Sri Mangaladevi Navarathri Festival 2022 – Day 6

Blissful Darshan

Mangaladevi Daily Darshan 1st October 2022

~^~

♦️☽«🔱°ಷಷ್ಟಿ ದಿನ`°ಮಹಿಷ ಮರ್ದಿನಿ°🔱»☾♦️

☽✵Sixth day`°𝑴𝒂𝒉𝒊𝒔𝒉𝒂 𝑴𝒂𝒓𝒅𝒉𝒊𝒏𝒊i✵☾

 
ಅರಿಶಂಖಕೃಪಾಣಬಾಣಖೇಟಾನ್ ಸಧನುಃಶೂಲಕತರ್ಜನೀಂ । ದಧಾನಾ ಮಹತೀ ‘ಮಹಿಷೋ’ತ್ತಮಾಂಗಸಂಸ್ಥಾ ನವಪೂರ್ವಾಸದೃಶೀ
ಹೇಮಪ್ರಖ್ಯಾಮಿಂದುಖಂಡಾತ್ಮಮೌಲೀಂ ಶಂಖಾರೀಷ್ಟಾಭೀತಿಹಸ್ತಾಂ ತ್ರಿನೇತ್ರಾಮ್ । ಹೇಮಾಬ್ಜಸ್ಥಾಂ ಪೀತವಸ್ತ್ರಾಂ ಪ್ರಸನ್ನಾಂ ದೇವೀಂ ದುರ್ಗಾಂ ದಿವ್ಯರೂಪಾಂ ನಮಾಮಿ ॥☀️
 
_’ಮಹಿಷ ಮರ್ದಿನಿಯಾಗಿ’ ಷಷ್ಠಮ ನವರಾತ್ರಿಯ ದಿನದಂದು ಜಗನ್ಮಾತೆಯನ್ನು ಆರಾಧಿಸಲಾಗುವುದು. ಶರನ್ನವರಾತ್ರಿಯ ಆರನೇಯ ದಿನವಾದ ಇಂದಿನ ಶನಿವಾರದಂದು, ಪ್ರತಿ ದಿನವೂ ವಿವಿಧ ನವ ಮಾತೃ ಸ್ವರೂಪಗಳಲ್ಲಿ ಪೂಜಿಸಲ್ಪಡುವ ಮಂಗಳಾಂಬಿಕೆಯನ್ನು ಮಹಿಷ ಮರ್ದಿನಿಯಾದ ರೌದ್ರ ಸ್ವರೂಪದಲ್ಲಿ ಕಣ್ತುಂಬಿಕೊಂಡು ನಮಿಸುತ್ತಾ ಹರ್ಷಿಸುವ ಸುದಿನ._
 
_*ಜಯಜಯ ಹೇ ಮಹಿಷಾಸುರ ಮರ್ದಿನಿ*_ ಎಂದು ದೇವಾನುದೇವತೆಗಳಿಂದ ಸ್ತುತಿಸಲ್ಪಟ್ಟ 
ಮಹಾದೇವಿಯು ವಿರೋತ್ಸಾಹದಿಂದ ವಿಜೃಂಭಿಸುತ್ತಾ ಶಿಷ್ಟ ರಕ್ಷಿಣಿಯೂ- ದುಷ್ಟ ಶಿಕ್ಷಿಣಿಯೂ ಆದ ಹರಿ ಬ್ರಹ್ಮರುದ್ರಾದಿ ದೇವತೆಗಳಿಗೆ ಅಗ್ರಮಾನ್ಯೆಯಾದ ಮಹಿಷಾಸುರ ಮರ್ದಿನಿಯಾಗಿ ಶ್ರೀ ದೇವಿಯು ರೌದ್ರ ಸ್ವರೂಪದ ಅಲಂಕಾರದ ಮುಖೇನ ತನ್ನ ಮಹಿಷ ಮರ್ದಿನಿ ದರ್ಶನ ಭಾಗ್ಯವನ್ನು ಅನುಗ್ರಹಿಸಿದ್ದಾಳೆ. ➳
 
