Sri Mangaladevi Navarathri Festival 2022 – Day 10

Blissful Darshan

Mangaladevi Daily Darshan 5th October 2022

~^~

🌹ದಶಮಿ ದಿನ°✨✹‹’°ಶ್ರೀ ಮಂಗಳಾದೇವಿ ✨🌹

🌹Tenth Day°✨✹‹’°𝙎𝙧𝙞 𝙈𝙖𝙣𝙜𝙖𝙡𝙖𝙙𝙚𝙫𝙞 ✨🌹

 
ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರದೇ । 
ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ॥
ಓಂ ಜಯ ರುದ್ರೇ ವಿರೂಪಾಕ್ಷೇ ಜಯಾತೀತೇ ನಿರಂಜನೇ। ಜಯ ಕಲ್ಯಾಣಸುಖದೇ ಜಯ ಮಂಗಲದೇ ಶುಭೇ ॥
 
ಪ್ರಥಮವಾಗಿ ಶ್ರೀ ಮಂಗಳಾದೇವಿ ಅಮ್ಮನವರ ಚರಣಾರವಿಂದಗಳಲ್ಲಿ ನಮಸ್ಕರಿಸುತ್ತಾ ತಮಗೆಲ್ಲರಿಗೂ ವಿಜಯದಶಮಿಯ ಪ್ರೀತಿ ಪೂರ್ವಕ ಶುಭಾಶಯಗಳು. ಶರನ್ನವರಾತ್ರಿಯು ಸುಸಂಪನ್ನಗೊಂಡು ವಿಜಯೋತ್ಸವದ ದಿನವಾದ ಇಂದಿನ ಬುಧವಾರದ ವಿಜಯ ದಶಮಿಯ ಮಹಾ ರಥೋತ್ಸವದ ಶುಭ ದಿನದಂದು ಪನ್ನಗ ಕಿರೀಟಿಣಿಯಾಗಿ ರತ್ನ ಖಚಿತ ಕಿರೀಟಾದಿ ಸ್ವರ್ಣಾಭರಣ ಭೂಷಣ ಪೀತಾಂಬರಗಳಿಂದ ಅಲಂಕೃತಳಾಗಿ ಎಳೆಯ ತೆನೆಯ ಕೊರಳನ್ನು ಅಭಯ ಹಸ್ತದಲ್ಲಿ ಧರಿಸಿ *ಅನ್ನಪೂರ್ಣೇಶ್ವರಿ* ಸ್ವರೂಪಳಾಗಿ ಸರ್ವಾಲಂಕೃತಳಾದ ತಾಯಿ ಶ್ರೀ ಮಂಗಳಾದೇವಿ.
 
_*ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ವಿಜಯ ದಶಮಿಯ ವೈಶಿಷ್ಟ್ಯ. ನವರಾತ್ರಿ ಕಳೆದು ಬರುವ ಹಗಲೇ ವಿಜಯದಶಮಿ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನವಾದ ಇಂದಿನ ವಿಜಯದಶಮಿಯ ಬುಧವಾರ ಮಂಗಳಾಪುರದ ಸಾಹುಕಾರ್ತಿ ನಮ್ಮ ಪ್ರೀತಿಯ ಒಡತಿ ಮಂಗಳಮ್ಮನಿಗೆ ಮಹಾ ರಥೋತ್ಸವ. ಇಂದಿನ ದಿನ ಲೋಕಕ್ಕೇ ಸನ್ಮಂಗಳವಾಗಲಿ*_
 
_ತನ್ನ ಕಲ್ಪೋಕ್ತದ ವಿವಿಧ ಅಲಂಕಾರಗಳಲ್ಲಿ ನವರಾತ್ರಿಯ ಒಂಭತ್ತೂ ದಿನಗಳ ಉತ್ಸವಾದಿ ಮಹೋತ್ಸವಗಳನ್ನು, ಪೂಜಾ ಕೈಂಕರ್ಯವನ್ನು, ಭಕ್ತರ ಸೇವಾದಿ ಪುರಸ್ಕಾರಗಳನ್ನು ಸಂತೋಷದಿಂದ ಸ್ವೀಕಾರ ಮಾಡಿಕೊಂಡು ಪ್ರೀತ್ಯರ್ಥಳಾಗಿ ಕೋರಿದ ಕಾಮಿತಾರ್ಥವನ್ನೆಲ್ಲ ಅನುಗ್ರಹಿಸಿ ಇಂದಿನ ದಶಮಿಯಂದು ತನ್ನ ಪ್ರಧಾನ ಅಲಂಕಾರದಲ್ಲಿ ಮಂಗಳಾದೇವಿಯು ಸಡಗರಾತೀತಳಾಗಿ ಮೆರೆಯುತ್ತಿದ್ದಾಳೆ.🌼_
 
_ಮಂಗಳೆ ಅಲಂಕಾರ ಪ್ರಿಯೆ. ಈಕೆಗೆ ದ್ರಾಕ್ಷಿ ನೇರಳೆ ಬಣ್ಣ ಬಹು ಪ್ರಿಯಾತೀತ. ದಿನದಿಂದ ದಿನಕ್ಕೆ ದೇವಿಯ ಅಲಂಕಾರವು ಶೋಭಾಯಮಾನವಾಗಿದ್ದು, ಈ ನವದಿನಗಳ ಅಲಂಕಾರವನ್ನು ಇಂದಿನ ಅಲಂಕಾರವು ಮೀರುವಂತಿದೆ._ _ಚತುರ್ಭುಜಳಾಗಿ ದ್ರಾಕ್ಷಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ  ಪನ್ನಗ’ ಕಿರೀಟಿನಿಯಾಗಿ ಸರ್ವಾಭರಣ ಭೂಷಿತಳಾದ ಪರಶಿವೆಯು ತನ್ನ ಮೇಲ್ಕರಗಳಲ್ಲಿ ಚಕ್ರ- ರಜತ ಕಮಲ ಪುಷ್ಪವನ್ನು ಧರಿಸಿ ಅಭಯವರದ ಹಸ್ತಳಾಗಿ ತ್ರಿಶೂಲವನ್ನು ಧಾರಿಣೆಮಾಡಿಕೊಂಡು ಸರ್ವಮಂಗಳೆಯು ಸಿಂಹಾಸನಸ್ಥಿತೆಯಾಗಿ ರಾಜವೈಭವದಿಂದ ವಿಜೃಂಭಿಸುತ್ತಿರುವಳು. 🌼_
 
