Blissful Darshan
°✻ ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ | ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ✻°
ಶ್ರೀ ಮಂಗಳಾದೇವಿ ಅಮ್ಮನವರಿಗೆ ಇಂದಿನಿಂದ ವರ್ಷಾವಧಿ ಜಾತ್ರಾ ಮಹೋತ್ಸವದ ವೈಭವ. ಉತ್ಸವದ ಮುಹೂರ್ತಕ್ಕೆ ಸುಮುಹೂರ್ತವನ್ನಾಗಿಸಿ ನಮ್ಮೆಲ್ಲರನ್ನುಆಶಿರ್ವದಿಸುವ ಅಮೃತ ಘಳಿಗೆಯು ಪ್ರಾಪ್ತಗೊಂಡಿದ್ದು ಇನ್ನೇನು ಧ್ವಜಾರೋಹಣ ವಾಗುವುದರೊಂದಿಗೆ ಶ್ರೀ ದೇವಿಯ ಉತ್ಸವಾದಿ ಮಹೋತ್ಸವಗಳು ಶುಭಾರಂಭಗೊಳ್ಳಲಿದೆ.🥀
ಭಕ್ತ ವತ್ಸಲೆಯಾದ ಮಂಗಳಾದೇವಿಯು ಸಿಂಹವಾಹಿನಿಯಾಗಿ ಮೆರೆಯಲ್ಪಡುತ್ತಿರುವ ಅಮೋಘ ಅಲಂಕಾರದಲ್ಲಿ ಕಣ್ಣುಕೋರೈಸುವ ಕಾಂತಿಯಿಂದ ಸುಶೋಭಿತಳಾಗಿರುವ ಲೋಕಮಾತೆಯು ಲಾವಣ್ಯಸ್ನಿಗ್ಧ ಕೋಮಲವಾದ ನೀಳ ಕೇಶರಾಶಿ, ಚತುರ್ಬಾಹುಗಳನ್ನು ಚಾಚಿ ವಿರಾಜಮಾನಳಾದ ಕೋಟಿ ಸೂರ್ಯರ ಪ್ರಭೆಯಂತೆ ಮಹಾರಾಣಿಯ ಪ್ರಜ್ವಲಿಸ್ಪಡುತ್ತಿದ್ದಾಳೆ.🌹
ಇಂದಿನ ಪಾಲ್ಗುಣ ಶುದ್ಧ ತದಿಗೆಯ ಜಾತ್ರ ಉತ್ಸವದ ಮೊದಲ ದಿನ ಸರ್ವಾಲಂಕೃತಳಾದ ಮಂಗಳಾಂಭೆಯು ವೈಭವೋಪೇತ ಅಲಂಕಾರದಲ್ಲಿ ದಿವ್ಯ ಪುಷ್ಪ ಹಾರ ಮಾಲೆಗಳೊಂದಿಗೆ ಆಕಾಶ ಶುಭ್ರ ನೀಳವರ್ಣದ ಸೀರೆಯನ್ನು ಧರಿಸಿ ಸರ್ವಾಭರಣ ಭೂಷಿತಳಾಗಿ ಅಭಯ-ವರದ ಹಸ್ತಳಾದ ದೇವಿಯು ತನ್ನ ಪಾರ್ಶ್ವ ಹಸ್ತದಲ್ಲಿ ಖಡ್ಗವನ್ನು ಹಾಗು ವಾಮ ಹಸ್ತದಲ್ಲಿ ಧನಸ್ಸು-ಬಾಣವನ್ನು ಧರಿಸಿ ತ್ರಿಶೂಲ ಧಾರಿಣಿಯಾಗಿ ರಾಜ ಗಾಂಭೀರ್ಯದಿಂದ ಸಿಂಹವಾಹಿನಿಯಾಗಿ ವಿಜೃಂಭಿಸುತ್ತಿರುವಳು.
ಕಾಲಾವಧಿ ಉತ್ಸವದ ಈ ಉತ್ತಮ’ಕಲ್ಪದಲ್ಲಿ ಅಕ್ಷಯ ಫಲವನ್ನು ಕರುಣಿಸುವ ಜಗನ್ಮಾತೆಯು ಸದಾ ಬೆಂಗಾವಲಿಗೆ ರಕ್ಷಣೆಯಾಗಿ ನಿಂತು ನಮ್ಮ ಮನೋಭೀಷ್ಟಗಳೆಲ್ಲಾ ನೆರವೇರಿಸಲಿ ಎಂದು ಅಮ್ಮನಲ್ಲಿ ಪ್ರಾರ್ಥಿಸುತ್ತಾ ಶ್ರೀ ಕ್ಷೇತ್ರದ ವತಿಯಿಂದ ಸರ್ವರಿಗೂ ಜಾತ್ರೆಯ ಶುಭ ಹಾರೈಕೆಗಳು👏
ಜೀವನದಲ್ಲಿ ಸದಾ ಯಶಸ್ಸನ್ನು ಕರುಣಿಸಿ ಲೋಕಕ್ಕೇ ಸನ್ಮಂಗಳವನ್ನು ಅನುಗ್ರಹಿಸೆಂದು ಲೋಕ ಸುಭೀಕ್ಷೆಗಾಗಿ ಮಹಾತಾಯಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ.
