತಾ ಸ್ವರೂಪರೂ ಸೃಷ್ಟಿ-ಸ್ಥಿತಿ ಲಯಗಳಿಗೆ ಕಾರಣೀಭೂತರೂ ವೇದಗಳಿಗೆ ನಿಲುಕದವರೂ ಪಾರ್ವತೀ -ಪರಮೇಶ್ವರರ ಅರ್ಧನಾರೀಶ್ವರ ಅಲಂಕಾರದಲ್ಲಿ ಪ್ರಸನ್ನಳಾದ ಮಂಗಳಾದೇವಿಯು ಪಾರ್ಶ್ವ ಭಾಗದಿಂದ ಶಿವಾಲಂಕೃತ ಉಮಾ ಮಹೇಶ್ವರನು ‘ಜಟಾಧರನಾಗಿ ಶಿರೋಭೂಷಣವಾಗಿ ನೀಳ ಕೇಶರಾಶಿಯಲ್ಲಿ ಚಂದ್ರನನ್ನು ಧರಿಸಿ, ಆಕಾಶ ನೀಲಿ ವರ್ಣದ ಸೀರೆಯನ್ನು ಧರಿಸಿ ರುದ್ರಾಕ್ಷಿ ಸಹಿತ ಢಮರು-ತ್ರಿಶೂಲವನ್ನು ಧರಿಸಿರಲು,…ವಾಮ ಭಾಗದಲ್ಲಿ ಕಪರ್ದಿನಿ’ಯಾಗಿ ವರದ ಹಸ್ತಳಾದ ಗುಲಾಬಿ ವರ್ಣದ ಸೀರೆಯನ್ನು ತೊಟ್ಟ ದೇವಿಯು ಚಕ್ರವನ್ನು ಪಿಡಿದು ಮಂದಸ್ಮಿತಳಾಗಿ ಅರ್ಧನಾರೀಶ್ವರ ಅಲಂಕಾರದಲ್ಲಿ ಸಂಭ್ರಮದಿಂದ ವೈಭವಿತಳಾಗಿದ್ದಾಳೆ.😍
ಸೃಷ್ಟಿ ಕರ್ತ ಹಾಗು ಸೃಷ್ಟಿ ಎರಡೂ ಒಂದೇ ಎಂಬುವುದು ಅರ್ಧನಾರೀಶ್ವರ ತತ್ವ. ಶಿವ ಹಾಗೂ ಶಕ್ತಿ ಒಂದೇ ಶರೀರದಲ್ಲಿ ಒಂದಾಗಿರುವ ಸುಂದರ ಸಮಾಗಮ.
ಉಮಾ ಮಹೇಶ್ವರನ ಪ್ರತ್ಯಕ್ಷ ದರ್ಶನವೆಂಬಂತೆ ಮಹಾದೇವಿಯು ಮಹಾದೇವನ ವಾಮಾಂಗ (ಎಡ)ಭೂಷಿತೆಯಾಗಲು, ಪಾರ್ಶ್ವ(ಬಲ) ಭಾಗದಲ್ಲಿ ಪರಶಿವನು ದೇವಿಯಲ್ಲಿ ಅಂತರ್ಗತನಾಗಿ ಅರ್ಧನಾರೀಶ್ವರನಾದನು. ಈ ಶಿವ-ಶಕ್ತಿಯರ ಅವಿನಾಭಾವದ ಸಂಯೋಗದ ಸಂಕೇತವೆ ಇಂದಿನ ಶಿವರಾತ್ರಿಯಂದು ವಿಶೇಷವಾಗಿ ಶ್ರೀ ದೇವಿಗೆ ನಡೆಸಿರುವ ಅರ್ಧನಾರೀಶ್ವರ/ರಿ ಅಲಂಕಾರದ ಮಹತ್ವ.
ಬನ್ನಿ. ಆ ಮಹಾತಾಯಿ ಇಂದು ಅಲಂಕಾರದ ಮುಖೇನ ಅರ್ಧನಾರೀಶ್ವರಳಾಗಿ ಶ್ರೀ ಮಂಜುನಾಥ ದೇವರ ಸಹಿತ ತನ್ನ ದರ್ಶನ ಭಾಗ್ಯವನ್ನು ನಮ್ಮೆಲ್ಲರಿಗೂ ಅನುಗ್ರಹಿಸಿದ್ದಾಳೆ. ಮಹಾಶಿವರಾತ್ರಿಯ ಇಂದಿನ ಪರ್ವಕಾಲದಂದು ಜಗದಾದಿ ಪರಿಪಾಲಕರ ದರ್ಶನವನ್ನು ಪಡೆದು, ಸರ್ವಮಂಗಳೆಯ ಶಿವ ಸ್ವರೂಪಿ ಅಲಂಕಾರವನ್ನು ಕಣ್ತುಂಬಿಕೊಂಡು ಪರಮಭಾಗ್ಯಶಾಲಿಗಳಾಗೋಣ.😁👏
ಆಶ್ರಯಿಸಿದ ಭಕ್ತರಿಗೆ ಕಲ್ಪವೃಕ್ಷದಂತೆ ಇಷ್ಟಾರ್ಥವನ್ನು ಕರುಣಿಸುವ ತಾಯಿ ಮಂಗಳಾದೇವಿಯೂ ತಂದೆ ಮಂಜುನಾಥನೂ ಶಿವರಾತ್ರಿಯ ಅರ್ಧನಾರೀಶ್ವರ ಅಲಂಕಾರವನ್ನು ಅರ್ಪಿತಮಾಡಿಕೊಂಡು ಮಾತಾ ಪಿತೃ ಸ್ವರೂಪರಾಗಿ ನಮ್ಮೆಲ್ಲರನ್ನು ಪ್ರೀತಿಯಿಂದ ಸಲಹಿ ಆಶಿರ್ವದಿಸತಕ್ಕಂತಹ ಸುದೈವ ಇಂದಿನ ಈ ಮಹಾಶಿವರಾತ್ರಿಯದ್ದಾಗಿ ನಮ್ಮೆಲ್ಲರ ಪ್ರಾರ್ಥನೆ, ಕೇಳಿದ ಫಲ ಅಕ್ಷಯವಾಗಲಿ. ಸಕಲ ಸಿದ್ಧಿಗಳನ್ನು ನಿತ್ಯವೂ ನೆರವೇರಿಸಿ ಕೊಡಲಿ❤️
ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ ।
ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ॥
ಓಂ ಜಯ ರುದ್ರೇ ವಿರೂಪಾಕ್ಷೇ ಜಯಾತೀತೇ ನಿರಂಜನೇ। ಜಯ ಕಲ್ಯಾಣಸುಖದೇ ಜಯ ಮಂಗಲದೇ ಶುಭೇ ॥👏
ಓಂ ಶಂಭವೇ ನಮಃ
ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಸರ್ವೇಶ್ವರಾಯ ಸದಾಶಿವಾಯ ಶಂಕರಾಯ ಮೃತ್ಯುಂಜಯಾಯ ಶ್ರೀ ಮನ್ಮಹಾದೇವಾಯ ನಮಃ||👏
✨ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್✨
✨ ಓಂ ಹರ ನಮಃ ಪಾರ್ವತೀ ಪತಯೇ ಹರ ಹರ ಮಹದೇವ್ ✨
ರಾತ್ರಿ ೮.೩೦’ಗಂಟೆಗೆ ನಿತ್ಯಮಹಾಪೂಜೆ. ೯’ಕ್ಕೆ ಶಿವರಾತ್ರಿಯ ಪ್ರಯುಕ್ತ ವಿಶೇಷ ಮಹಾಪೂಜೆ.