_ದಿವ್ಯ ಮಂಗಳ ಸ್ವರೂಪಳಾಗಿ ಸಕಲ ಸ್ವರ್ಣ ವಸ್ತ್ರಾಭರಣ ಭೂಷಿತೆಯಾಗಿ ಮಹಾರಾಣಿಯ ತೆರದೆ ಅಲಂಕೃತಳಾದ ಜಗನ್ಮಾತೆಯು ನಮ್ಮ ಭವಿಷ್ಯದ ದಾರಿದೀಪವಾಗಿ ಕಲ್ಪವೃಕ್ಷದಂತೆ ಭಕ್ತಾಭೀಷ್ಟಪ್ರದೆಯಾಗಿ ದೇವಿಯು ಅನುಗ್ರಹಿಸಲು ತಾಯಿಯ ಕಟಾಕ್ಷ ಮಾತ್ರದಿಂದಲೇ ಸರ್ವ ಸಂಪತ್ತುಗಳು ಲಭಿಸುವುದು. ವಿಜಯ ದಶಮಿಯಂದು ವರ್ಷಪೂರ್ತಿ ಸಮೃದ್ಧಿಗಾಗಿ ಮಹಾತಾಯಿಯನ್ನು ಪ್ರಾರ್ಥಿಸೋಣ._
 
_ಮಹಾದೇವಿಯು ಸಕಲ ಭಯ, ದುರಿತಗಳಿಂದ ನಮ್ಮೆಲ್ಲರ ಪಾರು ಮಾಡಲಿ. ದೇವಿಯನ್ನು ಸ್ಮರಿಸಿ ನಮಿಸುವ ಸರ್ವರಿಗೂ ಶುಭವಾಗಿ ತಮ್ಮೆಲ್ಲರ ಮನದಲ್ಲೂ ಸುಖ ಶಾಂತಿ ನೆಮ್ಮದಿ ಸಂತೋಷ ಸಮೃದ್ಧವಾಗಿ ನೆಲೆಗೊಳ್ಳಲಿ. ಅರಿತೊ ಅರಿಯದೊ ನಡೆದ ನಮ್ಮ ಸಮಸ್ತ ಅಪರಾಧ ಪ್ರಮಾದಗಳನ್ನು ಮನ್ನಿಸಿ ಪ್ರಸನ್ನಳಾಗಿ ಸರ್ವದಾ ಸನ್ಮಂಗಳವನ್ನು ದಯಪಾಲಿಸೆಂದು ವಿಜಯದಶಮಿಯ ಈ ಪುಣ್ಯಕಾಲದಲ್ಲಿ ಒಡತಿ ಶ್ರೀ ಮಂಗಳಾದೇವಿಯಲ್ಲಿ ಸಂಪ್ರಾರ್ಥಿಸೋಣ._
 
ಇಂದು ಶ್ರೀ ಮಂಗಳಾದೇವಿ ಅಮ್ಮನವರ ಮಂಗಳೂರು ದಸರೆಯ ಮಹಾ ರಥೋತ್ಸವ.
ಮಂಜುನಾಥನ ಪಟ್ಟದರಸಿಯು ಮಂಗಳಾಪುರದ ಮಹಾರಾಣಿಯಾಗಿ ಮೆರೆದು ತನ್ನ ರಥ ಸವಾರಿಗೆ ಸನ್ನದಳಾಗುವ ವಿಜಯದಶಮಿಯ ಈ ಪುಣ್ಯದಿನದಂದು ಪ್ರಾಯಶಃ *ನಮ್ಮ ದಕ್ಷಿಣಕನ್ನಡ ಜಿಲ್ಲೆಯಲ್ಲೇ ನವರಾತ್ರಿಯ ವಿಜಯ ದಶಮಿಯಂದು ಮಂಗಳಾದೇವಿಯನ್ನು ಬಿಟ್ಟು ಬೇರೆಲ್ಲೂ* ರಥೋತ್ಸವದ ವೈಭವವು ಕಾಣಸಿಗದು. ಹಾಗು ನಮ್ಮ ಜಿಲ್ಲೆಯಲ್ಲಿಯೇ *ಅತೀ ಗರಿಷ್ಠವಾಗಿ ರಥವು ಕ್ರಮಿಸುವ  ರಥ ಬೀದಿ* ಎಂಬ ಕೀರ್ತಿ ಖ್ಯಾತಿಯಿದೆ.
 
_ಇಂದು ಸಾಯಂಕಾಲ ಮಹಾತಾಯಿಯ ರಥೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾಗೋಣ. ಇನ್ನೇನು ರಥಾರೋಹಣವಾಗಿ ರಥ ಸವಾರಿಯ ಉತ್ಸವದಲ್ಲಿ ರಥಾರೂಢಳಾಗಿ ಬಹು ವಿಜೃಂಭಣೆಯಿಂದ ರಾಜ ರಥ ಬೀದಿಯಲ್ಲಿ ಮಹಾರಾಣಿಯಂತೆ ಮೆರೆದು ಬರುವ ಸರ್ವ ಮಂಗಳೆಯು ಇಂದಿನ ತೇರಿನ ದಿನದಂದು ಸಂತುಷ್ಟಳಾಗಿ ಸರ್ವರಿಗೂ ಸುಖ ಸೌಖ್ಯ ಶಾಂತಿ ಆಯುರಾರೋಗ್ಯವನ್ನು ಕಲ್ಪಿಸಿಕೊಟ್ಟು ಲೋಕದೆಲ್ಲೆಡೆ ಆನಂದವನ್ನು ಕರುಣಿಸಲಿ. ಸಕಲ ದೇವತೆಗಳಿಂದಲೂ ಪೂಜಿಸಲ್ಪಡುವ ತಾಯಿಯು ನಮ್ಮ ಜ್ಞಾನವನ್ನು ಸರಿಯಾದ ದಿಕ್ಕಿಗೆ ಪ್ರವಹಿಸುವಂತೆ ಮಾಡಿ ನಮ್ಮೆಲ್ಲರನ್ನು ಬೆಳಕಿನತ್ತ ಕೈಹಿಡಿದು ನಡೆಸಲಿ. ದುಷ್ಟಶಕ್ತಿಗಳನ್ನು ನಿಗ್ರಹಿಸಿ, ಎಲ್ಲೆಡೆ ಸುಖ ಶಾಂತಿ ಸಂತೃಪ್ತಿ ಸದ್ಗುಣಗಳು ನೆಲೆಸುವಂತೆ ಕೃಪೆತೋರಿ ಸನ್ಮಂಗಳವ ಕರುಣಿಸಲಿ._
 