💐✨ಶ್ರೀ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತಮಗೆಲ್ಲರಿಗೂ ಪ್ರೀತಿಪೂರ್ವಕ ಹಾರ್ದಿಕ ಸುಸ್ವಾಗತ ✨💐
𝐼𝑡 𝑖𝑠 𝑡𝒉𝑎𝑡 𝐴𝑢𝑠𝑝𝑖𝑐𝑖𝑜𝑢𝑠 𝑡𝑖𝑚𝑒 𝑜𝑓 𝑡𝒉𝑒 𝑦𝑒𝑎𝑟 𝑤𝒉𝑒𝑟𝑒 𝑖𝑛 𝑤𝑒 𝑠𝒉𝑎𝑙𝑙 𝑏𝑒 𝑐𝑒𝑙𝑒𝑏𝑟𝑎𝑡𝑖𝑛𝑔 𝑡𝒉𝑒 𝐽𝑎𝑡𝒉𝑟𝑎 𝑀𝑎𝒉𝑜𝑡𝑠𝑎𝑣 𝑜𝑓 𝑜𝑢𝑟 𝑏𝑒𝑙𝑜𝑣𝑒𝑑 𝐺𝑜𝑑𝑑𝑒𝑠𝑠 𝑆𝑟𝑖 𝑀𝑎𝑛𝑔𝑎𝑙𝑎𝑑𝑒𝑣𝑖 𝐴𝑚𝑚𝑎. 𝑇𝒉𝑒 𝐽𝑎𝑡𝒉𝑟𝑎 𝑀𝑎𝒉𝑜𝑡𝑠𝑎𝑣 𝑖𝑠 𝑎𝑙𝑙 𝑠𝑒𝑡 𝑡𝑜 𝑏𝑒𝑔𝑖𝑛 𝑤𝑖𝑡𝒉 𝑡𝒉𝑒 𝒉𝑜𝑖𝑠𝑡𝑖𝑛𝑔 𝑜𝑓 𝑡𝒉𝑒 𝑡𝑒𝑚𝑝𝑙𝑒 𝐹𝑙𝑎𝑔 𝑖𝑛 𝑖𝑡𝑠 𝑓𝑙𝑎𝑔 𝑝𝑜𝑙𝑒.
𝘖𝘯 𝘵𝘩𝘦 𝘍𝘪𝘳𝘴𝘵 𝘥𝘢𝘺 𝘰𝘧 𝘵𝘩𝘦 𝘑𝘢𝘵𝘩𝘳𝘢 𝘔𝘢𝘩𝘰𝘵𝘴𝘢𝘷, 𝘎𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘪𝘴 𝘢𝘭𝘭 𝘴𝘦𝘵 𝘵𝘰 𝘨𝘪𝘷𝘦 𝘰𝘶𝘵 𝘩𝘦𝘳 𝘥𝘪𝘷𝘪𝘯𝘦 𝘣𝘦𝘢𝘶𝘵𝘺 𝘭𝘰𝘰𝘬 𝘵𝘰 𝘩𝘦𝘳 𝘥𝘦𝘷𝘰𝘵𝘦𝘦𝘴. 𝘞𝘦𝘢𝘳𝘪𝘯𝘨 𝘢 𝘴𝘬𝘺-𝘣𝘭𝘶𝘦 𝘤𝘰𝘭𝘰𝘶𝘳𝘦𝘥 𝘴𝘢𝘳𝘦𝘦 𝘢𝘯𝘥 𝘩𝘰𝘭𝘥𝘪𝘯𝘨 𝘩𝘦𝘳 𝘩𝘢𝘯𝘥𝘴 𝘪𝘯 𝘈𝘣𝘩𝘢𝘺𝘢 𝘢𝘯𝘥 𝘝𝘢𝘳𝘢𝘥𝘢 𝘮𝘶𝘥𝘳𝘢, 𝘨𝘰𝘥𝘥𝘦𝘴𝘴 𝘔𝘢𝘯𝘨𝘢𝘭𝘢𝘥𝘦𝘷𝘪 𝘤𝘢𝘯 𝘣𝘦 𝘴𝘦𝘦𝘯 𝘩𝘰𝘭𝘥𝘪𝘯𝘨 𝘢 𝘢𝘤𝘦 𝘪𝘯 𝘩𝘦𝘳 𝘳𝘪𝘨𝘩𝘵 𝘢𝘳𝘮 𝘢𝘯𝘥 𝘢 𝘴𝘸𝘰𝘳𝘥 𝘪𝘯 𝘩𝘦𝘳 𝘭𝘦𝘧𝘵 𝘢𝘳𝘮 𝘢𝘭𝘰𝘯𝘨 𝘸𝘪𝘵𝘩 𝘵𝘩𝘦 𝘵𝘳𝘪𝘥𝘦𝘯𝘵. 