_ಕಡುಗೆಂಪು ಶುದ್ಧ ಕುಂಕುಮ ಬಣ್ಣದ ಸೀರೆಯನ್ನು ತೊಟ್ಟು, ಸರ್ವಾಭರಣ ಭೂಷಿತಳಾಗಿ ತನ್ನ ಮೇಲಿನ ಬಲ ಹಸ್ತದಲ್ಲಿ ಚಕ್ರವನ್ನು, ವಾಮ ಕರದಲ್ಲಿ ಖಡ್ಗವನ್ನು ಪಿಡಿದು ಅಭಯಹಸ್ತಳಾದ ದೇವಿ ವಾಮಹಸ್ತದಲ್ಲಿ ತ್ರಿಶೂಲವನ್ನು ಧರಿಸಿ ಸಾಂಕೇತಿಕವಾಗಿ ಅಸುರ ಮಹಿಷಾಸುರನನ್ನು ಸಂಹರಿಸಿದ ಅಲಂಕಾರದಲ್ಲಿ ಲೋಕಕ್ಕೇ ಸದಾ ಮಂಗಳ ಪ್ರದಳಾಗಿರುವ ದೇವಿಯು ಅಲಂಕೃತಳಾಗಿದ್ದಾಳೆ. ಯುದ್ಧದಲ್ಲಿ ಭಾಗವಹಿಸಿರುವ ಸಿಂಹರಾಜನು ಬಲಬದಿಯಲ್ಲಿ ದೇವಿಗೆ ಆಧಾರನಾಗಿದ್ದು, ಕೋಪೋದ್ದೀಪಿತಳಾಗಿ ತ್ರಿಶೂಲದ ತುದಿಯಿಂದ ಅಸುರೇಂದ್ರ ಮಹಿಷನ ಇರಿದು ಸಂಹರಿಸುವ ರಣಾಂಗಣದ ಭವ್ಯ ಅನಾವರಣ ಇಂದಿನ ಅಲಂಕಾರದಲ್ಲಿದೆ._🔥
 
_ಮಹಿಷಮರ್ದಿನಿಯಾಗಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣವನ್ನು ನಡೆಸುತ್ತಾ ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾಧಿಸಿ ಮಹಾತಾಯಿ ಭಕ್ತ ಜನಕ್ಕೆ ಆಶ್ರಯದಾತಳಾಗಿದ್ದಾಳೆ. 👏_
 
_*ಮಾರ್ಕಂಡೇಯ ಪುರಾಣ ಅಂತರ್ಗತವಾದ ಪರಮಪವಿತ್ರ ದುರ್ಗಾಸಪ್ತಶತಿಯಲ್ಲಿನ ಶ್ರೀ ಮಹಾಲಕ್ಷ್ಮಿ ಮಧ್ಯಮ ಚರಿತೆಯಲ್ಲಿ ಬರುವ ತೃತೀಯೋಧ್ಯಾಯದ ಮಹಿಷಾಸುರ ವಧೋ ನಾಮದಲ್ಲಿ ಮಹಿಷ ಮರ್ದಿನಿಯ ವಿರಾಟ ಸ್ವರೂಪ ಅನಾವರಣಗೊಳ್ಳುತ್ತದೆ. ದುರ್ಗಾಸಪ್ತಶತಿಯ ಮಧ್ಯಮ ಚರಿತ್ರೆಯಲ್ಲಿ ಶ್ರೀದೇವಿ ಹಾಗೂ ಮಹಿಷನ ನಡುವೆ ನಡೆದ ಘೋರ ಯುದ್ಧದ ವರ್ಣನೆಯಿದೆ.*_
 
_ಯಕಶ್ಚಿತ್ ಸ್ತ್ರೀಯೊಬ್ಬಳಿಂದಲೇ ತನ್ನ ಅಂತ್ಯವಾಗ ಬೇಕೆಂಬ ಮಹಿಷಾಸುರನ ಮಹದಾಸೆಯನ್ನು ತಾಯಿ ಈಡೇರಿಸಿದ ಕ್ಷಣವದು. ಪ್ರಳಯಾಂತಕ ಸನ್ನಿವೇಶದಲ್ಲಿ “ದೇವಕಾರ್ಯ ಸಮುದ್ಭವ” ಎಂಬಂತೆ ಸುರರ ರಕ್ಷಣೆಗೆ ಖಡ್ಗ ತ್ರಿಶೂಲವನ್ನು ಧರಿಸಿ ಧಾವಿಸಿ ಬಂದವಳು ಮಹಿಷ ಮರ್ದಿನಿ._  
 