*ಮಂಗಳಾದೇವಿ* ಶಬ್ದವನ್ನು ಕೇಳಿದೊಡೆ, ನುಡಿದೊಡೆ ಅದೇನೋ ಆನಂದ. ಸ್ಮೃತಿಗೂ ನಿಲುಕದ ತಾಯಿಯ ನಾಮವೇ ಭೂಷಣವೆಂಬಂತೆ ಸದಾ ಮಂಗಳವನ್ನು ನೀಡುವವಳಾದ ಶುಭ ಪ್ರದೆಯಾಗಿ, ತನ್ನ ನಂಬಿದವರ ಅನವರತ  ಸಲಹಿ ರಕ್ಷಿಸುವ ಲೋಕಮಾತೆ  ಮಹಾದೇವಿಯನ್ನುಎಲ್ಲರೂ ಪ್ರೀತಿಯಿಂದ ಮಂಗಳಮ್ಮ ಎಂದು ಕರೆದು, ಕೊಂಡಾಡುವ ನಲ್ಮೆಯ ನಲ್ಮೊಗದ ಶಿವಶಕ್ತಿ ನಮ್ಮೆಲ್ಲರ ಪ್ರೀತಿಯ ಮಂಗಳಾಂಬಿಕೆ.
ತಾಯಿಗೆ ತಾಯಿಯೇ ಸರಿಸಾಠಿ.
 
_ಇಂದು ರಾತ್ರಿ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯರಾಗೋಣ.ಇಂದಿನ ತೇರಿನ ದಿನದಂದು ಶ್ರೀ ದೇವಿಯು ಸಂತುಷ್ಟಳಾಗಿ ಸರ್ವರಿಗೂ ಸುಖ ಸೌಖ್ಯ ಶಾಂತಿ ಆರೋಗ್ಯವನ್ನ ಕಲ್ಪಿಸಿಕೊಟ್ಟು ,ಎಲ್ಲೆಡೆ ಆನಂದವನ್ನು ಕರುಣಿಸಲಿ. ನಮ್ಮೆಲ್ಲರ ಜೀವನವು ಪ್ರತಿದಿನ ನವರಾತ್ರಿಯಾಗಲಿ. ಪ್ರತಿ ಕ್ಷಣ ತನ್ಮನ ಸಂಭ್ರಮಿಸಲಿ._
 
_ಅವಳ ಕೃಪೆಯಿಂದ ದಾರಿದ್ರ್ಯ ದೂರಾಗಿ, ರೋಗ ಕ್ಷಾಮ ಡಾಮರಗಳು ಕ್ಷಯವಾಗಿ, ಧನ ಧಾನ್ಯ ಅಕ್ಷಯ ಸನಿಹವಾಗಿ, ಧೀರ್ಘಾಯಸ್ಸು ಆರೋಗ್ಯವೂ, ಪ್ರಾಪ್ತವಾಗಿ ಮಂಗಳಾದೇವಿಯು ಅನವರತ ನಮ್ಮ ಬೆಂಗಾವಲಿಗಿದ್ದು ಸಂರಕ್ಷಿಸಲಿ. ನವರಾತ್ರಿಯು ನಲ್ಜೀವನ ಮುದವ ಕೊಡಲಿ ಎಂದು ಹಾರೈಸುತಾ.. ಮಂಗಳಮ್ಮನ ವರಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತಾ ವಿಜಯ ದಶಮಿಯ ಶುಭಾಶಯಗಳು.👏_
 