𝘙𝘪𝘥𝘪𝘯𝘨 𝘪𝘯 𝘢 𝘓𝘪𝘰𝘯, 𝘚𝘩𝘦 𝘤𝘢𝘯 𝘣𝘦𝘦𝘯 𝘴𝘦𝘦𝘯 𝘪𝘯 𝘩𝘦𝘳 𝘳𝘰𝘺𝘢𝘭 𝘢𝘵𝘵𝘪𝘳𝘦 𝘣𝘺 𝘸𝘦𝘢𝘳𝘪𝘯𝘨 𝘱𝘳𝘦𝘤𝘪𝘰𝘶𝘴 𝘨𝘰𝘭𝘥𝘦𝘯 𝘰𝘳𝘯𝘢𝘮𝘦𝘯𝘵𝘴 𝘢𝘱𝘵 𝘵𝘰 𝘩𝘦𝘳 𝘴𝘢𝘳𝘦𝘦. 𝘈𝘣𝘩𝘢𝘺𝘢 𝘢𝘯𝘥 𝘷𝘢𝘳𝘢𝘥𝘢 𝘮𝘶𝘥𝘳𝘢 𝘴𝘺𝘮𝘣𝘰𝘭𝘪𝘴𝘦𝘴 𝘵𝘩𝘢𝘵 𝘩𝘦𝘳 𝘥𝘦𝘷𝘰𝘵𝘦𝘦𝘴 𝘯𝘦𝘦𝘥 𝘯𝘰𝘵 𝘧𝘦𝘢𝘳 𝘰𝘧 𝘢𝘯𝘺𝘵𝘩𝘪𝘯𝘨 𝘸𝘩𝘪𝘭𝘦 𝘴𝘩𝘦 𝘪𝘴 𝘵𝘩𝘦𝘳𝘦 𝘵𝘰 𝘱𝘳𝘰𝘵𝘦𝘤𝘵 𝘵𝘩𝘦𝘮 𝘢𝘯𝘥 𝘪𝘴 𝘳𝘦𝘢𝘥𝘺 𝘵𝘰 𝘧𝘶𝘭𝘧𝘪𝘭𝘭 𝘢𝘭𝘭 𝘵𝘩𝘦 𝘥𝘦𝘴𝘪𝘳𝘦𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴.
𝖮𝗇 𝗍𝗁𝗂𝗌 𝖠𝗎𝗌𝗉𝗂𝖼𝗂𝗈𝗎𝗌 𝖮𝖼𝖼𝖺𝗌𝗂𝗈𝗇 𝗈𝖿 𝗁𝖾𝗋 𝖩𝖺𝗍𝗁𝗋𝖺 𝖬𝖺𝗁𝗈𝗍𝗌𝖺𝗏, 𝗅𝖾𝗍 𝗎𝗌 𝖺𝗅𝗅 𝗉𝗋𝖺𝗒 𝗍𝗈 𝗁𝖾𝗋 𝗐𝗂𝗍𝗁 𝗀𝗋𝖾𝖺𝗍 𝖽𝖾𝗏𝗈𝗍𝗂𝗈𝗇 𝗍𝗈 𝗌𝗅𝖺𝗒 𝖺𝗐𝖺𝗒 𝗍𝗁𝖾 𝖽𝖾𝖺𝖽𝗅𝗒 𝖽𝗂𝗌𝖾𝖺𝗌𝖾 𝗍𝗁𝖺𝗍 𝗁𝖺𝗌 𝗀𝗋𝗂𝗉𝗉𝖾𝖽 𝗍𝗁𝗂𝗌 𝗐𝗈𝗋𝗅𝖽 𝖺𝗇𝖽 𝖻𝗋𝗂𝗇𝗀 𝖻𝖺𝖼𝗄 𝗍𝗁𝖾 𝗅𝗈𝗌𝗍 𝗁𝖺𝗉𝗉𝗂𝗇𝖾𝗌𝗌 𝖺𝗇𝖽 𝖼𝗁𝖾𝖾𝗋 𝖻𝖺𝖼𝗄 𝗂𝗇𝗍𝗈 𝗍𝗁𝖾 𝗅𝗂𝗏𝖾𝗌 𝗈𝖿 𝗍𝗁𝖾 𝗉𝖾𝗈𝗉𝗅𝖾.👏
💐✨𝐀 𝐡𝐞𝐚𝐫𝐭𝐟𝐞𝐥𝐭 𝐰𝐞𝐥𝐜𝐨𝐦𝐞 𝐭𝐨 𝐚𝐥𝐥 𝐟𝐨𝐫 𝐭𝐡𝐞 𝐀𝐧𝐧𝐮𝐚𝐥 𝐂𝐚𝐫 𝐅𝐞𝐬𝐭𝐢𝐯𝐚𝐥 𝐨𝐟 𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢✨💐