_*ಮಹಿಷಾಸುರನೆಂಬ ದಾನವನ ಸಂಹಾರಕ್ಕಾಗಿ ಮೈದಳೆದ ದುರ್ಗಾ ಸ್ವರೂಪವೇ ಮಹಿಷ ಮರ್ದಿನಿ*_. _’ವಿಪ್ರಜತ್ತಿ’ಎಂಬ ದೈತ್ಯನ ಮಗಳಾದ ‘ಮಾಹಿಷ್ಮತಿ’ (ವಿದ್ಯುನ್ಮಾಲಿ) ತಪೋನಿರತನಾಗಿದ್ದ ‘ಅಸ್ವರ’ನೆಂಬ ಮಹಾಮುನಿಯ ತಪೋಭಂಗಗೊಳಿಸಲು ಮಹಿಷ ರೂಪದಲ್ಲಿ ನುಗ್ಗಿದಳು. ತನ್ನ ಜ್ಞಾನದೃಷ್ಟಿಯಿಂದ ಇದನ್ನರಿತ ಅಸ್ವರನು ಮಹಿಷ ರೂಪದ ಸಂತಾನವಾಗಲೆಂದು ಶಪಿಸಿಬಿಟ್ಟ. ಪರಿಣಾಮವಾಗಿ ಮುಂದೆ ಈಕೆ ‘ಸಿಂಧು ದ್ವೀಪ’ನೆಂಬ ಮುನಿಯ ಸಂಯೋಗದಿಂದ ಇಬ್ಬರೂ ಅನುರಕ್ತರಾಗಿ ಮಹಿಷ ಜನನವಾಯಿತು. ಮುಂದೆ ಮಹಿಷಾಸುರ ಅಸುರೇಂದ್ರನಾಗಿ ಮೆರೆದ._
 
_ಲೋಕ ಕಂಟಕನಾದ ದಾನವ ಮಹಿಷನ ಅಸುರೀ ಪ್ರವೃತ್ತಿಗೆ ಬೇಸತ್ತು, ಹರಿ-ಹರ ಬ್ರಹ್ಮ ಸರ್ವ ಸುರಾದಿ ದೇವತೆಗಳು ದೇವಿಯ ಬಳಿ ತಮ್ಮ ಅಳಲನ್ನು ತೋಡಿಕೊಂಡು ಆತನ ಸಂಹಾರಕ್ಕಾಗಿ ಪ್ರಾರ್ಥಿಸಿದಾಗ ಮಹಾಶಕ್ತಿಯು ಅಭಯ ಸ್ವರೂಪಿಣಿಯಾಗಿ ಆವಿರ್ಭವಿಸಲು ತೇಜೋಮಯವಾದ ರೌದ್ರ ಸ್ತ್ರೀ ರೂಪವೊಂದು ಗೋಚರಿಸಿತು. ಆಕೆಯೇ ಮಹಿಷ ಮರ್ದಿನಿ._
 
_ಶಂಖ ಚಕ್ರ ಖಡ್ಗ ಪರಶು ಗದಾ ಧನೂರ್ಬಾಣ ಶೂಲವೇ ಮೊದಲಾದ ಸರ್ವಾಯುಧ ಪರಿಷ್ಕೃತಳಾಗಿ ಸಿಂಹರಾಜನನ್ನೇರಿ ದೇವತೆಗಳ ಮೊರೆಯನ್ನು ಅವಧರಿಸಿ ರೌದ್ರತ್ವದಿಂದ ಸರ್ವಶಕ್ತಿಮಯೆಯಾಗಿ ಅತ್ಯಂತ ಬಲಿಷ್ಠನಾದ ಮಹಿಷಾಸುರನನ್ನು ಹಾಗೆಯೇ ಆತನ ಭಯಂಕರ ಸೈನ್ಯವನ್ನು ಧ್ವಂಸಗೊಳಿಸಿ, ಕೋಣರೂಪದ ಭಯಾನಕ ಮಹಿಷನನ್ನು ಸಂಹರಿಸಿ ಎಲ್ಲೆಡೆ ಆನಂದವನ್ನು ಮೇಳೈಸುತ್ತಾಳೆ. ಸುಖ ಶಾಂತಿಯನ್ನು ಧಾರೆಗೈದು ಸುರಲೋಕದ ರಕ್ಷಣೆಗೆ ಕಾರಣೀ ಕರ್ತೃಳಾಗುತ್ತಾಳೆ._
 
_ಶರಣಾಗಿಯ ಸುರಲೋಕದ ಭಯ ನೀಗಿಸೆ ಮಹಿಷನ ಪ್ರಾಣ ಹರಣಗೈದು ಸಂಹರಿಸಿದ ಕಲ್ಪೋಕ್ತದ ದುರ್ಗೆಯ ಆರನೇಯ ಅತೀ ರೌದ್ರ ಸ್ವರೂಪವೇ ΨΨ ಮಹಿಷಮರ್ದಿನಿ ΨΨ_☀️