~^~

🌹Tenth Day°✨✹‹’°𝙎𝙧𝙞 𝙈𝙖𝙣𝙜𝙖𝙡𝙖𝙙𝙚𝙫𝙞 ✨🌹

🌹ದಶಮಿ ದಿನ°✨✹‹’°ಶ್ರೀ ಮಂಗಳಾದೇವಿ ✨🌹

 
𝐒𝐡𝐚𝐫𝐚𝐧 𝐍𝐚𝐯𝐫𝐚𝐭𝐫𝐢 𝐟𝐞𝐬𝐭𝐢𝐯𝐢𝐭𝐢𝐞𝐬 𝐡𝐚𝐯𝐞 𝐞𝐧𝐝𝐞𝐝 𝐬𝐮𝐜𝐜𝐞𝐬𝐬𝐟𝐮𝐥𝐥𝐲. 𝐎𝐧 𝐭𝐡𝐞 𝐝𝐚𝐲 𝐨𝐟 𝐕𝐢𝐣𝐚𝐲𝐚 𝐝𝐚𝐬𝐡𝐚𝐦𝐢, 𝐭𝐨 𝐜𝐞𝐥𝐞𝐛𝐫𝐚𝐭𝐞 𝐭𝐡𝐞 𝐭𝐫𝐢𝐮𝐦𝐩𝐡 𝐨𝐟 𝐭𝐡𝐞 𝐠𝐨𝐨𝐝 𝐨𝐯𝐞𝐫 𝐭𝐡𝐞 𝐞𝐯𝐢𝐥, 𝐆𝐨𝐝𝐝𝐞𝐬𝐬 𝐌𝐚𝐧𝐠𝐚𝐥𝐚𝐝𝐞𝐯𝐢 𝐢𝐬 𝐚𝐥𝐥 𝐬𝐞𝐭 𝐭𝐨 𝐫𝐢𝐝𝐞 𝐨𝐧 𝐚 𝐜𝐡𝐚𝐫𝐢𝐨𝐭 𝐢𝐧 𝐭𝐡𝐞 𝐬𝐭𝐫𝐞𝐞𝐭𝐬 𝐬𝐮𝐫𝐫𝐨𝐮𝐧𝐝𝐢𝐧𝐠 𝐭𝐡𝐞 𝐭𝐞𝐦𝐩𝐥𝐞. 𝐖𝐞𝐚𝐫𝐢𝐧𝐠 𝐚 𝐜𝐫𝐨𝐰𝐧 𝐦𝐚𝐝𝐞 𝐨𝐟 𝐠𝐨𝐥𝐝 𝐚𝐧𝐝 𝐰𝐞𝐚𝐫𝐢𝐧𝐠 𝐥𝐨𝐭𝐬 𝐨𝐟 𝐠𝐨𝐥𝐝𝐞𝐧 𝐨𝐫𝐧𝐚𝐦𝐞𝐧𝐭𝐬 𝐰𝐢𝐭𝐡 𝐩𝐢𝐭𝐚𝐦𝐛𝐡𝐚𝐫𝐚 𝐚𝐧𝐝 𝐡𝐨𝐥𝐝𝐢𝐧𝐠 𝐭𝐡𝐞  𝐧𝐞𝐰𝐥𝐲 𝐡𝐚𝐫𝐯𝐞𝐬𝐭𝐞𝐝 𝐩𝐚𝐝𝐝𝐲 𝐜𝐫𝐨𝐩 𝐢𝐧 𝐡𝐞𝐫 𝐫𝐢𝐠𝐡𝐭 𝐡𝐚𝐧𝐝 𝐰𝐡𝐢𝐜𝐡 𝐢𝐬 𝐚𝐛𝐡𝐚𝐲𝐚 𝐦𝐮𝐝𝐫𝐚, 𝐒𝐫𝐢 𝐌𝐚𝐧𝐠𝐚𝐥𝐚𝐝𝐞𝐯𝐢 𝐬𝐞𝐞𝐦𝐬 𝐭𝐨 𝐡𝐚𝐯𝐞 𝐚𝐝𝐨𝐫𝐧𝐞𝐝 𝐭𝐡𝐞 𝐚𝐥𝐭𝐚𝐫 𝐨𝐟 𝐀𝐧𝐧𝐚𝐩𝐨𝐨𝐫𝐧𝐞𝐬𝐡𝐰𝐚𝐫𝐢. 𝐒𝐡𝐞 𝐜𝐚𝐧 𝐛𝐞 𝐬𝐞𝐞𝐧 𝐢𝐧 𝐡𝐞𝐫 𝐞𝐧𝐨𝐫𝐦𝐨𝐮𝐬 𝐛𝐞𝐚𝐮𝐭𝐢𝐟𝐮𝐥 𝐚𝐧𝐝 𝐫𝐨𝐲𝐚𝐥 𝐟𝐨𝐫𝐦 𝐨𝐟 𝐌𝐚𝐧𝐠𝐚𝐥𝐚𝐝𝐞𝐯𝐢.
 
𝘈𝘴 𝘴𝘱𝘦𝘤𝘪𝘧𝘪𝘦𝘥 𝘪𝘯 𝘵𝘩𝘦 𝘬𝘢𝘭𝘱𝘰𝘬𝘵𝘩𝘢 𝘵𝘦𝘹𝘵, 𝘎𝘰𝘥𝘥𝘦𝘴𝘴 𝘩𝘢𝘥 𝘢𝘥𝘰𝘳𝘯𝘦𝘥 𝘷𝘢𝘳𝘪𝘰𝘶𝘴 𝘥𝘪𝘧𝘧𝘦𝘳𝘦𝘯𝘵 𝘧𝘰𝘳𝘮𝘴 𝘥𝘶𝘳𝘪𝘯𝘨 𝘵𝘩𝘦 𝘕𝘪𝘯𝘦 𝘥𝘢𝘺𝘴 𝘰𝘧 𝘕𝘢𝘷𝘳𝘢𝘵𝘳𝘪. 𝘏𝘢𝘷𝘪𝘯𝘨 𝘨𝘳𝘢𝘤𝘦𝘧𝘶𝘭 𝘢𝘤𝘤𝘦𝘱𝘵𝘦𝘥 𝘢𝘭𝘭 𝘵𝘩𝘦 𝘴𝘦𝘳𝘷𝘪𝘤𝘦𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴, 𝘱𝘰𝘰𝘫𝘢 𝘢𝘯𝘥 𝘵𝘢𝘯𝘵𝘳𝘪𝘤 𝘳𝘪𝘵𝘶𝘢𝘭𝘴 𝘩𝘦𝘭𝘥 𝘣𝘺 𝘵𝘩𝘦 𝘱𝘳𝘪𝘦𝘴𝘵𝘴 𝘢𝘯𝘥 𝘧𝘶𝘭𝘧𝘪𝘭𝘭𝘪𝘯𝘨 𝘢𝘭𝘭 𝘵𝘩𝘦 𝘸𝘪𝘴𝘩𝘦𝘴 𝘰𝘧 𝘩𝘦𝘳 𝘥𝘦𝘷𝘰𝘵𝘦𝘦𝘴, 𝘎𝘰𝘥𝘥𝘦𝘴𝘴 𝘤𝘢𝘯 𝘣𝘦 𝘴𝘦𝘦𝘯 𝘪𝘯 𝘩𝘦𝘳 𝘰𝘳𝘪𝘨𝘪𝘯𝘢𝘭 𝘧𝘰𝘳𝘮 𝘰𝘧 𝘔𝘢𝘯𝘨𝘢𝘭𝘢𝘥𝘦𝘷𝘪.
 
𝖬𝖺𝗇𝗀𝖺𝗅𝖺𝖽𝖾𝗏𝗂 𝗅𝗈𝗏𝖾𝗌 𝗍𝗈 𝖽𝖾𝖼𝗈𝗋𝖺𝗍𝖾 𝗁𝖾𝗋𝗌𝖾𝗅𝖿. 𝖨𝗇 𝖺𝗅𝗅 𝗍𝗁𝖾 𝗇𝗂𝗇𝖾 𝖽𝖺𝗒𝗌 𝗈𝖿 𝖭𝖺𝗏𝗋𝖺𝗍𝗋𝗂, 𝗂𝗍 𝗐𝖺𝗌 𝗆𝖾𝗌𝗆𝖾𝗋𝗂𝗓𝗂𝗇𝗀 𝗍𝗈 𝗌𝖾𝖾 𝗍𝗁𝖾 𝗏𝖺𝗋𝗂𝗈𝗎𝗌 𝖽𝗂𝖿𝖿𝖾𝗋𝖾𝗇𝗍 𝖿𝗈𝗋𝗆𝗌 𝖺𝖽𝗈𝗋𝗇𝖾𝖽 𝖻𝗒 𝗍𝗁𝖾 𝗀𝗈𝖽𝖽𝖾𝗌𝗌. 𝖳𝗈𝖽𝖺𝗒’𝗌 𝖿𝗈𝗋𝗆 𝗈𝖿 𝖬𝖺𝗇𝗀𝖺𝗅𝖺𝖽𝖾𝗏𝗂 𝗌𝖾𝖾𝗆𝗌 𝗍𝗈 𝖻𝖾 𝗏𝖾𝗋𝗒 𝖻𝖾𝖺𝗎𝗍𝗂𝖿𝗎𝗅 𝗍𝗁𝖾𝗇 𝖺𝗅𝗅 𝗁𝖾𝗋 𝗈𝗍𝗁𝖾𝗋 𝖿𝗈𝗋𝗆𝗌. 𝖶𝖾𝖺𝗋𝗂𝗇𝗀 𝖺 𝖼𝗋𝗈𝗐𝗇 𝗁𝖺𝗏𝗂𝗇𝗀 𝗍𝗁𝖾 𝗌𝗁𝖺𝗉𝖾 𝗈𝖿 𝖺 𝗌𝗇𝖺𝗄𝖾,  𝗌𝗁𝖾 𝗁𝖺𝗌 𝗐𝗈𝗋𝗇 𝖺 𝗀𝗋𝖺𝗉𝖾 𝗉𝗎𝗋𝗉𝗅𝖾 𝖼𝗈𝗅𝗈𝗎𝗋 𝗌𝖺𝗋𝖾𝖾 𝗐𝗂𝗍𝗁 𝖦𝗈𝗅𝖽𝖾𝗇 𝗈𝗋𝗇𝖺𝗆𝖾𝗇𝗍𝗌 𝖺𝗉𝗍 𝗍𝗈 𝗁𝖾𝗋 𝗌𝖺𝗋𝖾𝖾 𝖼𝗈𝗅𝗈𝗎𝗋. 𝖧𝖺𝗏𝗂𝗇𝗀 𝖼𝗁𝖺𝗄𝗋𝖺 𝖺𝗇𝖽 𝗀𝗈𝗅𝖽𝖾𝗇 𝗅𝗈𝗍𝗎𝗌 𝖿𝗅𝗈𝗐𝖾𝗋 𝗂𝗇 𝗁𝖾𝗋 𝗎𝗉𝗉𝖾𝗋 𝗁𝖺𝗇𝖽𝗌 𝖺𝗇𝖽 𝗁𝗈𝗅𝖽𝗂𝗇𝗀 𝗁𝖾𝗋 𝗅𝗈𝗐𝖾𝗋 𝗁𝖺𝗇𝖽𝗌 𝗂𝗇 𝖺𝖻𝗁𝖺𝗒𝖺 𝖺𝗇𝖽 𝗏𝖺𝗋𝖺𝖽𝖺 𝗆𝗎𝖽𝗋𝖺 𝖺𝗇𝖽 𝖺 𝗍𝗋𝗂𝖽𝖾𝗇𝗍. 𝖬𝖺𝗇𝗀𝖺𝗅𝖺𝗆𝖻𝗂𝗄𝖺 𝖼𝖺𝗇 𝖻𝖾 𝗌𝖾𝖾𝗇 𝗋𝗂𝖽𝗂𝗇𝗀 𝗈𝗇 𝖺 𝗅𝗂𝗈𝗇 𝗅𝗂𝗄𝖾 𝖺 𝗊𝗎𝖾𝖾𝗇 
 
𝙏𝙝𝙚𝙧𝙚 𝙞𝙨𝙣’𝙩 𝙖𝙣𝙮 𝙘𝙤𝙢𝙥𝙖𝙧𝙞𝙨𝙤𝙣 𝙩𝙤 𝙩𝙝𝙚 𝙈𝙖𝙝𝙖𝙧𝙖𝙩𝙤𝙩𝙨𝙖𝙫 𝙤𝙛 𝙂𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞. 𝙄𝙩 𝙝𝙖𝙨 𝙞𝙩𝙨 𝙤𝙬𝙣 𝙥𝙡𝙖𝙘𝙚 𝙞𝙣 𝙩𝙝𝙚 𝘿𝙖𝙠𝙨𝙝𝙞𝙣𝙖 𝙆𝙖𝙣𝙣𝙖𝙙𝙖 𝙙𝙞𝙨𝙩𝙧𝙞𝙘𝙩 𝙖𝙣𝙙 𝙞𝙨 𝙥𝙤𝙥𝙪𝙡𝙖𝙧𝙡𝙮 𝙩𝙚𝙧𝙢𝙚𝙙 𝙖𝙨 𝙩𝙝𝙚 𝙡𝙤𝙣𝙜𝙚𝙨𝙩 𝙙𝙞𝙨𝙩𝙖𝙣𝙘𝙚 𝙘𝙝𝙖𝙧𝙞𝙤𝙩 𝙧𝙞𝙙𝙚 𝙞𝙣 𝙩𝙝𝙚 𝙚𝙣𝙩𝙞𝙧𝙚 𝙙𝙞𝙨𝙩𝙧𝙞𝙘𝙩 𝙤𝙛 𝘿𝙖𝙠𝙨𝙝𝙞𝙣𝙖 𝙆𝙖𝙣𝙣𝙖𝙙𝙖 𝙖𝙡𝙨𝙤 𝙩𝙝𝙞𝙨 𝙞𝙨 𝙩𝙝𝙚 𝙤𝙣𝙡𝙮 𝙩𝙚𝙢𝙥𝙡𝙚 𝙞𝙣 𝘿𝙠 𝙩𝙤 𝙝𝙖𝙫𝙚 𝙍𝙖𝙩𝙝𝙤𝙩𝙨𝙖𝙫 𝙙𝙪𝙧𝙞𝙣𝙜 𝙉𝙖𝙫𝙖𝙧𝙖𝙩𝙝𝙧𝙞.🙏
 
𝙄𝙩 𝙞𝙨 𝙖 𝙜𝙧𝙚𝙖𝙩 𝙝𝙤𝙣𝙤𝙪𝙧 𝙖𝙣𝙙 𝙗𝙡𝙚𝙨𝙨𝙞𝙣𝙜𝙨 𝙤𝙛 𝙜𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞 𝙩𝙤 𝙩𝙖𝙠𝙚 𝙥𝙖𝙧𝙩 𝙞𝙣 𝙝𝙚𝙧 𝙧𝙖𝙩𝙝𝙤𝙩𝙨𝙖𝙫. 𝙂𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞 𝙨𝙝𝙖𝙡𝙡 𝙥𝙡𝙖𝙘𝙚𝙙 𝙞𝙣𝙨𝙞𝙙𝙚 𝙩𝙝𝙚 𝙘𝙝𝙖𝙧𝙞𝙤𝙩 𝙞𝙣 𝙨𝙤𝙢𝙚𝙩𝙞𝙢𝙚 𝙖𝙣𝙙 𝙡𝙖𝙩𝙚𝙧 𝙞𝙣 𝙩𝙝𝙚 𝙚𝙫𝙚𝙣𝙞𝙣𝙜, 𝙨𝙝𝙚 𝙨𝙝𝙖𝙡𝙡 𝙩𝙖𝙠𝙚𝙣 𝙛𝙤𝙧 𝙖 𝙧𝙞𝙙𝙚 𝙞𝙣 𝙩𝙝𝙚 𝙨𝙩𝙧𝙚𝙚𝙩𝙨 𝙤𝙛 𝙩𝙝𝙚 𝙩𝙚𝙢𝙥𝙡𝙚 𝙨𝙪𝙧𝙧𝙤𝙪𝙣𝙙𝙞𝙣𝙜 𝙞𝙣 𝙖 𝙜𝙧𝙖𝙣𝙙 𝙢𝙖𝙣𝙣𝙚𝙧. 𝙏𝙝𝙚 𝙝𝙪𝙜𝙚, 𝙘𝙤𝙡𝙤𝙪𝙧𝙛𝙪𝙡𝙡𝙮 𝙙𝙚𝙘𝙤𝙧𝙖𝙩𝙚𝙙 𝙘𝙝𝙖𝙧𝙞𝙤𝙩𝙨 𝙖𝙧𝙚 𝙙𝙧𝙖𝙬𝙣 𝙗𝙮 𝙢𝙪𝙡𝙩𝙞𝙩𝙪𝙙𝙚 𝙤𝙛 𝙙𝙚𝙫𝙤𝙩𝙚𝙚𝙨 𝙖𝙘𝙧𝙤𝙨𝙨 𝙩𝙝𝙚 𝙨𝙩𝙧𝙚𝙚𝙩𝙨 𝙬𝙞𝙩𝙝 𝙡𝙤𝙫𝙚 𝙖𝙣𝙙 𝙙𝙚𝙫𝙤𝙩𝙞𝙤𝙣. 𝙈𝙖𝙮 𝙩𝙝𝙚 𝙦𝙪𝙚𝙚𝙣 𝙤𝙛 𝙩𝙝𝙚 𝙈𝙖𝙣𝙜𝙖𝙡𝙪𝙧𝙪 𝙘𝙞𝙩𝙮 𝙗𝙚 𝙥𝙡𝙚𝙖𝙨𝙚𝙙 𝙬𝙞𝙩𝙝 𝙩𝙝𝙞𝙨 𝙘𝙝𝙖𝙧𝙞𝙤𝙩 𝙧𝙞𝙙𝙚 𝙖𝙣𝙙 𝙗𝙡𝙚𝙨𝙨 𝙪𝙨 𝙖𝙡𝙡 𝙬𝙞𝙩𝙝 𝙖𝙣 𝙖𝙗𝙪𝙣𝙙𝙖𝙣𝙘𝙚 𝙤𝙛 𝙝𝙚𝙖𝙡𝙩𝙝, 𝙬𝙚𝙖𝙡𝙩𝙝, 𝙝𝙖𝙥𝙥𝙞𝙣𝙚𝙨𝙨, 𝙥𝙚𝙖𝙘𝙚 𝙖𝙣𝙙 𝙥𝙧𝙤𝙨𝙥𝙚𝙧𝙞𝙩𝙮. 𝙂𝙤𝙙𝙙𝙚𝙨𝙨 𝙬𝙝𝙤 𝙞𝙨 𝙗𝙚𝙞𝙣𝙜 𝙥𝙧𝙖𝙞𝙨𝙚𝙙 𝙚𝙫𝙚𝙣 𝙗𝙮 𝙩𝙝𝙚 𝙜𝙤𝙙𝙨 𝙡𝙞𝙠𝙚 𝙞𝙣𝙙𝙧𝙖, 𝙎𝙪𝙧𝙮𝙖, 𝙘𝙝𝙖𝙣𝙙𝙧𝙖 𝙚𝙩𝙘 𝙥𝙖𝙮 𝙝𝙚𝙚𝙙 𝙩𝙤 𝙖𝙡𝙡 𝙤𝙪𝙧 𝙬𝙞𝙡𝙡 𝙖𝙣𝙙 𝙬𝙞𝙨𝙝𝙚𝙨 𝙖𝙣𝙙 𝙜𝙪𝙞𝙙𝙚 𝙪𝙨 𝙩𝙝𝙧𝙤𝙪𝙜𝙝 𝙩𝙝𝙚 𝙥𝙖𝙩𝙝𝙨 𝙤𝙛 𝙤𝙪𝙧 𝙡𝙞𝙫𝙚𝙨 𝙞𝙣 𝙖 𝙥𝙧𝙤𝙥𝙚𝙧 𝙬𝙖𝙮, 𝙨𝙤 𝙩𝙝𝙖𝙩 𝙬𝙚 𝙧𝙚𝙖𝙘𝙝 𝙤𝙪𝙧 𝙙𝙚𝙨𝙞𝙧𝙚𝙙 𝙙𝙚𝙨𝙩𝙞𝙣𝙖𝙩𝙞𝙤𝙣 𝙨𝙖𝙛𝙚𝙡𝙮 𝙖𝙣𝙙 𝙨𝙚𝙩𝙩𝙡𝙚 𝙙𝙤𝙬𝙣 𝙖𝙨 𝙖 𝙙𝙪𝙨𝙩 𝙞𝙣 𝙩𝙝𝙚 𝙝𝙤𝙡𝙮 𝙛𝙚𝙚𝙩 𝙤𝙛 𝙤𝙪𝙧 𝙗𝙚𝙡𝙤𝙫𝙚𝙙 𝙈𝙖𝙣𝙜𝙖𝙡𝙖𝙢𝙢𝙖.
 
𝑶𝒖𝒓 𝒔𝒄𝒓𝒊𝒑𝒕𝒖𝒓𝒆𝒔 𝒍𝒊𝒌𝒆 𝑽𝒆𝒅𝒂𝒔, 𝒔𝒂𝒔𝒕𝒓𝒂𝒔, 𝒑𝒖𝒓𝒂𝒏𝒂𝒔, 𝒊𝒕𝒉𝒊𝒉𝒂𝒔𝒂𝒔 𝒂𝒍𝒘𝒂𝒚𝒔 𝒓𝒆𝒎𝒊𝒏𝒅𝒔 𝒖𝒔 𝒕𝒉𝒂𝒕 𝒕𝒓𝒖𝒕𝒉 𝒔𝒉𝒂𝒍𝒍 𝒕𝒓𝒖𝒊𝒎𝒑𝒉 𝒊𝒏 𝒕𝒉𝒆 𝒆𝒏𝒅.  𝑩𝒉𝒂𝒈𝒂𝒗𝒂𝒕𝒉𝒂 𝒑𝒖𝒓𝒂𝒏𝒂 𝒅𝒆𝒔𝒄𝒓𝒊𝒃𝒆𝒔 𝒕𝒉𝒆 𝒕𝒓𝒖𝒕𝒉 𝒂𝒔 ‘𝑺𝒂𝒕𝒚𝒂𝒎 𝒑𝒂𝒓𝒂𝒎 𝒅𝒉𝒊𝒎𝒂𝒉𝒊’. 𝑳𝒆𝒕 𝒖𝒔 𝒂𝒍𝒍 𝒎𝒆𝒅𝒊𝒕𝒂𝒕𝒆 𝒖𝒑𝒐𝒏 𝒕𝒉𝒆 𝒖𝒍𝒕𝒊𝒎𝒂𝒕𝒆 𝒕𝒓𝒖𝒕𝒉. 𝑻𝒉𝒖𝒔 𝒘𝒆 𝒄𝒂𝒏 𝒔𝒂𝒚 𝒕𝒉𝒂𝒕 𝒕𝒓𝒖𝒕𝒉 𝒊𝒔 𝒂 𝒇𝒐𝒓𝒎 𝒐𝒇 𝑮𝒐𝒅 𝒂𝒏𝒅 𝒃𝒚 𝒃𝒆𝒊𝒏𝒈 𝒊𝒏 𝒕𝒉𝒆 𝒑𝒂𝒕𝒉 𝒐𝒇 𝒕𝒓𝒖𝒕𝒉, 𝒘𝒆 𝒔𝒉𝒂𝒍𝒍 𝒂𝒍𝒘𝒂𝒚𝒔 𝒘𝒂𝒍𝒌 𝒔𝒂𝒇𝒆𝒍𝒚 𝒘𝒊𝒕𝒉𝒐𝒖𝒕 𝒇𝒆𝒂𝒓 𝒕𝒐𝒘𝒂𝒓𝒅𝒔 𝒐𝒖𝒓 𝒖𝒍𝒕𝒊𝒎𝒂𝒕𝒆 𝒅𝒆𝒔𝒕𝒊𝒏𝒂𝒕𝒊𝒐𝒏. 𝑶𝒏 𝒕𝒉𝒊𝒔 𝒂𝒖𝒔𝒑𝒊𝒄𝒊𝒐𝒖𝒔 𝒅𝒂𝒚 𝒐𝒇 𝒕𝒉𝒆 𝒕𝒓𝒊𝒖𝒎𝒑𝒉 𝒐𝒇 𝒕𝒉𝒆 𝒈𝒐𝒐𝒅 𝒐𝒗𝒆𝒓 𝒕𝒉𝒆 𝒆𝒗𝒊𝒍, 𝒐𝒖𝒓 𝒃𝒆𝒍𝒐𝒗𝒆𝒅 𝑴𝒂𝒏𝒈𝒂𝒍𝒂𝒎𝒎𝒂 𝒊𝒔 𝒈𝒐𝒊𝒏𝒈 𝒐𝒏 𝒂 𝒓𝒊𝒅𝒆 𝒊𝒏 𝒉𝒆𝒓 𝒄𝒉𝒂𝒓𝒊𝒐𝒕. 𝑻𝒉𝒊𝒔 𝒊𝒔 𝒕𝒉𝒆 𝒕𝒊𝒎𝒆 𝒕𝒐 𝒓𝒆𝒍𝒊𝒔𝒉 𝒇𝒐𝒓 𝒉𝒆𝒓 𝒅𝒆𝒗𝒐𝒕𝒆𝒆𝒔 𝒂𝒏𝒅 𝒄𝒆𝒍𝒆𝒃𝒓𝒂𝒕𝒆 𝒕𝒉𝒊𝒔 𝒅𝒂𝒚 𝒂𝒔 𝒕𝒉𝒆 𝑹𝒂𝒕𝒉𝒐𝒕𝒔𝒂𝒗 𝒅𝒂𝒚 𝒊𝒏 𝒂 𝒈𝒓𝒂𝒏𝒅 𝒎𝒂𝒏𝒏𝒆𝒓.💯
 
𝙈𝙖𝙮 𝙜𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞, 𝙬𝙝𝙤 𝙧𝙚𝙨𝙞𝙙𝙚𝙨 𝙞𝙣 𝙩𝙝𝙚 𝙝𝙚𝙖𝙧𝙩𝙨 𝙤𝙛 𝙝𝙚𝙧 𝙙𝙚𝙫𝙤𝙩𝙚𝙚𝙨, 𝙖𝙡𝙬𝙖𝙮𝙨 𝙗𝙡𝙚𝙨𝙨 𝙩𝙝𝙚𝙢 𝙬𝙞𝙩𝙝 𝙜𝙤𝙤𝙙 𝙝𝙚𝙖𝙡𝙩𝙝, 𝙡𝙤𝙣𝙜𝙚𝙩𝙞𝙫𝙞𝙩𝙮 , 𝙧𝙚𝙢𝙤𝙫𝙚 𝙖𝙡𝙡 𝙩𝙝𝙚 𝙨𝙞𝙣𝙨 𝙩𝙝𝙖𝙩 𝙝𝙖𝙫𝙚 𝙗𝙚𝙚𝙣 𝙘𝙤𝙢𝙢𝙞𝙩𝙩𝙚𝙙 𝙗𝙮 𝙪𝙨, 𝙘𝙪𝙧𝙚 𝙪𝙨 𝙛𝙧𝙤𝙢 𝙖𝙡𝙡 𝙤𝙪𝙧 𝙥𝙝𝙮𝙨𝙞𝙘𝙖𝙡 𝙖𝙣𝙙 𝙢𝙚𝙣𝙩𝙖𝙡 𝙩𝙧𝙖𝙪𝙢𝙖 𝙖𝙣𝙙 𝙙𝙞𝙨𝙚𝙖𝙨𝙚𝙨, 𝙗𝙚 𝙖 𝙜𝙪𝙞𝙙𝙚 𝙩𝙝𝙧𝙤𝙪𝙜𝙝 𝙩𝙝𝙚 𝙥𝙖𝙩𝙝𝙨 𝙤𝙛 𝙤𝙪𝙧 𝙡𝙞𝙛𝙚 𝙖𝙣𝙙 𝙖𝙘𝙩 𝙖𝙨 𝙤𝙪𝙧 𝙪𝙡𝙩𝙞𝙢𝙖𝙩𝙚 𝙨𝙩𝙧𝙚𝙣𝙜𝙩𝙝, 𝙬𝙝𝙤 𝙨𝙝𝙖𝙡𝙡 𝙨𝙖𝙛𝙚𝙜𝙪𝙖𝙧𝙙 𝙪𝙨 𝙖𝙡𝙬𝙖𝙮𝙨 𝙛𝙧𝙤𝙢 𝙖𝙡𝙡 𝙩𝙝𝙚 𝙩𝙧𝙤𝙪𝙗𝙡𝙚𝙨 𝙖𝙣𝙙 𝙙𝙞𝙛𝙛𝙞𝙘𝙪𝙡𝙩 𝙥𝙚𝙧𝙞𝙤𝙙𝙨 𝙞𝙣 𝙤𝙪𝙧 𝙡𝙞𝙛𝙚. 𝙈𝙖𝙮 𝙝𝙚𝙧 𝙡𝙤𝙫𝙚, 𝙘𝙖𝙧𝙚, 𝙖𝙛𝙛𝙚𝙘𝙩𝙞𝙤𝙣 𝙖𝙣𝙙 𝙗𝙡𝙚𝙨𝙨𝙞𝙣𝙜𝙨 𝙗𝙚 𝙩𝙝𝙚𝙧𝙚 𝙪𝙥𝙤𝙣 𝙩𝙝𝙞𝙨 𝙘𝙞𝙩𝙮 𝙖𝙣𝙙 𝙖𝙡𝙡 𝙝𝙚𝙧 𝙙𝙚𝙫𝙤𝙩𝙚𝙚𝙨 𝙖𝙡𝙬𝙖𝙮𝙨. 𝙒𝙞𝙨𝙝𝙞𝙣𝙜 𝙚𝙖𝙘𝙝 𝙖𝙣𝙙 𝙚𝙫𝙚𝙧𝙮 𝙙𝙚𝙫𝙤𝙩𝙚𝙚𝙨 𝙤𝙛 𝙜𝙤𝙙𝙙𝙚𝙨𝙨 𝙈𝙖𝙣𝙜𝙖𝙡𝙖𝙙𝙚𝙫𝙞 𝙖 𝙫𝙚𝙧𝙮 𝙝𝙖𝙥𝙥𝙮 𝙖𝙣𝙙 𝙥𝙧𝙤𝙨𝙥𝙚𝙧𝙤𝙪𝙨 𝙑𝙞𝙟𝙖𝙮𝙖 𝙙𝙖𝙨𝙝𝙖𝙢𝙞 / 𝘿𝙪𝙨𝙨𝙝𝙚𝙧𝙖.😊🙏
 

🪷🌿✨ಶಮೀಕಟ್ಟೆ ಪೂಜೆ✨🌿🪷

 
ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ|
ದುಃಖಪ್ರಣಾಶಿನೀಂ ಧನ್ಯಾಂ ಪ್ರಪದ್ಯೇಹಂ ಶಮೀಂ ಶುಭಾಂ|
ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ|
ಧರಿತ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ||
 
ಕರಿಷ್ಯಮಾಣಯಾತ್ರಾಯಾಂ ಯಥಾ ಕಾಲಂ ಸುಖಂ ಮಯಾ| ಶತ್ರುನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ||
 
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ|
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ||
 
ಶಮೀ ಕಮಲಪತ್ರಾಕ್ಷೀ ಶಮೀ ಕಂಟಕಹಾರಿಣೀ| ಅವರೋಹಂತು ಮೇ ಪಾಪಂ ಆಯುಃ ಪ್ರಾಣಾಂಸ್ತು ರಕ್ಷತು||